ಕಲಬುರಗಿ [ಮಾ.09]: ಬಿಸಿಲು ಹೆಚ್ಚುತ್ತಿರುವ ಬೆನ್ನಲ್ಲೇ ರಾಜ್ಯದ ಹಲವು ಪ್ರದೇಶಗಳಲ್ಲಿ ಮಳೆಯೂ ಸುರಿಯುತ್ತಿದೆ. 

ಉತ್ತರ ಕರ್ನಾಟಕದಲ್ಲಿ ನಡೆದಾಡುವ ದೇವತೆ ಎಂದೇ ಖ್ಯಾತಿ ಪಡೆದಿರುವ ಮಾತೇ ಮಾಣಿಕೇಶ್ವರಿ ಲಿಂಗೈಕ್ಯರಾಗಿದ್ದು,  ಸನ್ನಿಧಿಯಲ್ಲಿ ಭಾರೀ ಮಳೆಯಾಗುತ್ತಿದೆ. 

ಇಂದು ಮಧ್ಯಾಹ್ನದ ವೇಳೆಗೆ ಮಾಣಿಕೇಶ್ವರಿ ಅಂತ್ಯ ಸಂಸ್ಕಾರ ನೆರವೇರಲಿದ್ದು, ಭಾರಿ ಮಳೆ ನಡುವಲ್ಲಿಯೂ ಭಕ್ತರು ನಿರಂತರ ಭಜನೆ ಮಾಡುತ್ತಿದ್ದಾರೆ. 

‘ನಾನೂ ಪುನರ್ಜನ್ಮ ಪಡೆದು ಬರುವೆ : ಮಾತೆ ಮಾಣಿಕೇಶ್ವರಿ ಭವಿಷ್ಯವಾಣಿಗಳಿವು'.

ರಾಜಗೋಪುರದಲ್ಲಿ ಮಾಣಿಕೇಶ್ವರಿ ಪಾರ್ಥಿವ ಶರೀರ ಇರಿಸಿ ಓಂ ನಮಃ ಶಿವಾಯ ಘೋಷಣೆ ಕೂಗಲಾಗುತ್ತಿದೆ. ಮಳೆಯಿಂದ ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ಭಕ್ತರು ಪರದಾಡುವಂತಾಗಿದೆ. 

ಮಾಣಿಕೇಶ್ವರಿ ಅಂತಿಮ ದರ್ಶನ ಪಡೆಯಲು ಭಕ್ತರ ದಂಡೇ ಆಗಮಿಸುತ್ತಿದದ್ದು, ಮಳೆಯಿಂದ ಪರದಾಡುವಂತಾಗಿದೆ.