ಶಿವಮೊಗ್ಗ(ಆ.17):  ಜಿಲ್ಲೆಯಾದ್ಯಂತ ಕಳೆದೊಂದು ವಾರದಿಂದ ಬಿಡುವು ನೀಡಿದ ವರ್ಷದಾರೆ ಮತ್ತೀಗ ಚುರುಕುಗೊಂಡಿದೆ. ಭಾನುವಾರ ಬೆಳಿಗ್ಗೆಯಿಂದಲೇ ಶಿವಮೊಗ್ಗ ಸೇರಿದಂತೆ ಜಿಲ್ಲೆಯ ವಿವಿಧೆಡೆ ಧಾರಾಕಾರ ಮಳೆಯಾಗಿದೆ. ಹೊಸನಗರ, ತೀರ್ಥಹಳ್ಳಿ ತಾಲೂಕಿನಲ್ಲಿ ಅತಿ ಹೆಚ್ಚು ಮಳೆ ಬೀಳುತ್ತಿರುವ ವರದಿಯಾಗಿದೆ. ಜಿಲ್ಲೆಯ ವಿವಿಧೆಡೆ ಒಂದೇ ಸಮನೆ ಬಿಟ್ಟು ಬಿಡದೆ ಮಳೆ ಸುರಿಯುತ್ತಿದೆ.

ತುಂಗಾ ಹಾಗೂ ಶರಾವತಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಆಗುಂಬೆ, ಹುಲಿಕಲ್‌, ಮಾಸ್ತಿಕಟ್ಟೆಮತ್ತಿತರೆಡೆ ಒಂದೇ ಸಮನೆ ಮಳೆಯಾಗುತ್ತಿರುವುದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.

ವ್ಯಾಪಕ ಮಳೆ: ತುಂಗಭದ್ರಾ ಭರ್ತಿಗೆ ಕ್ಷಣಗಣನೆ..

ಜಿಲ್ಲೆಯಲ್ಲೇ ಅತ್ಯದಿಕ ಮಳೆ ಹೊಸನಗರ ತಾಲ್ಲೂಕಿನಲ್ಲಿ ಬಿದ್ದಿದೆ. ಅಲ್ಲಿ ಸುಮಾರು 54.8 ಮಿ.ಮೀ ಮಳೆಯಾಗಿದೆ. ತೀರ್ಥಹಳಯಲ್ಲಿ 22.2 ಮಿ.ಮೀ. ಆಗಿದೆ. ಉಳಿದಂತೆ ಶಿವಮೊಗ್ಗ ತಾಲೂಕಿನಲ್ಲಿ 20.04 ಮಿ.ಮೀ., ಸೊರಬ ತಾಲೂಕಿನಲ್ಲಿ 14.2 ಮಿ.ಮೀ., ಸಾಗರ ತಾಲೂಕಿನಲ್ಲಿ, 13.2 ಮಿ.ಮೀ., ಶಿಕಾರಿಪುರದಲ್ಲಿ 7.4 ಮಿ.ಮೀ. ಹಾಗೂ ಭದ್ರಾವತಿ ತಾಲೂಕಿನಲ್ಲಿ 3.8 ಮಿ.ಮೀ. ಮಳೆಯಾಗಿರುವ ವರದಿಯಾಗಿದೆ.

ಸಚಿವರ ಚಪ್ಪಲಿ ಸೆಳೆದು ಹಿಂತಿರುಗಿಸಿದ ಸಮುದ್ರ!...

ಶಿವಮೊಗ್ಗ ನಗರ ಸೇರಿದಂತೆ ಹಲವೆಡೆ ಭಾನುವಾರ ಬೆಳಿಗ್ಗೆಯಿಂದಲೇ ಧಾರಾಕಾರ ಮಳೆಯಿಂದಾಗಿದೆ. ಒಂದೇ ಸಮನೆ ಮಳೆ ಸುರಿಯುತ್ತಿದ್ದ ಪರಿಣಾಮ ಜನರು ಮನೆಯಿಂದ ಹೊರ ಬರುವುದು ಕಷ್ಟವಾಗಿತ್ತು.

ಲಿಂಗನಮಕ್ಕಿ ಜಲಾಶಯದಲ್ಲಿ (1819 ಅಡಿ) ಪ್ರಸಕ್ತ 1796.49 ಭರ್ತಿಯಾಗಿದೆ. ಭದ್ರಾ ಜಲಾಶಯ (186 ಅಡಿ ) 177.10 ಅಡಿ ನೀರಿದೆ. ತುಂಗಾ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಜಲಾಶಯದಿಂದ 17986 ಕ್ಯುಸೆಕ್ನಷ್ಟುನೀರನ್ನು ಹೊರಬಿಡಲಾಗುತ್ತಿದೆ.