ಚಾಮರಾಜನಗರ(ಜು.30): ಚಾಮರಾಜನಗರ ಜಿಲ್ಲಾದ್ಯಂತ ಬುಧವಾರ ಸಂಜೆ ಮಳೆಯಾಗಿದೆ. ಕಳೆದ ಕೆಲ ದಿನಗಳಿಂದ ಆಗಾಗ್ಗೆ ಮಳೆಯಾಗುತ್ತಿರುವುದರಿಂದ ಕೆಲ ಕಡೆ ರೈತರಿಗೆ ವರದಾನವಾಗಿದ್ದು, ಕೃಷಿ ಚಟುವಟಿಗಕೆ ಗರಿಗೆದರಿವೆ. ಇನ್ನು ಕೆಲವು ಕಡೆ ಬೆಳೆ ಕಟಾವಿಗೆ ಬಂದಿರುವುದರಿಂದ ಕಟಾವು ಮತ್ತು ಒಕ್ಕಣೆಗೆ ತೊಂದರೆಯಾಗಿದೆ.

ಜಿಲ್ಲಾ ಕೇಂದ್ರ ಚಾಮರಾಜನಗರದಲ್ಲಿ ಸಂಜೆ 5ರ ಬಳಿಕ ಶುರುವಾದ ಮಳೆ1 ತಾಸಿಗೂ ಹೆಚ್ಚು ಕಾಲ ಭಾರಿ ಮಳೆ ಸುರಿಯಿತು. ಸಂಜೆ 4 ಗಂಟೆ ಬಳಿಕ ಲೌಕ್‌ಡೌನ್‌ ಇರುವುರಿಂದ ವ್ಯಾಪಾರ ವಹಿವಾಟಿಗೆ ತೊಂದರೆಯಾಗಲಿಲ್ಲ. ಶುಕ್ರವಾರ ವರಮಹಾಲಕ್ಷಿ ್ಮ ಹಬ್ಬದ ಹಿನ್ನೆಲೆ ಬೆಳಗೆಯಿಂದಲೇ ಹೆಚ್ಚಿನ ದಟ್ಟಣೆ ಎಲ್ಲೆಡೆ ಕಂಡು ಬಂದಿತು.

ಸರಳವಾಗಿ ಹಾವು ಹಿಡಿಯೋದನ್ನು ಹೇಳ್ಕೊಟ್ರು ಪೇಜಾವರ ಶ್ರೀ..! ಇಲ್ನೋಡಿ ಫೋಟೋಸ್

ಆದರೆ, 4ರ ಬಳಿಕ ಲಾಕ್‌ಢೌನ್‌ ಹಿನ್ನೆಲೆ ಮಳೆಗೂ ಮುನ್ನ ಜನರು ಮನೆ ಸೇರಿಕೊಂಡರು. ನಂತರ ಭಾರಿ ಮಳೆ ಸುರಿದ ಪರಿಣಾಮ ರಸ್ತೆ ತುಂಬಾ ನೀರು ಹರಿಯುತ್ತಿದ್ದ ದ್ಯಶ್ಯ ಕಂಡು ಬಂದಿತು.

ಕಳೆದೆರಡು ದಿನಗಳಿಂದ ಉತ್ತಮ ಮಳೆಯಾಗುತ್ತಿರುವ ಬೆನ್ನಲೇ ಬುಧವಾರ ಸಂಜೆ ವೇಳೆಗೆ ಹನೂರು ಸೇರಿದಂತೆ ಲೊಕ್ಕನಹಳ್ಳಿ, ಪಿ.ಜಿ.ಪಾಳ್ಯ, ಒಡೆಯರಪಾಳ್ಯ ಇನ್ನಿತರೆ ಭಾಗದಲ್ಲಿ ಎಡೆಬಿಡದೆ ಸುರಿದ ಮಳೆಯಿಂದ ಇಳೆ ತಂಪೆರೆಯುವಂತೆ ಆಗಿತ್ತು. ಕೊಳ್ಳೇಗಾಲ, ಗುಂಡ್ಲುಪೇಟೆ ಮತ್ತು ಯಳಂದೂರು ತಾಲೂಕಿನ ಕೆಲವೆಡೆ ಮಳೆ ಸುರಿಯಿತು. ಹನೂರು ಭಾಗದಲ್ಲಿ ಗರಿಗೆದರಿದ ಕೃಷಿ ಚಟುವಟಿಕೆ ಹನೂರು ಕ್ಷೇತ್ರ ವ್ಯಾಪ್ತಿಯ ವಿವಿಧಡೆ ಕಳೆದೆರಡು ದಿನಗಳಿಂದ ಉತ್ತಮ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿವೆ.

ನಿಮ್ಮ ಇಮ್ಯುನಿಟಿ ಲೆವೆಲ್‌ ಎಷ್ಟಿದೆ? ರೋಗ ನಿರೋಧಕ ಶಕ್ತಿ ಕಡಿಮೆಯಾಗಿದ್ಯಾ, ಚೆಕ್‌ ಮಾಡ್ಕೊಳ್ಳಿ!

ಹನೂರು ಪಟ್ಟಣ ಸೇರಿದಂತೆ ಈ ಭಾಗದ ಗ್ರಾಮಗಳಲ್ಲಿ ಕೆಲವಡೆ ಧಾರಾಕಾರ ಮಳೆಯಾದರೆ ಕೆಲವಡೆ ಸಾಧಾರಣ ಮಳೆಯಾಗಿದ್ದು, ರೈತರ ಮೊಗದಲ್ಲಿ ಸಂತಸವನ್ನು ತಂದಿದೆ.ಹದವಾದ ಮಳೆಯಾದ ಹಿನ್ನಲೆಯಲ್ಲಿ ರಾಗಿ, ಮುಸುಕಿನ ಜೋಳ, ನೆಲೆಗಡಲೆ ಬಿತ್ತನೆಯನ್ನು ಮಾಡಲಾಗುತ್ತಿದೆ.

ಬಿತ್ತನೆ ಬೀಜಕ್ಕಾಗಿ ಮುಗಿ ಬಿದ್ದ ರೈತರು

ಹದವಾದ ಮಳೆಯಾದ ಹಿನ್ನೆಲೆಯಲ್ಲಿ ಕ್ಷೇತ್ರ ವ್ಯಾಪ್ತಿಯ ವಿವಿಧ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರು ಬಿತ್ತನೆ ಬೀಜ ಪಡೆಯಲು ಸರತಿ ಸಾಲಿನಲ್ಲಿ ಮುಗಿ ಬಿದ್ದಿದ್ದರು. ಹನೂರು ಹಾಗೂ ರಾಮಾಪುರ ರೈತ ಸಂಪರ್ಕ ಕೇಂದ್ರಗಳಲ್ಲಿ ಕೊರೋನಾ ಸೋಂಕಿನ ಭೀತಿ ಸಂದರ್ಭದಲ್ಲೂ ರೈತರು ಬಿತ್ತನೆ ಬೀಜಗಳನ್ನು ಪಡೆದು ತೆರಳಿದರು.