ಕೊರೋನಾ ವೈರಸ್ ಬಗ್ಗೆ ಭಯ ಪಡುವ ಅವಶ್ಯಕತೆ ಇಲ್ಲ: ಸಚಿವ ಶ್ರೀರಾಮುಲು
ಈವರೆಗೂ ರಾಜ್ಯದಲ್ಲಿ ಒಂದೂ ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ| ಈವರೆಗೂ ಭಾರತದಲ್ಲಿ 31 ಪ್ರಕರಣಗಳು ದಾಖಲಾಗಿವೆ| ಮೊಬೈಲ್ ಕಾಲರ್ ಟ್ಯೂನ್ ಮೂಲಕ ಜಾಗೃತಿ| ಬಳ್ಳಾರಿಯಲ್ಲಿ ಮೂವರ ರಕ್ತ ಪರೀಕ್ಷೆ ಕಳುಹಿಸಲಾಗಿತ್ತು ನೆಗಡಿವ್ ಬಂದಿದೆ: ಶ್ರೀರಾಮುಲು|
ಬಳ್ಳಾರಿ(ಮಾ.07): ಕೊರೋನಾ ವೈರಸ್ ಬಗ್ಗೆ ಯಾರು ಭಯ ಪಡುವ ಅವಶ್ಯಕತೆ ಇಲ್ಲ. ಮುಂಜಾಗ್ರತೆ ಕ್ರಮ ತೆಗೆದುಕೊಂಡಿದೆ. ರಾಜ್ಯದ ಎಲ್ಲ ವಿಮಾನ ನಿಲ್ದಾಣಗಳಲ್ಲಿ ಇಲ್ಲಿಯವರೆಗೆ 72542 ಜನರಿಗೆ ಪರೀಕ್ಷೆ ಮಾಡಲಾಗಿದೆ. ಬೆಂಗಳೂರು ಏರ್‌ಪೋರ್ಟ್‌ನಲ್ಲಿ 49594 ಜನರನ್ನ ತಪಾಸಣೆ ಮಾಡಲಾಗಿದೆ. ಶುಕ್ರವಾರ ಒಂದೇ ದಿನ 3025 ಜನರಿಗೆ ಕೊರೋನಾ ಪರೀಕ್ಷೆ ಮಾಡಲಾಗಿದೆ. ಎಲ್ಲೂ ಕರೋನಾ ವೈರಸ್ ಪರೀಕ್ಷೆ ಕಂಡು ಬಂದಿಲ್ಲ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಈ ಸಂಬಂಧ ಕಳೆದ ವಾರ ಬೆಂಗಳೂರಿನಲ್ಲಿ ಸಭೆ ನಡೆಸಿದ್ದೇನೆ. ಹೈದರಾಬಾದ್ ಮೂಲದ ಸಾಫ್ಟ್‌ವೇರ್ ಇಂಜೀಯರ್ ಒಬ್ಬರಿಗೆ ಕರೋನಾ ಇತ್ತು ಎನ್ನುವ ಮಾಹಿತಿ ಇತ್ತು. ಅವರು ಓಡಾಡಿದ ಕಾರ್ ಡ್ರೈವರ್, ವಸತಿ ಎಲ್ಲ ಕಡೆಯಲ್ಲೂ ಟೆಸ್ಟ್ ಮಾಡಲಾಗಿದೆ. ಬೆಂಗಳೂರಿನಲ್ಲಿ ಇದ್ದಾಗ ರೋಗ ಇರಲಿಲ್ಲ. ಹೈದರಾಬಾದ್‌ಗೆ ಹೋದಾಗ ರೋಗ ಪತ್ತೆಯಾಗಿತ್ತು. ರೋಗಿ ಇರುವ ಅಪಾರ್ಟ್‌ಮೆಂಟ್ ಕೂಡ ಪರಿಶೀಲನೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಈವರೆಗೂ ರಾಜ್ಯದಲ್ಲಿ ಒಂದೂ ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ. ಸದ್ಯ ರಾಜ್ಯದ 343 ಜನರ ರಕ್ತ ಪರಿಶೀಲನೆ ಮಾಡಲಾಗಿದೆ. ಐಸುಲೇಷನ್ ವಾರ್ಡ್ ಡಿಕ್ಲೈರ್ ಮಾಡಿದ ಮೇಲೆ ಸಕಲ ವ್ಯವಸ್ಥೆ ಮಾಡಲಾಗಿದೆ. ಈ ಹಿಂದೆ ಪುಣೆಗೆ ರಕ್ತದ ಪರೀಕ್ಷೆ ಕಳುಹಿಸಲಾಗುತ್ತಿತ್ತು. ಇದೀಗ ಬೆಂಗಳೂರಿನಲ್ಲಿಯೂ ಪರೀಕ್ಷೆ ಮಾಡಲಾಗುತ್ತಿದೆ. ಈವರೆಗೂ ಭಾರತದಲ್ಲಿ 31 ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದ್ದಾರೆ.
ಮೊಬೈಲ್ ಕಾಲರ್ ಟ್ಯೂನ್ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಬಳ್ಳಾರಿಯಲ್ಲಿ ಮೂವರ ರಕ್ತ ಪರೀಕ್ಷೆ ಕಳುಹಿಸಲಾಗಿತ್ತು. ನೆಗಡಿವ್ ಬಂದಿದೆ ಎಂದಿದ್ದಾರೆ.
ಬಸನಗೌಡ ಪಾಟೀಲ ಯತ್ನಾಳ ಅವರ ಹೇಳಿಕೆಯನ್ನ ಸಮರ್ಥನೆ ಮಾಡಿಕೊಳ್ಳುತ್ತೇವೆ. ರಾಮಾಯಣ ಮಹಾಭಾರತ ಬರೆದಿರೋದು ಶೂದ್ರರೆ, ಕೆಳ ಜಾತಿ ಜನರಿಗೆ ಗೌರವ ಕೊಡುವ ವ್ಯಕ್ತಿ ಯತ್ನಾಳ್ ಆಗಿದ್ದಾರೆ. ಏನೋ ಬಾಯಿಜಾರಿ ಮಾತನಾಡಿಬಹುದು. ಯತ್ನಾಳ ಬಗ್ಗೆ ನಮಗೂ ಗೌರವ ಇದೆ ಎಂದು ಹೇಳಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಮಾಜಿ ಸಂಸದ ವಿ. ಎಸ್. ಉಗ್ರಪ್ಪ ಬುದ್ಧಿಜೀವಿ ಅವರ ಬಗ್ಗೆ ಏನು ಹೇಳೋಕೆ ಆಗಲ್ಲ. ಸಚಿವ ಆನಂದ ಸಿಂಗ್ ವಾಲ್ಮೀಕಿ ಬಗ್ಗೆ ಕೆಟ್ಟದಾಗಿ ಮಾತನಾಡಿಲ್ಲ, ಆನಂದ ಸಿಂಗ್ ಬಗ್ಗೆ ನನಗೆ ಸಂಪೂರ್ಣ ಭರವಸೆ ಇದೆ. ವಾಲ್ಮೀಕಿ ಬೇಟೆಗಾರನಾಗಿದ್ದ ಕೆಟ್ಟವನಲ್ಲ. ಇತಿಹಾಸ ತಿರುಚಿ ಕೆಟ್ಟವರಿದ್ರು ನಂತರ ಪರಿವರ್ತನೆಯಾಗಿದ್ದಾರೆ ಅನ್ನೋದು ನಾನು ಒಪ್ಪಲ್ಲ. ವಾಲ್ಮೀಕಿ ದೇವಮಾನವರಾಗಿದ್ದಾರೆ. ಈಗಿನ ರೈಟರ್‌ಗಳಿಗೆ ಇತಿಹಾಸ ತಿರುಚಿ ಬರೆಯುವ ಹವ್ಯಾಸವಿದೆ. ಹಳೇ ಪುಸ್ತಕ ನೋಡಿ ವಾಲ್ಮೀಕಿ ಬಗ್ಗೆ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.