Asianet Suvarna News Asianet Suvarna News

ಪ್ರಸಾದ ದುರಂತ: ಆರೋಗ್ಯ ಮಂತ್ರಿ ಸಾಹೇಬ್ರಿಗೆ ಗೊತ್ತೇ ಇಲ್ವಂತೆ

ಚಾಮರಾಜನಗರ ಜಿಲ್ಲೆಯ ಸುಳ್ವಾಡಿ ಗ್ರಾಮದ ಮಾರಮ್ಮ ದೇವಸ್ಥಾನದ ಪ್ರಸಾದ ಸೇವಿಸಿ 13 ಜನ ಸಾವಿನ ಘೋರ ದುರಂತಕ್ಕೆ ಇಡೀ ರಾಜ್ಯವೇ ಕಣ್ಣೀರಿಟ್ಟಿದೆ. ಆದ್ರೆ ರಾಜ್ಯ ಆರೋಗ್ಯ ಮಂತ್ರಿ ಮಹಾಶಯರಿಗೆ ಈ ವಿಷಯವೇ ಗೊತ್ತಿಲ್ವಂತೆ. ಇನ್ನು ದುರಂತ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಹೀಗೆ.

Health Minister Shivanand Patil Reacts on Chamarajnagar Temple tragedy
Author
Bengaluru, First Published Dec 16, 2018, 3:58 PM IST

ಮೈಸೂರು, [ಡಿ.16]:  ಸುಳ್ವಾಡಿ ಗ್ರಾಮದ ವಿಷ ಪ್ರಸಾದ ಪ್ರಕರಣದ ದುರಂತ ಸಂಭವಿಸಿ ಮೂರು ದಿನಗಲಾಗಿವೆ. ಈ ಬಗ್ಗೆ ಇಡೀ ಮಾಧ್ಯಮಗಳಿಗೆ ಹಗಲು ರಾತ್ರಿ ಬೊಬ್ಬೆ ಹೊಡೆದುಕೊಳ್ಳುತ್ತಿವೆ. ಆದ್ರೆ ಆರೋಗ್ಯ ಸಚಿವರು ಗೊತ್ತೇ ಇಲ್ಲ ಎಂದು ತಮ್ಮ ಬೇಜವಬ್ದಾರಿ ಹೇಳಿಕೆ ನೀಡಿದ್ದಾರೆ.

ಮೈಸೂರಿನಲ್ಲಿ ಇಂದು [ಶನಿವಾರ] ನಗರದಲ್ಲಿ ಮಾತನಾಡಿದ ಅವರು,  ಸುಳ್ವಾಡಿ ಗ್ರಾಮದ ವಿಷ ಪ್ರಸಾದ ಪ್ರಕರಣದ ವಿಷಯ ನನಗೆ ಗೊತ್ತಾಗಿದ್ದೇ ನಿನ್ನೆ ಸಂಜೆ 4 ಗಂಟೆಗೆ.  ನಾನಿರೋದು ವಿಜಾಪುರದಲ್ಲಿ ಅಲ್ಲಿಂದ ಇಲ್ಲಿಗೆ ಬರೋಕೆ‌ ಟೈಂ ಆಗುತ್ತೆ. ಮುಖ್ಯಮಂತ್ರಿಗಳೇ ಬಂದಿದ್ದಾರೆ ತಾನೆ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಉಡಾಫೆ ಉತ್ತರ ನೀಡಿದ್ದಾರೆ.

ಏರುತ್ತಿರುವ ಸಾವಿನ ಸಂಖ್ಯೆಗೆ ಕಾರಣವೇನು..?

ನಾನು ಅಧಿಕಾರ ವಹಿಸಿಕೊಡ ಬಳಿಕ ಹಲವು ನ್ಯೂನತೆಗಳನ್ನು ಸರಿಪಡಿಸಿದ್ದೇನೆ. 400 ಹೆಚ್ಚುವರಿ ಆ್ಯಂಬ್ಯುಲೇನ್ಸ್ ಖರೀದಿ ಮಾಡಿದ್ದೇವೆ.  360 ಜನ ವೈದ್ಯರನ್ನ ನೇಮಿಸಿಕೊಂಡಿದ್ದೇವೆ. ಇನ್ನೂ 1000 ಹುದ್ದೆ ಕೊರತೆ ಇದೆ. ಅವೆಲ್ಲವನ್ನು ತುಂಬುವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿ ನುಸುಳಿಕೊಂಡರು.

ಘಟನೆ ನಡೆದ ಸ್ಥಳಕ್ಕೆ ಬಂದಿದ್ದೇ ಲೇಟು. ಅದು ಬೇರೆ ಉಡಾಫೆ ಮಾತುಗಳು. ದುರಂತ ಸಂಭವಿಸಿ ಮೂರು ದಿನ ಆಯ್ತು. ಮಾಧ್ಯಮಗಳಲ್ಲಿ ಹಗಲು ರಾತ್ರಿ ಎನ್ನದೇ ದುರಂತದ ಸುದ್ದಿ ಬಿತ್ತರಿಸುತ್ತಿವೆ. ಆದ್ರೆ ಆರೋಗ್ಯ ಮಂತ್ರಿ ಶಿವಾನಂದ್ ಪಾಟೀಲ್ ಸಾಹೇಬ್ರು ಎಲ್ಲಿ ಮಲಗಿದ್ರೋ ಗೊತ್ತಿಲ್ಲ.

Follow Us:
Download App:
  • android
  • ios