ದಕ್ಷಿಣ ಕನ್ನಡದ ವಿವಿಧೆಡೆ ಭಾರೀ ಮಳೆ..!

First Published 1, May 2020, 3:15 PM

ದಕ್ಷಿಣ ಕನ್ನಡದ ಉಪ್ಪಿನಂಗಡಿ, ನೆಕ್ಕಿಲಾಡಿ, ಇಳಂತಿಲ ಮತ್ತಿತರ ಪ್ರದೇಶದಲ್ಲಿ ಸುರಿದ ಭಾರಿ ಗಾಳಿ, ಮಳೆಗೆ ಹಲವು ಮನೆಗಳು, ವಿದ್ಯುತ್‌ ಕಂಬಗಳು, ಕೃಷಿ ಬೆಳೆಗಳು ಹಾನಿಗೀಡಾಗಿ ಲಕ್ಷಾಂತರ ರುಪಾಯಿ ನಷ್ಟಸಂಭವಿಸಿದೆ. ಮಳೆಯ ಫೋಟೋಸ್ ಇಲ್ಲಿದೆ

ದಕ್ಷಿಣ ಕನ್ನಡದ ವಿವಿಧ ಭಾಗಗಳಲ್ಲಿ ಗುರುವಾರ ಭಾರೀ ಮಳೆಯಾಗಿದೆ.

ಉಪ್ಪಿನಂಗಡಿ, ನೆಕ್ಕಿಲಾಡಿ, ಇಳಂತಿಲ ಮತ್ತಿತರ ಪ್ರದೇಶದಲ್ಲಿ ಸುರಿದ ಭಾರಿ ಗಾಳಿ, ಮಳೆಗೆ ಹಲವು ಮನೆಗಳು, ವಿದ್ಯುತ್‌ ಕಂಬಗಳು, ಕೃಷಿ ಬೆಳೆಗಳು ಹಾನಿಗೀಡಾಗಿ ಲಕ್ಷಾಂತರ ರುಪಾಯಿ ನಷ್ಟಸಂಭವಿಸಿದೆ.

ಗಾಳಿ ಸಹಿತ ಮಳೆಗೆ ಕರೆಂಟ್ ಕಂಬಗಳೂ, ಮರಗಳೂ ಧರೆಗುರುಳಿರುವುದು

ರಥಬೀದಿಯಲ್ಲಿನ ಲಕ್ಷ್ಮೇವೆಂಕಟರಮಣ ದೇವಾಲಯದ ಕಲ್ಯಾಣ ಮಂಟಪ, ಗಣಪತಿ ಮಠ, ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ನೌಕರರ ವಸತಿ ಗೃಹ, ಪಿಂಡ ಪ್ರಧಾನ ಕಟ್ಟಡ, ಪಾಕಶಾಲೆ, ಕೆ. ಜಗದೀಶ್‌ ಶೆಟ್ಟಿಕಟ್ಟಡ ಸೇರಿದಂತೆ ಪರಿಸರದ ಹಲವು ಕಟ್ಟಡಗಳು ಭಾಗಶಃ ಹಾನಿಗೀಡಾಗಿವೆ.

ಇಳಂತಿಲದಲ್ಲಿ ಗಾಳಿಮಳೆಗೆ ಮರಗಳು ಉರುಳಿ ಬಿದ್ದಿದ್ದು, 6 ವಿದ್ಯುತ್‌ ಕಂಬಗಳು ತುಂಡಾಗಿದೆ. ಒಂದು ವಿದ್ಯುತ್‌ ಪರಿವರ್ತಕ ಸಂಪೂರ್ಣ ಹಾನಿಗೀಡಾಗಿದೆ.

ಇದೇ ಗ್ರಾಮದ ಬನ್ನೆಂಗಳ ಎಂಬಲ್ಲಿ ವಿಜಯ ರಾಮಕೃಷ್ಣ ಎಂಬವರ ಮನೆಗೆ ಸಿಡಿಲು ಬಡಿದು ಮನೆ ಸಂಪೂರ್ಣ ಹಾನಿಗೀಡಾಗಿದೆ. ಪರಿಸರದಲ್ಲಿ ಕೃಷಿ ಬೆಳೆಗಳು ಬಿರುಗಾಳಿಗೆ ಸಿಲುಕಿ ನೆಲಕಚ್ಚಿವೆ.

ಬೆಳ್ತಂಗಡಿ ತಾಲೂಕಿನ ಕೊಯ್ಯೂರು, ಧರ್ಮಸ್ಥಳ, ಉಜಿರೆ ಸುತ್ತಮುತ್ತ ಬಿರುಗಾಳಿ ಬೀಸಿದೆ.

ಹಲವು ಮರಗಳು, ವಿದ್ಯುತ್‌ ಕಂಬಗಳು ಧರಾಶಾಹಿಯಾಗಿದೆ. ಪುತ್ತೂರು, ಸುಳ್ಯ ತಾಲೂಕುಗಳಲ್ಲಿ ಸುರಿದ ಭಾರಿ ಮಳೆಗೆ ಹಲವೆಡೆ ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ.

ಮನೆಯಂಗಳದಲ್ಲಿ ಮಳೆ ನೀರಿನ ಹರಿವು

ಮನೆಯಂಗಳದಲ್ಲಿ ಮಳೆ ನೀರಿನ ಹರಿವು

loader