ಸರಳವಾಗಿ ಹಾವು ಹಿಡಿಯೋದನ್ನು ಹೇಳ್ಕೊಟ್ರು ಪೇಜಾವರ ಶ್ರೀ..! ಇಲ್ನೋಡಿ ಫೋಟೋಸ್
ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥರು 5 ದಿನಗಳ ಹಿಂದೆ ತಮ್ಮ ಗೋಶಾಲೆಗೆ ಬಂದ ಹಾವೊಂದನ್ನು ಅತ್ಯಂತ ಸರಳವಾಗಿ, ಗಾಯವಾದಗಂತೆ, ಹಿಡಿಯುವವರಿಗೂ ಅಪಾಯವಾಗದಂತೆ ಹಿಡಿಯುವ ಉಪಾಯವೊಂದನ್ನು ಹೇಳಿಕೊಟ್ಟವಿಡಿಯೋ ಇದೀಗ ಎಲ್ಲಾ ಗ್ರೂಪ್‌ಗಳಲ್ಲಿ ವೈರಲ್ ಆಗಿದ್ದು, ಶ್ಲಾಘನೆಗೆ ಪಾತ್ರವಾಗುತ್ತಿದೆ. ಇಲ್ಲಿವೆ ಫೋಟೋಸ್
ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥರು 5 ದಿನಗಳ ಹಿಂದೆ ತಮ್ಮ ಗೋಶಾಲೆಗೆ ಬಂದ ಹಾವೊಂದನ್ನು ಅತ್ಯಂತ ಸರಳವಾಗಿ, ಗಾಯವಾದಗಂತೆ, ಹಿಡಿಯುವವರಿಗೂ ಅಪಾಯವಾಗದಂತೆ ಹಿಡಿಯುವ ಉಪಾಯವೊಂದನ್ನು ಹೇಳಿಕೊಟ್ಟವಿಡಿಯೋ ಇದೀಗ ಎಲ್ಲಾ ಗ್ರೂಪ್‌ಗಳಲ್ಲಿ ವೈರಲ್ ಆಗಿದ್ದು, ಶ್ಲಾಘನೆಗೆ ಪಾತ್ರವಾಗುತ್ತಿದೆ.
ಪೇಜಾವರ ಮಠದ ಆವರಣದಲ್ಲಿದ್ದ ಹಾವು
ನೀಲಾವರ ಗೋಶಾಲೆಯ ಪುಷ್ಕರಣಿಯ ಮೆಟ್ಟಿಲಗಳ ಮೇಲೆ ಹರಿಡಾದುತಿದ್ದ ಈ ಹಾವನ್ನು ಕಂಡ ಶ್ರೀಗಳು, ತೆಂಗಿನ ಹಸಿ ಗರಿಯೊಂದನ್ನು ಸೀಳಿ ಅದರ ಗರಿ ಭಾಗವನ್ನು ತೆಗೆದು, ಕೇವಲ ಕಡ್ಡಿಯಲ್ಲಿ ಉರುಳೊಂದನ್ನು ಗಂಟು ಹಾಕುತ್ತಾರೆ.
ನಂತರ ಅದನ್ನು ಹರಿಡಾಡುತಿದ್ದ ಹಾವಿನ ಎದುರು ಹಿಡಿಯುತ್ತಾರೆ, ಉರುಳೊಳಗೆ ಹೊಕ್ಕ ಹಾವ ಮುಂದಕ್ಕೆ ಸರಿಯುತಿದ್ದರೆ ಹೊಟ್ಟೆಗೆ ಉರುಳು ಬಿಗಿದುಕೊಳ್ಳುತ್ತದೆ.
ನಂತರ ಹಾವಿನ ಸಹಿತ ಗರಿ ತಂತಿಯನ್ನು ಎತ್ತಿ ಚೀಲಕ್ಕೆ ಹಾಕಿ, ಉರುಳನ್ನು ಬಿಡಿಸುತ್ತಾರೆ. ನಂತರ ಚೀಲದಲ್ಲಿದ್ದ ಹಾವನ್ನು ಅಲ್ಲಿಯೇ ಸಮೀಪದ ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದು ಮುಕ್ತಗೊಳಿಸುತ್ತಾರೆ.
ಸಾವಿರಾರು ಕಳ್ಳಸಾಗಣೆಯಾಗುತ್ತಿದ್ದ, ಅನಾಥ, ಗಾಯಗೊಂಡ, ವಯಸ್ಸಾದ ಗೋವುಗಳನ್ನು ಅತ್ಯಂತ ಪ್ರೀತಿಯಿಂದ ಸಾಕುತ್ತಿರುವ, ತಮ್ಮ ಮಠಕ್ಕೆ ಬಂದ ಗಾಯಗೊಂಡ ಗಿಡುಗಕ್ಕೆ ಚಿಕಿತ್ಸೆ ನೀಡಿದ, ವಿಷಕಾರಿ ಹಾವನ್ನು ರಕ್ಷಿಸಿ ಸುರಕ್ಷಿತವಾಗಿ ಪ್ರಕೃತಿ ಮಧ್ಯೆ ಬಿಟ್ಟವಿಡಿಯೋ ತುಣುಕು ವೈರಲ್ ಆಗಿದೆ.
ವೃತ್ತಿಪರ ಹಾವು ಹಿಡಿಯುವವರಿಗಿಂತಲೂ ಸಲೀಸಾಗಿ ಮತ್ತು ಸರಳವಾಗಿ ಶ್ರೀಗಳು ಹಾವು ಹಿಡಿಯುವದರ ಜೊತೆಗೆ ಅವರ ಪ್ರತ್ಯಕ್ಷ ವಿವರಣೆಯನ್ನೂ ಕೊಟ್ಟಿದ್ದಾರೆ. ತಿಂಗಳ ಹಿಂದೆ ಇಲ್ಲಿಯೇ ಹೆಬ್ಬಾವಿನ ಮರಿಯೊಂದನ್ನು ಪೈಪೊಂದರೊಳಗೆ ಬಂಧಿಸಿ ರಕ್ಷಿಸಿದ್ದರು. ಶ್ರೀಗಳ ಈ ಕಾಳಜಿಯ ಜೊತೆಗೆ ಅವರ ಸರಳ ವಿಧಾನಗಳ ಬಗ್ಗೆ ಸಾಮಾಜಿತ ಜಾಲತಾಣಗಳಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.