Asianet Suvarna News Asianet Suvarna News

ಕೊಡಗು: ಭಾರೀ ಮಳೆಗೆ ಜಲದಿಗ್ಭಂದನ, ಪ್ರಾಣ ಒತ್ತೆಯಿಟ್ಟು ತೆಪ್ಪದಲ್ಲಿ ಜನರ ಸಾಗಿಸುವ ಸ್ಥಳೀಯ ಯುವಕರು

ಕೊಡಗು ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಧಾರಾಕಾರ ಮಳೆ ಮುಂದುವರಿದಿದ್ದು, ಭಾರಿ ಮಳೆಗೆ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ.

heavy rain in Kodagu local youth rescued people gow
Author
First Published Jul 24, 2023, 10:03 PM IST

ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಜು.24): ಕೊಡಗು ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಧಾರಾಕಾರ ಮಳೆ ಮುಂದುವರಿದಿದ್ದು, ಭಾರಿ ಮಳೆಗೆ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ಹೀಗಾಗಿ ಕಾವೇರಿ ಪ್ರತಾಪಕ್ಕೆ ಸಿಲುಕಿದ ಚೆರಿಯಪರಂಬು ಗ್ರಾಮದ ಜನರು ಆತಂಕದಲ್ಲಿ ಕಾಲ ಕಳೆಯುವಂತೆ ಆಗಿದೆ. ಗ್ರಾಮದಲ್ಲಿ 100 ಕ್ಕೂ ಹೆಚ್ಚು ಕುಟುಂಬಗಳಿದ್ದು, ಎಲ್ಲರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಂದೆಡೆ ಕಲ್ಲು ಮೊಟ್ಟೆಯ ಭಾಗದಲ್ಲಿ ಚೆರಿಯಪರಂಬು ಗ್ರಾಮಕ್ಕೆ ಕಾವೇರಿ ನದಿ ಜಲದಿಗ್ಭಂದನ ಮಾಡಿದ್ದರೆ, ಇತ್ತ ನಾಪೋಕ್ಲು ಭಾಗದಿಂದಲೂ ಕಾವೇರಿ ನದಿ ಗ್ರಾಮವನ್ನು ಸುತ್ತುವರಿದಿದೆ. ಮಗದೊಂದೆಡೆ ಗ್ರಾಮ ಒಂದು ಭಾಗದಲ್ಲಿ ತಗ್ಗು ಪ್ರದೇಶದ ಹೊಲಗದ್ದೆಗಳಿದ್ದು ಹತ್ತು ಅಡಿಗೂ ಹೆಚ್ಚು ಪ್ರವಾಹದ ನೀರು ಹರಿಯುತ್ತಿದೆ. ಶಾಲೆ, ಹಾಸ್ಟೆಲ್ ಸೇರಿಗಳು ಇದ್ದು ಎಲ್ಲವೂ ಜಲಾವೃತವಾಗಿವೆ.

Bengaluru: ವಿದ್ಯಾರ್ಥಿ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿಲ್ಲ, ಪಿಇಎಸ್‌ ವಿಶ್ವವಿದ್ಯಾಲಯ ಸ್ಪಷ್ಟನೆ

ಇನ್ನು ಇಲ್ಲಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣವೂ ಸಂಪೂರ್ಣ ಜಲಾವೃತವಾಗಿದೆ. ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳು ಬಂದ್ ಆಗಿದ್ದು ಕನಿಷ್ಠ ಬೋಟ್ ವ್ಯವಸ್ಥೆ ಇಲ್ಲ. ಹೀಗಾಗಿ ಸೊಂಟದ ಮಟ್ಟಕ್ಕೆ ತುಂಬಿ ಹರಿಯುತ್ತಿರುವ ಕಾವೇರಿ ನದಿ ಪ್ರವಾಹದ ನೀರಿನಲ್ಲೇ ಜನರು ತಮಗೆ ಬೇಕಾಗಿರುವ ಅಗತ್ಯ ವಸ್ತುಗಳ ಸಾಗಿಸುತ್ತಿದ್ದಾರೆ. ಕಳೆದ ಹಲವು ವರ್ಷಗಳಿಂದ ಪ್ರತೀ ಮಳೆಗಾಲದಲ್ಲಿ ಈ ಸಮಸ್ಯೆ ಎದುರಾದರೂ ಕೂಡ ಬೋಟ್ ಒದಗಿಸುವುದಾಗಲೀ ಅಥವಾ ರಸ್ತೆಯನ್ನು ಎತ್ತರಿಸವು ಕೆಲಸವನ್ನಾಗಲಿ ಮಾಡದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮತ್ತೊಂದೆಡೆ ಕಾವೇರಿ ನದಿ ಪ್ರವಾಹದ ರೂಪಕ್ಕೆ ನದಿ ಪಾತ್ರದ ಗ್ರಾಮಗಳು ಜಲಾವೃತವಾಗುತ್ತಿದ್ದು, ಮಡಿಕೇರಿ ತಾಲ್ಲೂಕಿನ ನಾಪೋಕ್ಲು ಸಮೀಪದ ಕಲ್ಲುಮೊಟ್ಟೆ ಪೈಸಾರಿ ಗ್ರಾಮವೂ ಪ್ರವಾಹಕ್ಕೆ ತುತ್ತಾಗುತ್ತಿದೆ. ಚೆರಿಯಪರಂಬುವಿನಿಂದ ಕಲ್ಲುಮೊಟ್ಟೆಗೆ ಹೋಗಬೇಕಾದರೆ 10 ಅಡಿಯಷ್ಟು  ಆಳದ ತಗ್ಗು ಪ್ರದೇಶದ ರಸ್ತೆ ಇದ್ದು, 200 ಮೀಟರ್ನಷ್ಟು ದೂರದ ರಸ್ತೆ ಜಲಾವೃತಗೊಂಡಿದೆ. 70 ಕ್ಕೂ ಹೆಚ್ಚು ಕುಟುಂಬಗಳಿರುವ ಕಲ್ಲುಮೊಟ್ಟೆ ಗ್ರಾಮಕ್ಕೆ ತೆರಳಬೇಕಾದರೆ ಈ ಪ್ರವಾಹದ ನೀರನ್ನು ದಾಟಬೇಕಾಗಿದ್ದು, ಇದುವರೆಗೆ ಇಲ್ಲಿನ ಬೋಟ್ ವ್ಯವಸ್ಥೆ ಕೂಡ ಮಾಡಿಲ್ಲ. ಆದರೆ ಅನಿವಾರ್ಯವಾಗಿ ಜನರು ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಕಬ್ಬಿಣದ ತೆಪ್ಪವನ್ನು ಬಳಸಿ ಪ್ರವಾಹದ ನೀರನ್ನು ದಾಟುತ್ತಿದ್ದಾರೆ.

ಹತ್ಯೆ ಮಾಡಿ ಆತ್ಮಹತ್ಯೆಯೆಂದು ಬಿಂಬಿಸಿದ ಹಂತಕಿ ಪತ್ನಿ, ಅನೈತಿಕ ಸಂಬಂಧಕ್ಕೆ ಗಂಡನ ಮುಗಿಸಿದ

ಚೆರಿಯಪರಂಬು ಗ್ರಾಮದ ಯುವಕ ಸಿರಾಜ್ ಮತ್ತು ತಂಡ ಈ ತೆಪ್ಪದ ಮೂಲಕ ಜನರನ್ನು ಪ್ರವಾಹದ ನೀರನ್ನು ದಾಟಿಸುತ್ತಿದ್ದಾರೆ. ಹತ್ತು ಅಡಿಗೂ ಹೆಚ್ಚು ಎತ್ತರಕ್ಕೆ ಹರಿಯುತ್ತಿರುವ ಪ್ರವಾಹದ ನೀರಿನಲ್ಲಿ ತೆಪ್ಪದಲ್ಲಿ ಓಡಾಡುತ್ತಿದ್ದರೂ ಇಲ್ಲಿ ರಕ್ಷಣಾ ಸಿಬ್ಬಂದಿಯೂ ಇಲ್ಲ, ಬೋಟ್ ಕೂಡ ಇಲ್ಲ. ಕನಿಷ್ಠ ಲೈಫ್ ಜಾಕೆಟ್ ಕೂಡ ಇಲ್ಲದೆ ಜನರು ಓಡಾಟ ನಡೆಸುತ್ತಿದ್ದಾರೆ. ಕನಿಷ್ಠ ತೆಪ್ಪದ ವ್ಯವಸ್ಥೆಯನ್ನಾದರೂ ಮಾಡಲಿ ಎನ್ನುವುದು ಇಲ್ಲಿನ ಜನರ ಆಗ್ರಹ. ಮತ್ತೊಂದೆಡೆ ನಾಪೋಕ್ಲಿನಿಂದ ಮೂರ್ನಾಡಿಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಹಲವು ಕಡೆ ಕಾವೇರಿ ನದಿ ರಸ್ತೆ ಮೇಲೆ ಹರಿಯುತ್ತಿದೆ. ಇದರಿಂದ ಈ ಮಾರ್ಗದಲ್ಲಿರುವ ಹಲವು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ.

ಇನ್ನು ಸಿದ್ದಾಪುರ, ಕರಡಿಗೋಡು ಮತ್ತು ಕುಂಬಾರಗುಂಡಿ  ಸೇರಿದಂತೆ ಹಲವು ಗ್ರಾಮಗಳು ಪ್ರವಾಹದ ಭೀತಿ ಎದುರಿಸುತ್ತಿವೆ. ಇನ್ನು ಕುಶಾಲನಗರ ಭಾಗದಲ್ಲೂ ಕಾವೇರಿ ನದಿ ಹಲವು ಬಡಾವಣೆಗಳಿಗೆ ನುಗ್ಗುವ ಪರಿಸ್ಥಿತಿ ಎದುರಾಗಿದೆ. ಈಗಾಗಲೇ ಸಾಯಿ ಬಡಾವಣೆ ಮುಂತಾದೆಡೆಗಳಲ್ಲಿ ನಿಧಾನವಾಗಿ ಪ್ರವಾಹದ ನೀರು ಬಡಾವಣೆಗಳಿಗೆ ನುಗ್ಗುತ್ತಿದ್ದು, ಜನರು ಎಚ್ಚರದಿಂದ ಇರುವಂತೆ ಪುರಸಭೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

Follow Us:
Download App:
  • android
  • ios