World Heart Day 2022: ಕಾಲೇಜು ವಿದ್ಯಾರ್ಥಿಗಳಿಗೆ ಹೃದಯಾಘಾತ ತಡೆ ತರಬೇತಿ?

ಯುವಜನತೆಯಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಅಥವಾ ಹೃದಯ ಸ್ತಂಭನದಿಂದ ಸಂಭವಿಸುವ ಸಾವಿನ ಪ್ರಮಾಣ ತಗ್ಗಿಸುವ ನಿಟ್ಟಿನಲ್ಲಿ ಪದವಿಪೂರ್ವ ಕಾಲೇಜು (ಪಿಯುಸಿ) ಹಂತದಲ್ಲಿಯೇ ಮಕ್ಕಳಿಗೆ ಹೃದಯಾಘಾತದ ಪ್ರಥಮ ಚಿಕಿತ್ಸೆಯಾದ ಕಾರ್ಡಿಯೋಪಲ್ಮನರಿ ರೆಸಸಿಟೇಷನ್‌ (ಸಿಪಿಆರ್‌) ತರಬೇತಿಯನ್ನು ಕಡ್ಡಾಯಗೊಳಿಸಬೇಕು ಎಂದು ರಾಜ್ಯ ಸರ್ಕಾರ ಮತ್ತು ಶಿಕ್ಷಣ ಇಲಾಖೆಗೆ ಹೃದ್ರೋಗ ತಜ್ಞರು ಸಲಹೆ ನೀಡಿದ್ದಾರೆ.

Heart attack prevention training for college students at bengaluru gvd

ಜಯಪ್ರಕಾಶ್‌ ಬಿರಾದಾರ್‌

ಬೆಂಗಳೂರು (ಸೆ.29): ಯುವಜನತೆಯಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಅಥವಾ ಹೃದಯ ಸ್ತಂಭನದಿಂದ ಸಂಭವಿಸುವ ಸಾವಿನ ಪ್ರಮಾಣ ತಗ್ಗಿಸುವ ನಿಟ್ಟಿನಲ್ಲಿ ಪದವಿಪೂರ್ವ ಕಾಲೇಜು (ಪಿಯುಸಿ) ಹಂತದಲ್ಲಿಯೇ ಮಕ್ಕಳಿಗೆ ಹೃದಯಾಘಾತದ ಪ್ರಥಮ ಚಿಕಿತ್ಸೆಯಾದ ಕಾರ್ಡಿಯೋಪಲ್ಮನರಿ ರೆಸಸಿಟೇಷನ್‌ (ಸಿಪಿಆರ್‌) ತರಬೇತಿಯನ್ನು ಕಡ್ಡಾಯಗೊಳಿಸಬೇಕು ಎಂದು ರಾಜ್ಯ ಸರ್ಕಾರ ಮತ್ತು ಶಿಕ್ಷಣ ಇಲಾಖೆಗೆ ಹೃದ್ರೋಗ ತಜ್ಞರು ಸಲಹೆ ನೀಡಿದ್ದಾರೆ.

ರಾಜ್ಯದ ಪ್ರಮುಖ ಹೃದ್ರೋಗ ಚಿಕಿತ್ಸಾ ಕೇಂದ್ರವಾದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಡೆಸಿದ ಅಧ್ಯಯನಗಳ ಪ್ರಕಾರ, ಕಳೆದ 10 ವರ್ಷಗಳಲ್ಲಿ ಯುವಜನತೆಯಲ್ಲಿ ಹೃದ್ರೋಗ ಸಮಸ್ಯೆ ಶೇ.20ರಷ್ಟು ಹೆಚ್ಚಳವಾಗಿದೆ. ಸದ್ಯ ಹೃದ್ರೋಗ ಸಮಸ್ಯೆ ಕಾಣಿಸಿಕೊಳ್ಳುವ ಮೂವರ ಪೈಕಿ ಒಬ್ಬರು 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಶೇ.15 ರಿಂದ 20ರಷ್ಟುಯುವಕರು ಹೃದ್ರೋಗದ ಕೌಟುಂಬಿಕ ಹಿನ್ನೆಲೆ ಹೊಂದಿದ್ದಾರೆ. ಹೀಗಾಗಿ, ಹೃದಯಾಘಾತವು ಸದ್ಯದ ಮತ್ತು ಭವಿಷ್ಯದ ಅತ್ಯಂತ ಪ್ರಮುಖ ಆರೋಗ್ಯ ಸಮಸ್ಯೆಯಾಗಿದ್ದು, ಅದರ ನಿರ್ವಹಣೆಯನ್ನು ಕಾಲೇಜು ಹಂತದಲ್ಲಿಯೇ ಪ್ರತಿಯೊಬ್ಬರೂ ಕಲಿತುಕೊಳ್ಳುವುದು ಉತ್ತಮ ಎನ್ನುವುದು ತಜ್ಞರ ಅಭಿಪ್ರಾಯ.

Bengaluru: ಎಚ್‌ಎಎಲ್‌ನಿಂದ ಕೆಂಪೇಗೌಡ ಏರ್‌ಪೋರ್ಟ್‌ಗೆ ಕಾಪ್ಟರ್ ಟ್ಯಾಕ್ಸಿ

‘ಹೃದಯಾಘಾತ ಅಥವಾ ಹೃದಯ ಸ್ತಂಭನ ಉಂಟಾದಾಗ ರೋಗಿಗೆ ಸೂಕ್ತ ಪ್ರಥಮ ಚಿಕಿತ್ಸೆಯು ಸಿಕ್ಕರೆ ಶೇ.90 ರಷ್ಟುಸಾವಿನ ಪ್ರಮಾಣ ತಗ್ಗಿಸಬಹುದು. ಹೃದಯಾಘಾತ/ಹೃದಯ ಸ್ತಂಭನದ ನಿಖರ ಲಕ್ಷಣಗಳು, ಆ ಸಂದರ್ಭದ ನಿರ್ವಹಣೆ ಕೌಶಲ ಹಾಗೂ ಸಿಪಿಆರ್‌ ವಿಧಾನದ ತರಬೇತಿಯನ್ನು ಪಿಯು ಕಾಲೇಜು ಮಟ್ಟದಲ್ಲಿಯೇ ಮಕ್ಕಳಿಗೆ ನೀಡಲು ಸರ್ಕಾರ ಕ್ರಮ ವಹಿಸಬೇಕು’ ಎನ್ನುತ್ತಾರೆ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್‌ ಮಂಜುನಾಥ್‌.

ಯಾರಿಗೆಲ್ಲಾ ತರಬೇತಿಗೆ ತಜ್ಞರ ಸಲಹೆ?: ಸಾರ್ವಜನಿಕ ಸ್ಥಳಗಳಲ್ಲಿ ಕೆಲಸ ನಿರ್ವಹಿಸುವ ಕಾವಲು ಮತ್ತು ಭದ್ರತಾ ಸಿಬ್ಬಂದಿಗಳು, ಕಚೇರಿಯ ನಿರ್ವಹಣಾ ಸಿಬ್ಬಂದಿ, ಬಸ್‌ ನಿರ್ವಾಹಕರು, ಆಶಾ ಕಾರ್ಯಕರ್ತರು, ಗ್ರಾಮ ಸೇವಕ, ಹೃದ್ರೋಗ ಕುಟುಂಬದ ಹಿನ್ನೆಲೆ ಹೊಂದಿರುವವರು.

ಏನಿದು ಸಿಪಿಆರ್‌?: ಹೃದಯದ ನಾಳಗಳು ಬ್ಲಾಕ್‌ ಆಗುವುದು ಹೃದಯಾಘಾತ, ಹೃದಯದ ಪ್ರಮುಖ ನಾಳದಲ್ಲಿ ರಕ್ತ ಸಂಚಲನೆ ಹಠಾತ್‌ ನಿಲ್ಲುವುದೇ ಹೃದಯ ಸ್ತಂಭನವಾಗಿರುತ್ತದೆ. ಇದರಿಂದ ಹೃದಯದಿಂದ ದೇಹಕ್ಕೆ ರಕ್ತ ಸಂಚಾರ ನಿಂತು ಹೋಗುತ್ತದೆ. ಆಗ ವ್ಯಕ್ತಿಯ ಹೃದಯ ಬಡಿತ ನಿಂತು ಪ್ರಜ್ಞಾಹೀನ ಸ್ಥಿತಿ ತಲುಪುತ್ತಾನೆ. ಅಂತಹ ಸಂದರ್ಭದಲ್ಲಿ ವೈದ್ಯಕೀಯ ನೆರವು ಸಿಗುವುದಕ್ಕೂ ಮೊದಲು ತತಕ್ಷಣದಲ್ಲಿ ನೀಡುವ ಪ್ರಥಮ ಚಿಕಿತ್ಸೆ ಪ್ರಕ್ರಿಯೆಯೇ ಸಿಪಿಆರ್‌ ಆಗಿದೆ. ಇದಕ್ಕೆ ಯಾವುದೇ ವೈದ್ಯಕೀಯ ಉಪಕರಣದ ಅಗತ್ಯವಿಲ್ಲ. ವೈದ್ಯಕೀಯ ಶಿಕ್ಷಣದ ತರಬೇತಿ ಪಡೆದ ಸಾಮಾನ್ಯರು ಕೂಡ ಈ ಪ್ರಕ್ರಿಯೆ ಕೈಗೊಳ್ಳಬಹುದು.

ಕೈಗೊಳ್ಳುವ ವಿಧಾನ: ಹೃದಯಾಘಾತಕ್ಕೆ ಒಳಗಾದ ವ್ಯಕ್ತಿಯನ್ನು ಮಲಗಿಸಿ, ಎಡಗೈಗೆ ಬಲಗೈಯನ್ನು ಸೇರಿಸಿ, ಅಂಗೈ ಕೆಳಮುಖವಾಗಿ ಹೃದಯದ ಮಧ್ಯೆ ಭಾಗದಲ್ಲಿಡಬೇಕು. ದೇಹ ಮತ್ತು ಭುಜ ನೇರವಾಗಿ ಇರಿಸಿಕೊಂಡು ಎದೆಯನ್ನು ಕನಿಷ್ಠ ಎರಡು ಇಂಚು ಒಳ ಹೋಗುವಷ್ಟುಬಲವಾಗಿ ತಳ್ಳುತ್ತಿರಬೇಕು. ಇದನ್ನು ಸ್ವಲ್ಪ ರೋಗಿಗೆ ಪ್ರಜ್ಞೆ/ಉಸಿರಾಟ ಬರುವವರೆಗೂ ಮುಂದುವರೆಸಬೇಕು. ಹೀಗೆ ಮಾಡುವುದರಿಂದ ಹೃದಯ ರಕ್ತನಾಳದಲ್ಲಿ ತುಂಬಿದ ಬ್ಲಾಕೇಜ್‌ ಸ್ವಲ್ಪ ಪ್ರಮಾಣದಲ್ಲಿ ತೆರವುಗೊಂಡು, ಹೃದಯ ಮತ್ತೆ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ.

ಯುವಕರಲ್ಲಿ ಹೃದ್ರೋಗ ಹೆಚ್ಚುತ್ತಿದೆ. ಹೃದಯಾಘಾತ ಸಂಭವಿಸಿದಾಗ ಅದರ ನಿರ್ವಹಣೆ, ತುರ್ತು ಚಿಕಿತ್ಸೆ ಬಗ್ಗೆ ಅಗತ್ಯವಾಗಿ ತಿಳಿದಿರಬೇಕು. ಸರ್ಕಾರವು ಕಾಲೇಜು ಮಕ್ಕಳಿಗೆ ಸಿಪಿಆರ್‌ ತರಬೇತಿಯನ್ನು ಕಡ್ಡಾಯಗೊಳಿಸಲು ಕ್ರಮವಹಿಸಬೇಕು.
- ಡಾ.ಸಿ.ಎನ್‌.ಮಂಜುನಾಥ್‌, ನಿರ್ದೇಶಕರು, ಜಯದೇವ ಹೃದ್ರೋಗ ಸಂಸ್ಥೆ

ಸಿಪಿಆರ್‌ ಬಗ್ಗೆ ಸಂಪೂರ್ಣ ಅರಿವಿರಬೇಕು. ತರಬೇತಿ ಇಲ್ಲದ ವ್ಯಕ್ತಿಯು ಕೈಗೊಂಡಾಗ ರೋಗಿಯು ಸಾವಿಗೀಡಾಗುವ ಸಾಧ್ಯತೆ ಇರುತ್ತದೆ. ಮನೆ, ಸಾರ್ವಜನಿಕ ಸ್ಥಳಗಳಲ್ಲಿಯೇ ಹೆಚ್ಚು ಹೃದಯಾಘಾತವಾಗುತ್ತಿದ್ದು, ಶೈಕ್ಷಣಿಕ ಸಂಸ್ಥೆಗಳಲ್ಲಿ ಮಕ್ಕಳಿಗೆ ತರಬೇತಿ ಕೊಡವುದರಿಂದ ಸಾವಿನ ಪ್ರಮಾಣ ತಗ್ಗಿಸಬಹುದು.
- ಡಾ.ವಿವೇಕ್‌ ಜವಳಿ, ಹೃದ್ರೋಗ ತಜ್ಞ, ಫೋರ್ಟಿಸ್‌ ಆಸ್ಪತ್ರೆ

ಐಷಾರಾಮಿ ಪ್ರವಾಸಕ್ಕೆ ಬಂತು ಸುಸಜ್ಜಿತ ಕ್ಯಾರವಾನ್‌!

ಶಿಕ್ಷಣ ಇಲಾಖೆ ಅವಕಾಶ ಮಾಡಿಕೊಟ್ಟರೆ ಕಾಲೇಜುಗಳಲ್ಲಿ ಸಿಪಿಆರ್‌ ತರಬೇತಿ ಶಿಬಿರ/ಸರ್ಟಿಫಿಕೇಟ್‌ ಕೋರ್ಸ್‌ ಆರಂಭಿಸಬಹುದು. ಪೋಷಕರ ಆರೋಗ್ಯ ಕಾಳಜಿಗೆ, ಸಾರ್ವಜನಿಕರ ಸ್ಥಳಗಳಲ್ಲಿ ತುರ್ತು ಸಂದರ್ಭದಲ್ಲಿ ಈ ತರಬೇತಿ ವಿದ್ಯಾರ್ಥಿಗಳಿಗೆ ನೆರವಾಗುತ್ತದೆ.
-ನಿಂಗೇಗೌಡ, ಅಧ್ಯಕ್ಷ, ರಾಜ್ಯ ಪಿಯು ಉಪನ್ಯಾಸಕ ಸಂಘ

Latest Videos
Follow Us:
Download App:
  • android
  • ios