ಮಂಗಳೂರು(ಮೇ.02): ಗುರುವಾರ ಸಂಜೆ ಸುರಿದ ಭಾರಿ ಗಾಳಿ ಮಳೆಗೆ ಬೆಳ್ತಂಗಡಿ ತಾಲೂಕಿನ ವಿವಿಧೆಡೆ ಅಡಿಕೆ ಮರ ಸಹಿತ ವಿದ್ಯುತ್‌ ಕಂಬಗಳು ಧರೆಗುರುಳಿ ಅಪಾರ ಹಾನಿ ಸಂಭವಿಸಿದೆ.

ಮೇಲಂತಬೆಟ್ಟು ಗ್ರಾಮದಲ್ಲಿ ಗಾಳಿ ಮಳೆಗೆ ಜಿ.ಪಂ. ಮಾಜಿ ಸದಸ್ಯ ಶೈಲೇಶ್‌ ಕುರ್ತೋಡಿ ಅವರ ಹಟ್ಟಿಗೆ ವಿದ್ಯುತ್‌ ಕಂಬ ಬಿದ್ದು ಹಾನಿಯಾಗಿದೆ. ಅಡಿಕೆ ಗಿಡಗಳು ಧರಾಶಾಹಿಯಾಗಿದೆ. ಸುತ್ತಮುತ್ತ ಅಡ್ಕದ ಬೈಲು, ಮೂಡಲ, ನಡ್ವಡ್ಕ, ಮಿತ್ತಡ್ಕ, ಕೆಳಗಿನ ಅಡ್ಕ ಸುತ್ತಮುತ್ತ 80 ಕ್ಕೂ ಅಧಿಕ ಅಡಿಕೆ ಗಿಡಗಳು ಗಾಳಿಗೆ ಬುಡಸಮೇತ ಧರೆಗುರುಳಿದೆ.

ಲಾಕ್‌ಡೌನ್‌ ಮಧ್ಯೆ ವೇತನ ಏರಿಕೆ: ಡಿಪ್ಲೋಮಾ ಕಾಲೇಜು ಬೋಧಕರಿಂದಲೇ ಅಸಮಾಧಾನ!

ಉಜಿರೆ ಪೇಟೆ ಸಮೀಪ ಪಕ್ಕದ ಕಲ್ಲೆ ಎಂಬಲ್ಲಿ ತೆಂಗಿನ ಮರಕ್ಕೆ ಸಿಡಿಲು ಬಡಿದು ನಷ್ಟಉಂಟಾಗಿದೆ. ಕಲ್ಲೆಯ ಗಣೇಶ್‌ ನಾಯ್‌್ಕ ಅವರ ಮನೆಗೆ ಸಿಡಿಲು ಬಡಿದು ವಿದ್ಯುತ್‌ ಸಂಪರ್ಕ ಸುಟ್ಟು ಹೋಗಿದೆ.

ದಕ್ಷಿಣ ಕನ್ನಡದ ವಿವಿಧೆಡೆ ಭಾರೀ ಮಳೆ..!

ಸ್ವಿಚ್‌ ಬೋರ್ಡ್‌ಗಳು, ಉಪಕರಣಗಳು ಹಾನಿಗೀಡಾಗಿವೆ. ಅಜಿತ್‌ ನಗರದಲ್ಲಿ ನೀಲಯ್ಯ ನಾಯ್ಕ ಅವರ ತೆಂಗಿನ ಮರಕ್ಕೂ ಸಿಡಿಲು ಬಡಿದಿದೆ. ನಡ ಗ್ರಾಮದ ನಡಬೈಲು ಶ್ರೀಧರ ಆಚಾರ್ಯ ಅವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ.

ತಾಲೂಕಿನ ಮೇಲಂತಬೆಟ್ಟು ಇಳಂತಿಲ, ಕಣಿಯೂರು ಸಮೀಪದ ಮಾವಿನಕಟ್ಟೆಪರಿಸರ ಸೇರಿದಂತೆ ಒಟ್ಟು 15ಕ್ಕೂ ಅಧಿಕ ವಿದ್ಯುತ್‌ ಕಂಬಗಳು ನೆಲಕ್ಕುರುಳಿ ವಿದ್ಯುತ್‌ ಸಂಪರ್ಕಕ್ಕೆ ಅಡಚಣೆ ಯಾಗಿದೆ.