ಭಾರಿ ಮಳೆಗೆ ಕುಸಿದ ಹಂಪಿಯ ಸಾಲು ಮಂಟಪ
ಉತ್ತರ ಕರ್ನಾಟಕದಲ್ಲಿ ಮತ್ತೆ ಮಳೆಯ ಆರ್ಭಟ ಮುಂದುವರಿದಿದ್ದು, ಹಂಪಿಯ ಸಾಲು ಮಂಟವು ಮಳೆಯಿಂದ ಕುಸಿದು ಬಿದ್ದಿದೆ.
ಹೊಸಪೇಟೆ (ಸೆ.29): ಕಳೆದ ಮೂರು ದಿನಗಳಿಂದ ಸತತ ಸುರಿದ ಮಳೆಗೆ ಹಂಪಿಯ ವಿಜಯ ವಿಠ್ಠಲ್ ದೇಗುಲದ ಪಕ್ಕದ ಐತಿಹಾಸಿಕ ಸಾಲು ಮಂಟಪ ಕುಸಿದು ಬಿದ್ದಿದೆ. ಈ ಮಂಟಪ ಜೀರ್ಣೋದ್ಧಾರ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಹಂಪಿಯಲ್ಲಿ ಕಳೆದ ಮೂರು ದಿನಗಳಿಂದ ತುಂತುರು ಮಳೆ ಸುರಿದಿತ್ತು. ಮಣ್ಣು ಸರಿದು ಮಂಟಪ ಕುಸಿದಿದೆ. ತಿಂಗಳಲ್ಲೇ ಮಳೆಗೆ ಹಂಪಿಯಲ್ಲಿ ಎರಡ್ಮೂರು ಮಂಟಪಗಳು ಬಿದ್ದಿವೆ. ಈ ಹಿಂದೆ ಹಂಪಿಯ ಶ್ರೀ ವಿರೂಪಾಕ್ಷೇಶ್ವರ ರಥ ಬೀದಿಯಲ್ಲಿ ಮಂಟಪದ ಚಾವಣಿ ಕುಸಿದು ಬಿದ್ದಿತ್ತು.
ಎದುರು ಬಸವಣ್ಣ ಮಂಟಪದ ಬಳಿಯ ಮಂಟಪವೊಂದು ಉರುಳಿ ಬಿದ್ದಿತ್ತು. ಹಂಪಿಯಲ್ಲಿ ಮಳೆಗೆ ಮಂಟಪಗಳು ಉರುಳಿ ಬೀಳುತ್ತಿದ್ದು, ಭಾರತೀಯ ಪುರಾತತ್ವ ಇಲಾಖೆ ಮಂಟಪಗಳ ಸಂರಕ್ಷಣೆಗೆ ಒತ್ತು ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಹಂಪಿಗೆ ಡಬಲ್ ಡೆಕ್ಕರ್ ಬಸ್!300 ರು. ಫಿಕ್ಸ್ .
.ಉತ್ತರ ಕರ್ನಾಟಕದಲ್ಲಿ ಕಳೆದ ಹಲವು ದಿನಗಳಿಂದಲೂ ವರುಣ ಅಬ್ಬರಿಸುತ್ತಿದ್ದು ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಭಾರೀ ಪ್ರಮಾಣದಲ್ಲಿ ಸುರಿಯುತ್ತಿರುವ ಮಳೆಯಿಂದ ಇಲ್ಲಿನ ಜನಜೀವನ ಅಸ್ತವ್ಯಸ್ತವಾಗಿದೆ. ಜನರು ಮನೆಗಳನ್ನು ಬೆಳೆಗಳನ್ನು ಕಳೆದುಕೊಂಡು ತೀವ್ರ ಸಂಖಷ್ಟ ಎದುರಿಸುತ್ತಿದ್ದಾರೆ.