ಶೃಂಗೇರಿ [ಫೆ.28]: ತಾಲೂಕಿನ ಪಟ್ಟಣದಲ್ಲಿ ಗುರುವಾರ ಮದ್ಯಾಹ್ನದ ವೇಳೆಯಲ್ಲಿ ಕೆಲಹೊತ್ತು ಉತ್ತಮ ಮಳೆ ಸುರಿಯಿತು. 

ಬೆಳಗ್ಗೆಯಿಂದ ಸುಡು ಬಿಸಿಲ ವಾತಾವರಣವಿತ್ತು. ಮಧ್ಯಾಹ್ನ ಮೋಡ ಕವಿದು ಇದ್ದಕ್ಕಿದ್ದಂತೆ ಧಾರಾಕಾರ ಮಳೆ ಸುರಿಯಲಾರಂಭಿಸಿತು.

ಸುಮಾರು ಅರ್ಧ ಗಂಟೆಗೂ ಅಧಿಕ ಹೊತ್ತು ಮಳೆ ಸುರಿಯಿತು. ರಸ್ತೆ, ಚರಂಡಿಯಲ್ಲಿ ನೀರು ಹರಿಯಲಾರಂಬಿಸಿತು. 

ದಕ್ಷಿಣ ಕನ್ನಡದಲ್ಲಿ ಗುಡುಗು ಸಹಿತ ಭಾರೀ ಮಳೆ...

ಪಟ್ಟಣ ಸೇರಿದಂತೆ ದುರ್ಗಾ ದೇವಸ್ಥಾನ, ತ್ಯಾವಣ, ನೆಮ್ಮಾರು ಸೇರಿದಂತೆ ಗ್ರಾಮೀಣ ಪ್ರದೇಶದ ಕೆಲವೆಡೆ ಸಾಧಾರಣ ಮಳೆ ಸುರಿಯಿತು. ಇದು ವರ್ಷದ ಮಳೆಯಾಗಿದೆ. ಮಳೆಯಿಂದ ಸುಡುಬಿಸಿಲ ವಾತಾವರಣಕ್ಕೆ ಕೊಂಚ ತಂಪೆರೆದಂತಾಯಿತು.