ಬೆಳಗಾವಿ [ಜೂ.20] : ಬೆಳಗಾವಿ ಜಿಲ್ಲೆಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗಿದೆ. ಇಷ್ಟು ದಿನಗಳ ಬಿಸಿಲ ಬೇಗೆಯಿಂದ ಕಂಗೆಟ್ಟಿದ್ದ ಸವದತ್ತಿಯ ಜನತೆಗೆ ವರ್ಷಧಾರೆ ತಂಪೆರೆದಿದೆ.

ಸವದತ್ತಿ ಯಲ್ಲಮ್ಮ‌‌ ಸನ್ನಿದಿಯಲ್ಲಿ ಧಾರಾಕಾರ ಮಳೆಯಾಗಿದೆ.  ಅತೀ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದ ಪರಿಣಾಮ ಎಲ್ಲೆಡೆ ನದಿಯಂತೆ ನೀರಿನ ಹರಿವು ಹೆಚ್ಚಳವಾಗಿದೆ.

ಕೊಡಗಿನಲ್ಲಿ ಮಳೆಗಾಲದಲ್ಲಿ ಈ ವಾಹನಗಳಿಗೆ ನಿಷೇಧ

ಬೇಸಿಗೆಯಿಂದ ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ಈ ಪ್ರದೇಶಗಳಲ್ಲಿ ಎದುರಾಗಿದ್ದು, ಆದರೆ ಇದೀಗ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಭಾರೀ ಮಳೆಯಿಂದಾಗಿ ಯಲ್ಲಮ್ಮ ದೇವಾಲಯದ ಕೋಡಿ ತುಂಬಿ ಹರಿದಿದೆ.

ಮಾನ್ಸೂನ್ ಶುರುವಾಗ್ತಿದೆ , ಆರೋಗ್ಯ ಹೇಗ್ ನೋಡ್ಕೊಬೇಕು?