Asianet Suvarna News Asianet Suvarna News

ಬೆಂಗ್ಳೂರಲ್ಲಿ ಭಾರೀ ಮಳೆ: ಅಂಡರ್‌ ಪಾಸ್‌ಗಳಲ್ಲಿ ನೀರು, ವಾಹನ ಸಂಚಾರಕ್ಕೆ ಅಡ್ಡಿ

ಮೆಜಸ್ಟಿಕ್‌, ಯಶವಂತಪುರ, ಶೇಷಾದ್ರಿಪುರ, ಮಲ್ಲೇಶ್ವರ, ಬಸವನಗುಡಿ, ಜಯನಗರ, ಕೋರಮಂಗಲ, ವಿಲ್ಸನ್‌ ಗಾರ್ಡನ್‌, ಹೊಂಬೇಗೌಡ ನಗರ, ಶಾಂತಿನಗರ, ಗಂಗೇನಹಳ್ಳಿ, ಡಬಲ್‌ ರಸ್ತೆ, ಎಂಜಿ ರಸ್ತೆ, ಕಾಪೋರೇಷನ್‌ ವೃತ್ತ, ಅಟ್ಟೂರು, ಸಂಪಂಗಿರಾಮನಗರ, ಶಿವಾಜಿನಗರ, ನಂದಿನಿ ಲೇಔಟ್‌, ನಾಗಪುರ, ಯಶವಂತಪುರ, ಹೆಬ್ಬಾಳ, ರಾಜಾಜಿನಗರ, ಬೆಳ್ಳಂದೂರು, ಕೊಟ್ಟಿಗೆಹಾರ, ವಿಜಯನಗರ, ಆರ್‌.ಆರ್‌.ನಗರ, ಬಿಟಿಎಂ ಲೇಔಟ್‌, ವಿದ್ಯಾಪೀಠ, ಚಾಮರಾಜಪೇಟೆ ಸೇರಿದಂತೆ ಮೊದಲಾದ ಕಡೆ ಧಾರಾಕಾರ ಮಳೆಯಾಗಿದೆ.
 

Heavy Rain in Bengaluru on September 13th grg
Author
First Published Sep 14, 2023, 6:47 AM IST

ಬೆಂಗಳೂರು(ಸೆ.14): ಕಳೆದ ನಾಲ್ಕೈದು ದಿನಗಳಿಂದ ನಗರದಲ್ಲಿ ಮಳೆಯಾಗುತ್ತಿದ್ದು, ಮಂಗಳವಾರವೂ ಮುಂದುವರೆಯಿತು. ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ಉಂಟಾಗಿ ಕೆಲವು ಕಡೆ ಮಳೆ ಸುರಿಯಿತು. ಸ್ವಲ್ಪ ಸಮಯ ಬಿಡುವು ನೀಡಿ ಮತ್ತೆ ಸಂಜೆ 7 ಗಂಟೆ ಸುಮಾರಿಗೆ ಆರಂಭಗೊಂಡ ಮಳೆ ನಿರಂತರವಾಗಿ ಸುರಿಯಿತು.

ಮೆಜಸ್ಟಿಕ್‌, ಯಶವಂತಪುರ, ಶೇಷಾದ್ರಿಪುರ, ಮಲ್ಲೇಶ್ವರ, ಬಸವನಗುಡಿ, ಜಯನಗರ, ಕೋರಮಂಗಲ, ವಿಲ್ಸನ್‌ ಗಾರ್ಡನ್‌, ಹೊಂಬೇಗೌಡ ನಗರ, ಶಾಂತಿನಗರ, ಗಂಗೇನಹಳ್ಳಿ, ಡಬಲ್‌ ರಸ್ತೆ, ಎಂಜಿ ರಸ್ತೆ, ಕಾಪೋರೇಷನ್‌ ವೃತ್ತ, ಅಟ್ಟೂರು, ಸಂಪಂಗಿರಾಮನಗರ, ಶಿವಾಜಿನಗರ, ನಂದಿನಿ ಲೇಔಟ್‌, ನಾಗಪುರ, ಯಶವಂತಪುರ, ಹೆಬ್ಬಾಳ, ರಾಜಾಜಿನಗರ, ಬೆಳ್ಳಂದೂರು, ಕೊಟ್ಟಿಗೆಹಾರ, ವಿಜಯನಗರ, ಆರ್‌.ಆರ್‌.ನಗರ, ಬಿಟಿಎಂ ಲೇಔಟ್‌, ವಿದ್ಯಾಪೀಠ, ಚಾಮರಾಜಪೇಟೆ ಸೇರಿದಂತೆ ಮೊದಲಾದ ಕಡೆ ಧಾರಾಕಾರ ಮಳೆಯಾಗಿದೆ.

ತೀವ್ರ ಮಳೆ ಕೊರತೆ: ಕರ್ನಾಟಕದ 195 ತಾಲೂಕುಗಳಲ್ಲಿ ಬರ, ಘೋಷಣೆಗೆ ಶಿಫಾರಸು

ಮಳೆಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ನೀರು ಉಕ್ಕಿ ಹರಿದ ಪರಿಣಾಮ ವಾಹನ ಸವಾರರಿಗೆ ತೊಂದರೆ ಉಂಟಾಯಿತು. ಬೈಕ್‌ ಸವಾರರು ನಗರದ ಫ್ಲೈಓವರ್‌ ಮತ್ತು ಅಂಡರ್‌ ಪಾಸ್‌ಗಳಲ್ಲಿ ಆಶ್ರಯ ಪಡೆದರು. ಕೆಲವು ಕಡೆ ಟ್ರಾಫಿಕ್‌ ಜಾಮ್‌ ಸಹ ಉಂಟಾಯಿತು.

ಅಂಡರ್‌ ಪಾಸ್‌ಗಳಲ್ಲಿ ನೀರು

ನಗರದ ಪ್ರಮುಖ ಅಂಡರ್‌ ಪಾಸ್‌ಗಳಾದ ಶಿವಾನಂದ ರೈಲ್ವೆ ಅಂಡರ್‌ ಪಾಸ್‌, ಕೆ.ಆರ್‌.ಸರ್ಕಲ್‌ ಅಂಡರ್‌ ಪಾಸ್‌, ಕಾವೇರಿ ಜಂಕ್ಷನ್‌, ಓಕಳಿಪುರ ಅಂಡರ್‌ ಪಾಸ್‌ ಸೇರಿದಂತೆ ವಿವಿಧ ಅಂಡರ್‌ ಪಾಸ್‌ಗಳಲ್ಲಿ ನೀರು ತುಂಬಿಕೊಂಡು ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು.

ಚಳಿಯ ವಾತಾವರಣ

ಬೆಳಗ್ಗೆಯಿಂದ ಮೋಡ ಕವಿದ ವಾತಾವರಣ ಹಾಗೂ ಜಿಟಿಜಿಟಿ ಮಳೆ ಸುರಿದ ಪರಿಣಾಮ ನಗರದಲ್ಲಿ ಚಳಿಯ ವಾತಾವರಣ ಸೃಷ್ಟಿಯಾಗಿತ್ತು. ಬಿಸಿಲು ಹಾಗೂ ಸೆಕೆಯಿಂದ ಬಳಲುತ್ತಿದ್ದ ಬೆಂಗಳೂರಿಗೆ ಇದೀಗ ಏಕಾಏಕಿ ಚಳಿ ವಾತಾವರಣ ಆರೋಗ್ಯ ಸಮಸ್ಯೆಯನ್ನು ತಂದೊಡ್ಡಿದೆ.

ಮುಂಗಾರು ಹೊಡೆತ: ಕರ್ನಾಟಕದಲ್ಲಿ ಬಿತ್ತನೆ ಭಾರೀ ಕುಸಿತ

ಮುಂದಿನ 24 ಗಂಟೆಗಳ ಅವಧಿಯಲ್ಲಿ ನಗರದಲ್ಲಿ ಮೋಡ ಕವಿದ ವಾತಾವರಣ ಕಂಡು ಬರಲಿದ್ದು, ಕೆಲವು ಕಡೆ ಸಂಜೆ ಅಥವಾ ರಾತ್ರಿ ಹಗುರದಿಂದ ಕೂಡಿದ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್‌ ಹಾಗೂ ಕನಿಷ್ಠ ಉಷ್ಣಾಂಶ 20 ಡಿ.ಸೆ. ಇರುವ ಸಂಭವವಿದೆ.

ನಗರದಲ್ಲಿ ಸರಾಸರಿ 1.9 ಸೆಂ.ಮೀ. ಮಳೆ

ಮಂಗಳವಾರ ರಾತ್ರಿ 9.30ರ ಮಾಹಿತಿ ಪ್ರಕಾರ ನಗರದಲ್ಲಿ ಸರಾಸರಿ 1.9 ಸೆಂ.ಮೀ ನಷ್ಟುಮಳೆಯಾಗಿದೆ. ಬೆಂಗಳೂರಿನ ಅಂಜನಾಪುರದಲ್ಲಿ ಅತಿ ಹೆಚ್ಚು 5.2 ಸೆಂ.ಮೀ ಮಳೆಯಾಗಿದೆ. ವಿದ್ಯಾಪೀಠದಲ್ಲಿ 4.5, ಕೆಂಗೇರಿ 4.0, ಆರ್‌ಆರ್‌ನಗರ, 3.9, ಹೆಮ್ಮಿಗೆಪುರ 3.6, ಗೊಟ್ಟಿಗೆರೆ 3.4, ಹಂಪಿನಗರ 3.2, ಗಾಳಿ ಆಂಜನೇಯ ದೇವಸ್ಥಾನ ಹಾಗೂ ಮಾರುತಿ ಮಂದಿರ ವಾರ್ಡ್‌ನಲ್ಲಿ ತಲಾ 3.1, ರಾಜಮಹಲ್‌ ಗುಟ್ಟಹಳ್ಳಿ 3, ಕೋಣನಕುಂಟೆ 2.9, ಕೊಟ್ಟಿಗೆಪಾಳ್ಯ ಹಾಗೂ ನಾಗಪುರದಲ್ಲಿ ತಲಾ 2.6, ಅರಕೆರೆ ಹಾಗೂ ಸಂಪಗಿರಾಮನಗರ ತಲಾ 2.5, ಉತ್ತರಹಳ್ಳಿ 2.2 ಹಾಗೂ ಪೀಣ್ಯ ಕೈಗಾರಿಕಾ ಪ್ರದೇಶ 2.1 ಸೆಂ.ಮೀ ಮಳೆಯಾದ ವರದಿಯಾಗಿದೆ.

Follow Us:
Download App:
  • android
  • ios