ಬಾಗಲಕೋಟೆ (ಮಾ.09): ಬಾಗಲಕೋಟೆಯಲ್ಲಿ ಹೋಳಿ ಹಬ್ಬ ಹಿನ್ನೆಲೆ ಕಾಮಣ್ಣನಿಗೂ ಕೊರೋನಾ ವೈರಸ್ ಎಫೆಕ್ಟ್ ತಟ್ಟಿದೆ. ಬಾಗಲಕೋಟೆಯಲ್ಲಿ ಕೊರೋನಾ ವೈರಸ್ ನಿಂದ ಕಾಮಣ್ಣ ಸಾವು ಎಂದು ಬೋರ್ಡ್ ಹಾಕಲಾಗಿದೆ.

"

ಕೊರೋನಾ ವೈರಸ್ ನಿಂದ ಸಾವು ಎಂದು ಕಾಮಣ್ಣನಿಗೆ ಬೋರ್ಡ್,ಹೂವಿನ ಹಾರ ಹಾಕಲಾಗಿದೆ. ವಿಶ್ವದಾದ್ಯಂತ ಆತಂಕ ಮೂಡಿಸಿದ್ದ ಕೊರೋನಾ ವೈರಸ್‌ ಕಾಟ ಕಾಮಣ್ಣನನ್ನೂ ಬಿಟ್ಟಿಲ್ಲ.

ಐತಿಹಾಸಿಕ ಬಾಗಲಕೋಟೆ ಹೋಳಿ ಹಬ್ಬ: ನಾಲ್ಕು ದಿನ ಬಣ್ಣದಲ್ಲಿ ಮಿಂದೇಳುವ ಮುಳುಗಡೆ ನಗರಿ!

ಇಂದು ಸಾಯಂಕಾಲ 4ಕ್ಕೆ ಕಾಮದಹನ ಹಿನ್ನೆಲೆ ಬಾಗಲಕೋಟೆ ನಗರದ ವಲಭ್ ಬಾಯಿ ಚೌಕ್ ಬಳಿ ಕೊರೋನಾ ವೈರಸ್ ಕಾಮಣ್ಣ ಗಮನ ಸೆಳೆದಿದೆ. ಬಾಗಲಕೋಟೆ ನಗರದಲ್ಲಿಂದು ವಿವಿಧ ಬಡಾವಣೆಗಳಲ್ಲಿ ಕಾಮದಹನ ನಡೆಯಲಿದೆ. ನಾಳೆಯಿಂದ ಮೂರುದಿನ ಬಣ್ಣದಾಟ ನಡೆಯಲಿದೆ.