ಮಂಗಳೂರು [ಮಾ.09]: ದುಬೈನಿಂದ ಮಂಗಳೂರಿಗೆ ಆಗಮಿಸಿದ್ದ ಕೊರೋನಾ ಶಂಕಿತ ವ್ಯಕ್ತಿ ವೆನ್ಲಾಕ್ ಆಸ್ಪತ್ರೆಯಿಂದ ಪರಾರಿಯಾಗಿದ್ದು ಈ ನಿಟ್ಟಿನಲ್ಲಿ ಆತನ ಮನೆಗೆ ಆರೋಗ್ಯ ಇಲಾಖೆ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ. 

"

ಕೊರೋನಾ ಶಂಕಿತನ ಮನೆಗೆ ತೆರಳಿ ಆತನನ್ನು ವಶಕ್ಕೆ ಪಡೆಯುವ ಹಿನ್ನೆಲೆ ತೆರಳಿದ್ದು, ಆದರೆ ಆತನ ಮನೆಗೆ ಬೀಗ ಹಾಕಲಾಗಿದೆ. 

ಮಂಗಳೂರು: ಕೊರೋನ ಶಂಕಿತ ವ್ಯಕ್ತಿ ಆಸ್ಪತ್ರೆಯಿಂದ ಎಸ್ಕೇಪ್...

ಮಂಗಳೂರು ಹೊರವಲಯದಲ್ಲಿರುವ ಆತನ ಮನೆಗೆ ತೆರಳಿದ್ದ ವೇಳೆ ಬೀಗ ಹಾಕಿರುವುದು ಕಂಡು ಬಂದಿದ್ದು,  ಕುಟುಂಬಸ್ಥರು ಬೇರೆ ಆಸ್ಪತ್ರೆಗೆ ಅಥವಾ ಬೇರೆ ಸ್ಥಳಕ್ಕೆ ತೆರಳಿರುವ ಶಂಕೆ ವ್ಯಕ್ತವಾಗಿದೆ. 

ಬಾಗಲಕೋಟೆಯಲ್ಲಿ ಕೊರೋನಾದಿಂದ 'ಕಾಮಣ್ಣ ಸಾವು'...

ದುಬೈನಿಂದ ಭಾನುವಾರ ರಾತ್ರಿ ಈ ವ್ಯಕ್ತಿ ಮರಳಿದ್ದು, ಜ್ವರವಿದ್ದ ಕಾರಣ ಆತನನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ  ರಾತ್ರೋ ರಾತ್ರಿ ಆತ  ಆಸ್ಪತ್ರೆಯಿಂದ ಪರಾರಿಯಾಗಿದ್ದ.