ಯಾದಗಿರಿಯಲ್ಲೊಂದು ಭಾರೀ ವಿಸ್ಮಯದ ಆತಂಕ : ಆಕಾಶದೆತ್ತರಕ್ಕೆ ಸುಳಿಗಾಳಿ
ಯಾದಗಿರಿಯಲ್ಲಿ ಕಳೆದ ಕೆಲದಿನಗಳಿಂದ ಭಾರಿ ಪ್ರಮಾಣದಲ್ಲಿ ಮಲೆ ಸುರಿಯುತ್ತಿದ್ದು ಇದರಿಂದ ಜನಜೀವನ ತೀವ್ರ ಆತಂಕಗೊಂಡಿದೆ.
ಯಾದಗಿರಿ (ಅ.15): ಶಹಾಪೂರ ತಾಲೂಕಿನ ಅಣಬಿ ಗ್ರಾಮದಲ್ಲಿ ಮಂಗಳವಾರ ಸಂಜೆ ಕಂಡ ಆಕಾಶದೆತ್ತರದ ಸುಳಿಗಾಳಿ ಎಲ್ಲರಲ್ಲಿ ಆತಂಕ ಮೂಡಿಸಿತ್ತು. ಇದೇ ಮೊದಲ ಬಾರಿಗೆ ಇಂತಹುದ್ದೊಂದು ಅಚ್ಚರಿ ಕಂಡ ಗ್ರಾಮಸ್ಥರು ಮೊಬೈಲ್‌ಗಳಲ್ಲಿ ಸೆರೆ ಹಿಡಿದು ಪ್ರಕೃತಿ ವಿಕೋಪದ ಬಗ್ಗೆ ಆತಂಕ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಚಿನ್ನದ ನಾಣ್ಯದ ಮಳೆ, ಜನರ ನೂಕು ನುಗ್ಗಲು! ..
ಮಲ್ಹಾರ್ ಗ್ರಾಮದಲ್ಲಿ ರಾತ್ರಿ ಸುರಿದ ಮಳೆಗೆ ಮನೆ ಬಿದ್ದಿದ್ದರಿಂದ ಅತಂತ್ರವಾದ ನಿವಾಸಿ ವೃದ್ಧೆ ಶರಣಮ್ಮ, ಪಕ್ಕದ ಮನೆಯಲ್ಲಿ ಆಶ್ರಯ ಪಡೆದು ತನಗಾದ ನೋವಿನ ಬಗ್ಗೆ ತಹಸೀಲ್ದಾರ್‌ಗೆ ವೀಡಿಯೋ ಮೂಲಕ ಸಂದೇಶ ಕಳುಹಿಸಿ ಅಲವತ್ತುಕೊಂಡರು.
ಶೇ.47ರಷ್ಟುಹೆಚ್ಚು ಮಳೆ:
ಜಿಲ್ಲೆಯಲ್ಲಿ ಸೆಪ್ಟೆಂಬರ್‌ನಲ್ಲಿ ವಾಡಿಕೆ ಮಳೆ 161 ಮಿ.ಮೀ. ಇದ್ದರೆ 236 ಮಿ.ಮೀ. ಮಳೆ ಸುರಿದಿದ್ದು, ಶೇ.47 ರಷ್ಟುಹೆಚ್ಚು ಮಳೆ ದಾಖಲಾಗಿತ್ತು. ಅ.7ರಿಂದ 13ರವರೆಗೆ ವಾಡಿಕೆ ಮಳೆ 28 ಮಿ.ಮೀ ಇದ್ದರೆ, 44 ಮಿ.ಮೀ ಮಳೆ ಸುರಿದು ಶೇ.55ರಷ್ಟುಸುರಿದಿದೆ. ಅ.12 ಬೆಳಿಗ್ಗೆ 8.30ರಿಂದ ಅ.13ರ ಬೆಳಿಗ್ಗೆ 8.30 ರವರೆಗೆ 4 ಮಿ.ಮೀ. ವಾಡಿಕೆ ಮಳೆಯಿದ್ದರೆ 11 ಮಿ.ಮೀ ಮಳೆ ಸುರಿದಿದ್ದು ಶೇ.177ರಷ್ಟುಹೆಚ್ಚಳ ಮಳೆಯಾಗಿದೆ.