ಧಾರವಾಡ ಜಿಲ್ಲಾಸ್ಪತ್ರೆಗೆ ಆರೋಗ್ಯ ಸಚಿವರ ಭೇಟಿ, ಇನ್ನಾದ್ರೂ ಅಭಿವೃದ್ಧಿ ಕಾಣುತ್ತಾ?
ಧಾರವಾಡ ಜಿಲ್ಲಾಸ್ಪತ್ರೆ ಕಳೆದ 30 ವರ್ಷಗಳಿಂದ ಅಭಿವೃದ್ಧಿಯ ದೃಷ್ಠಿಯಲ್ಲಿ ಬಹಳ ಹಿಂದೆ ಉಳಿದಿತ್ತು. ಇದೀಗ ಅಭಿವೃದ್ಧಿಗೆ ಮುಂದಾಗಿದೆ. ಕಳೆದ ವಾರ ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಭೇಟಿ ನೀಡಿ ಆಸ್ಪತ್ರೆಯನ್ನ ವೀಕ್ಷಣೆ ಮಾಡಿದ್ದಾರೆ.
ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್
ಧಾರವಾಡ (ಜ.13): ವಿದ್ಯಾಕಾಶಿ ಧಾರವಾಡ ಜಿಲ್ಲೆ ಸದ್ಯ 20 ಲಕ್ಷಕ್ಕೆ ಹೆಚ್ಚು ಜನಸಂಖ್ಯೆಯನ್ನ ಹೊಂದಿರುವ ಜಿಲ್ಲೆಯಾಗಿದೆ. ರಾಜ್ಯದಲ್ಲಿ ಮಹಾನಗರ ಪಾಲಿಕೆಯಲ್ಲಿ ಎರಡನೇಯ ದೊಡ್ಡ ಮಹಾನಗರ ಪಾಲಿಕೆ ಎಂದು ಹೆಸರುವಾಸಿಯಾಗಿದೆ. ಆದರೆ ಧಾರವಾಡ ಜಿಲ್ಲಾಸ್ಪತ್ರೆ ದೊಡ್ಡ ಮಟ್ಟದಲ್ಲಿರಬೇಕಿತ್ತು ಸದ್ಯ ಜಿಲ್ಲಾಸ್ಪತ್ರೆ ಅಭಿವೃದ್ಧಿ ದೃಷ್ಟಿಯಿಂದ ಹಿಂದೆ ಉಳಿದಿತ್ತು. ಸದ್ಯ ಧಾರವಾಡ ಜಿಲ್ಲಾಸ್ಪತ್ರೆಗೆ ಸ್ವತಹ ಆರೊಗ್ಯ ಸಚಿವರು ಅಭಿವೃದ್ಧಿ ಭಾಗ್ಯವನ್ನ ಕಲ್ಪಿಸಿ ಕೊಟ್ಟಿದ್ದಾರೆ.
ಧಾರವಾಡ ಜಿಲ್ಲಾಸ್ಪತ್ರೆ ಕಳೆದ 30 ವರ್ಷಗಳಿಂದ ಅಭಿವೃದ್ಧಿಯ ದೃಷ್ಠಿಯಲ್ಲಿ ಬಹಳ ಹಿಂದೆ ಉಳಿದಿತ್ತು. ಜಿಲ್ಲಾಸ್ಪತ್ರೆ ಯಲ್ಲಿ ಬಡ ಜನರಿಗೆ ಸಿಗಬೇಕಾದ ಮೂಲ ಸೌಲಭ್ಯಗಳು ಕೂಡಾ ಸಿಗ್ತಾ ಇಲ್ಲ ಅನ್ನೋ ಕೊರಗು ಕೂಡಾ ಕೇಳಿ ಬಂದಿತ್ತು ಆದರೆ ಕಳೆದ ವಾರ ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಭೇಟಿ ನೀಡಿ ಆಸ್ಪತ್ರೆಯನ್ನ ವೀಕ್ಷಣೆ ಮಾಡಿದ್ದಾರೆ.
ಸಿಂಗಾಪುರ ಕಂಪೆನಿಯಲ್ಲಿ ದಾಖಲೆಯ 64.15 ಲಕ್ಷ ರೂ ವೇತನದ ಉದ್ಯೋಗ ಪಡೆದ ತಮಿಳುನಾಡು ರೈತನ ಮಗಳು
ಜೊತೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಕೂಡಾ ಸಚಿವರು ಜೊತೆ ಆಸ್ಪತ್ರೆಯನ್ನ ವಿಕ್ಷಣೆ ಮಾಡಿ ಎನೆಲ್ಲ ಮೂಲ ಸೌಲಭ್ಯಗಳನ್ನ ಮಾಡಬೇಕು ಅದನ್ನ ತ್ವರಿತವಾಗಿ 11 ಕೋಟಿ ಹಣವನ್ನ ನಾನು ಶಿಘ್ರದಲ್ಲಿ ಆಸ್ಪತ್ರೆಯ ನವೀಕರಣಕ್ಕೆ ಬಿಡುಗಡೆ ಮಾಡಿಸುತ್ತೆನೆ. ಮತ್ತು ಸದ್ಯ ಹೊಸ ಆಸ್ಪತ್ರೆ ಯನ್ನ ಕಟ್ಟಲಿಕ್ಕೆ ಆಗಲ್ಲ. ಇರೋದರಲ್ಲೆ ರಿನಿವೇಶನ್ ಮಾಡಿ ಸದ್ಯ ಆಸ್ಪತ್ರೆ ಸುಧಾರಣೆಗೆ ಎನೆಲ್ಲ ಬೇಕು ಅದನ್ನ ಸರಿ ಮಾಡಿ ಆಸ್ಪತ್ರೆನ್ನ ನವೀಕರಣ ಮಾಡಿ ಬಡ ಜನರಿಗೆ ಸಿಗಬೇಕಾದ ಎಲ್ಲ ಮೂಲ ಸೌಲಭ್ಯಗಳನ್ನ ಕೊಡಲಾಗುವುದು ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಆಸ್ಪತ್ರೆಯ ಅಭಿವೃದ್ಧಿ ಗೆ ಕೋಟಿ ಕೋಟಿ ಹಣವನ್ನ ಬಿಡುಗಡೆ ಮಾಡಿಸಲಿದ್ದಾರೆ.
ಇನ್ನು ಕಳೆದ ಮೂವತ್ತು ವರ್ಷಗಳಿಂದ ಆಸ್ಪತ್ರೆಯ ಆವರಣ ಒಳ್ಳೆಯ ರಸ್ತೆ ಇಲ್ಲದೆ ಅಭಿವೃದ್ಧಿ ಇಲ್ಲದೆ ಬಳಲುತ್ತಿತ್ತು ಆದರೆ ಸದ್ಯ ಜಿಲ್ಲಾ ಆಸ್ಪತ್ರೆ ನವೀಕರಣ ಮತ್ತು ಜನರ ಆರೋಗ್ಯದ ದೃಷ್ಢಿಯಿಂದ ಆಸ್ಪತ್ರೆಯ ಅಭಿವೃದ್ಧಿ ಮಾಡಲು ಸಚಿವರು ಅಸ್ತು ಎಂದಿದ್ದಾರೆ.
ಮುಖೇಶ್ ಅಂಬಾನಿ ಭಾವೀ ಭಾವ ಕೂಡ ಆಗರ್ಭ ಶ್ರೀಮಂತ, ಅವರ ಪತ್ನಿ ಆಸ್ತಿ ಕೂಡ ಕಮ್ಮಿಯೇನಿಲ್ಲ!
ಸದ್ಯ ಆಸ್ಪತ್ರೆ ಆವರಣವನ್ನ ರಸ್ತೆ ನಿರ್ಮಾಣಕ್ಕೆ ಮಹಾನಗರ ಪಾಲಿಕೆಯಿಂದ 70 ಲಕ್ಷ ಹಣದಲ್ಲಿ ಅಭಿವೃದ್ಧಿ ಮಾಡಲು ಈಗಾಗಲೇ ಟೆಂಡರ್ ಕೂಡಾ ಕರೆಯಲಾಗಿದೆ. ಇನ್ನು ಅಸ್ಪತ್ರೆಯ ಎಲ್ಲ ಅಭಿವೃದ್ಧಿ ಯನ್ನ ಮಾಡಲು ಜಿಲ್ಲಾಡಳಿತ ಸಜ್ಜಾಗಿದೆ. ಇರೋ ಆಸ್ಪತ್ರೆಯನ್ನ ಅಭಿವೃದ್ದಿ ಮಾಡಲಾಗುವುದು, ಇನ್ನು ಆಸ್ಪತ್ರೆಯಲ್ಲಿ ಬೇಕಾದ ಮೂಲಸೌಕರ್ಯ ಗಳನ್ನ ಮಾಡಿ ಕೊಡಲಾಗುವುದು ಇನ್ನು ಪ್ರತಿ ದಿನ 1500 ಜನರು ಚಿಕಿತ್ಸೆಗೆ ಬರ್ತಾ ಇದಾರೆ, ಸದ್ಯ ಹೊಸ ಆಸ್ಪತ್ರೆಯನ್ನ ನಿರ್ಮಾಣ ಮಾಡಲು ಹೊಸ ಜಾಗ ಕೋಟ್ಯಂತರ ಹಣ ಬೇಕು ಅದಕ್ಕೆ ಸರಕಾರದಲ್ಲಿ ಅನುಮೋದನೆ ಸಿಗಬೇಕು.
ಅದೆಲ್ಲ ಆಗಲಿಕ್ಕೆ ಇನ್ನೂ ಮೂರು ವರ್ಷ ಬೇಕಾಗುತ್ತೆ ಸದ್ಯ ಅಲ್ಲಿಯವರೆಗೆ 11 ಕೋಟಿ ವೆಚ್ಚದಲ್ಲಿ ಸದ್ಯ ಆಸ್ಪತ್ರೆಯನ್ನ ಅಭಿವೃದ್ದಿ ಮಾಡಲಾಗುವುದು ಇರೋ ಆಸ್ಪತ್ರನ್ನ ನವೀಕರಣ ಮಾಡಿ ಬಡ ರೋಗಿಗಳಿಗರ ಅನೂಕೂಲ ಮಾಡಿಕೊಡಲಾಗುವುದು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಸ್ಪಷ್ಟನೆ ನೀಡಿದ್ದಾರೆ.
ಇನ್ನು ಧಾರವಾಡ ಜಿಲ್ಲಾಸರ್ಜನ್ ಸಂಗಪ್ಪ ಗಾಬೀ ಅವರ ಪ್ರಯತ್ನ ದಿಂದ ಜಿಲ್ಲಾಸ್ಪತ್ರೆಗೆ ಆರೋಗ್ಯ ಸಚಿವರು 11 ಕೋಟಿ ಅನುದಾನ ಶಿಘ್ರದಲ್ಲಿ ಬಿಡುಗಡೆ ಮಾಡಿ ಆಸ್ಪತ್ರೆ ಅಭಿವೃದ್ಧಿ ಮಾಡಲು ಹೊರಡಿದ್ದಾರೆ. ನಿಜಕ್ಕೂ ಆರೋಗ್ಯ ಸಚಿವ ಗೂಂಡೂರಾವ್ ಅವರ ಕಾಳಜಿ ಯಿಂದ ನವೀಕರಣ ಆಗುತ್ತಿದೆ ಕಾರಣ ಇಷ್ಟೇ ಗೂಂಡುರಾವ್ ಕೂಡಾ ಹಿಂದೆ ಧಾರವಾಡ ಜಿಲ್ಲಾ ಉಸ್ತುವಾರಿಯಾಗಿ ಕೆಲಸವನ್ನ ಮಾಡಿದ್ದಾರೆ.