ಕೋಲಾರ(ಆ.04): ಸರ್ಕಾರಿ ಬಸ್‌ ಚಾಲಕ ಕರ್ತವ್ಯದಲ್ಲಿದ್ದಾಗಲೇ ಹೃದಯಾಪಘಾತವಾಗಿ ನಿಧನರಾಗಿರುವ ಘಟನೆ ಚಿಂತಾಮಣಿಯಲ್ಲಿ ನಡೆದಿದೆ.

ತಾಲೂಕಿನ ದೊಡ್ಡಹಳ್ಳಿ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ಬಸ್‌ ಚಾಲನೆ ಮಾಡಿಕೊಂಡು ಬಂದು ನಿಲ್ಲಿಸಿದ ಚಾಲಕ ಶ್ರೀರಾಮಪ್ಪ (52) ಕುಳಿತಲ್ಲಿಯೇ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ನಿರ್ವಾಹಕ, ಗ್ರಾಮಸ್ಥರು, ಘಟಕ ವ್ಯವಸ್ಥಾಪಕ ಅಪ್ಪಿರೆಡ್ಡಿ ಕೂಡಲೇ ಸ್ಥಳಕ್ಕೆ ದೌಡಾಯಿಸಿ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಸಾರ್ವಜನಿಕರಿಂದ ಪ್ರಶಂಸೆ:

ಬಸ್‌ ಚಾಲನೆ ವೇಳೆ ಅಘಾತವಾಗದೆ ಬಸ್‌ ನಿಲ್ಲಿಸಿದ ನಂತರ ಹೃದಯಾಪಘಾತವಾಗಿ ಚಾಲಕ ಮೃತ ಶ್ರೀರಾಮಪ್ಪ ಮೃತಪಟ್ಟಿದ್ದು, ಅಂತ್ಯಕಾಲದಲ್ಲಿಯೂ ಕರ್ತವ್ಯಪ್ರಜ್ಞೆ ಮೆರೆದಿರುವ ಚಾಲಕನಿಂದಾಗಿ ಬಸ್ಸಿನಲ್ಲಿದ್ದ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಸಾರ್ವಜನಿಕರು ಪ್ರಶಂಸಿದ್ದಾರೆ.

ಮೈಸೂರು: ಚಾಲಕನ‌ ಸಮಯ ಪ್ರಜ್ಞೆ; ತಪ್ಪಿತು ಭಾರೀ ದುರಂತ

ಘಟಕ ವ್ಯವಸ್ಥಾಪಕ ಅಪ್ಪಿರೆಡ್ಡಿ , ವಿಭಾಗೀಯ ಸಂಚಲನಾಧಿಕಾರಿ ಮಂಜುನಾಥ್‌, ಕಾರ್ಮಿಕ ಕಲ್ಯಾಣಾಧಿಕಾರಿ ಜಿ. ಶಾಂತ, ಭದ್ರತಾ ನಿರೀಕ್ಷಕ ಉಮೇಶ್‌, ಸಹಾಯಕ ಕಾರ್ಯಧೀಕ್ಷಕಿ ಸರಿತಾ, ಚಾಕಲರು, ನಿರ್ವಾಕರು , ತಾಂತ್ರಿಕ ಹಾಗೂ ಆಡಳಿತ ಸಿಬ್ಬಂದಿ ಆಗಮಿಸಿ ಮೃತರ ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಸಲ್ಲಿಸಿದರು.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ