ಶಿವಮೊಗ್ಗ(ಜು.25): ಮಲೆನಾಡಿನ ಘಟ್ಟಪ್ರದೇಶದಲ್ಲಿ ಸಾಧಾರಣ ಮಳೆಯಾಗುತ್ತಿದ್ದು, ಬಯಲು ನಾಡಿನಲ್ಲಿ ಮಳೆ ಮಾಯವಾಗಿದೆ. ಹೊಸನಗರ ತಾಲೂಕಿನಲ್ಲಿ ಸ್ವಲ್ಪ ಮಳೆಯಾಗಿದ್ದರೆ, ತೀರ್ಥಹಳ್ಳಿ ಮತ್ತು ಸಾಗರದಲ್ಲಿ ಕಡಿಮೆ ಮಳೆಯಾಗಿದೆ.

ಹೊಸನಗರ ತಾಲೂಕಿನಲ್ಲಿ ಸ್ವಲ್ಪ ಮಳೆಯಾಗಿದ್ದರೆ, ತೀರ್ಥಹಳ್ಳಿ ಮತ್ತು ಸಾಗರದಲ್ಲಿ ಕಡಿಮೆ ಮಳೆಯಾಗಿದೆ. ಉಳಿದಂತೆ ಶಿವಮೊಗ್ಗ, ಭದ್ರಾವತಿ, ಸೊರಬ, ಶಿಕಾರಿಪುರದಲ್ಲಿ ಕನಿಷ್ಠ ಪ್ರಮಾಣದ ಮಳೆಯಾಗಿದೆ. ಲಿಂಗನಮಕ್ಕಿ ಜಲಾಶಯಕ್ಕೆ ಸುಮಾರು 18,544 ಸಾವಿರ ಕ್ಯುಸೆಕ್‌ ನೀರು ಹರಿದು ಬರುತ್ತಿದ್ದರೆ, ಭದ್ರಾ ಜಲಾಶಯಕ್ಕೆ 6091 ಸಾವಿರ ಮತ್ತು ತುಂಗಾ ಜಲಾಶಯಕ್ಕೆ 14582 ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಬುಧವಾರ ಬೆಳಗ್ಗೆ 8 ಗಂಟೆಗೆ ಕೊನೆಗೊಂಡಂತೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ಬಿದ್ದ ಮಳೆಯ ಪ್ರಮಾಣ ಈ ರೀತಿಯಿದೆ.

ಕರಾವಳಿಯಲ್ಲಿ ಇನ್ನೂ 4 ದಿನ ಭಾರೀ ಮಳೆ, 2 ದಿನ ರೆಡ್ ಅಲರ್ಟ್

ಶಿವಮೊಗ್ಗ - 3.40 ಮಿ.ಮೀ., ಭದ್ರಾವತಿ-5.20 ಮಿ.ಮೀ., ತೀರ್ಥಹಳ್ಳಿ - 38.40 ಮಿ.ಮೀ., ಸಾಗರ -25 ಮಿ.ಮೀ.,, ಶಿಕಾರಿಪುರ -2 ಮಿ.ಮೀ., ಸೊರಬ- 12ಮಿ.ಮೀ. ಹಾಗೂ ಹೊಸನಗರ 42.80 ಮಿ.ಮೀ. ಮಳೆಯಾಗಿದೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ