ಸಕಲೇಶಪುರ (ಡಿ.05):  ಗ್ರಾಮ ಸ್ವರಾಜ್‌ ಹೆಸರಿನಲ್ಲಿ ಲೂಟಿ ಸಾಮ್ರಾಜ್ಯ ಮಾಡಲು ಹೊರಟಿರುವ ಬಿಜೆಪಿಗೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜನತೆ ತಕ್ಕ ಶಾಸ್ತಿ ಕಲಿಸುತ್ತಾರೆ ಎಂದು ಶಾಸಕ ಹೆಚ್‌ ಡಿ ರೇವಣ್ಣ ತಿಳಿಸಿದರು.

ಪಟ್ಟಣದ ಲಯನ್ಸ್‌ ಭವನದಲ್ಲಿ  ಸಂಜೆ ಗ್ರಾಮಪಂಚಾಯಿತಿ ಪೂರ್ವಭಾವಿ ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಬಿಜೆಪಿ ಶಾಸಕರು ನಮ್ಮ ಜಿಲ್ಲೆಯಲ್ಲಿ ಇದ್ದರೂ ಸಹ ಯಾವುದೇ ದ್ವೇಷದ ರಾಜಕಾರಣ ಮಾಡದೆ ಹಾಸನ ಜಿಲ್ಲೆಯ ಅಭಿವೃದ್ಧಿಗೆ ಸಾವಿರಾರು ಕೋಟಿ ಅನುದಾನ ತಂದಿದ್ದೆ, ಆದರೆ ಈ ಸರ್ಕಾರಕ್ಕೆ ಪ್ರಾಮಾಣಿಕತೆಯ ಬೆಲೆಯೇ ಗೊತ್ತಿಲ್ಲ ಎಂದರು.

ಗರಿಗೆದರಿದ ರಾಜಕೀಯ : ಸುಮಲತಾ ಆಯ್ಕೆಗೆ ಹೆಚ್ಚಿದ ಡಿಮ್ಯಾಂಡ್ ...

ಎಂದೂ ಕಾಣದಂತ ಭ್ರಷ್ಟಸರ್ಕಾರ ಎಂದರೆ ಈ ಬಿಜೆಪಿಸರ್ಕಾರ ಗುಮಾಸ್ತನಿಂದ ಹಿಡಿದು ಪೋಲಿಸ್‌ ಇಲಾಖೆವರೆಗೂ ವರ್ಗಾವಣೆ ವಿಚಾರದಲ್ಲಿ ಬಹುದೊಡ್ಡ ದಂಧೆ ಮಾಡುತ್ತಿದ್ದಾರೆ. ಹಣ ಕೊಟ್ಟರೆ ಇಂತ ಜಾಗಕ್ಕೆ ಇಷ್ಟುಎಂದು ಎರಡು ಹುಂಡಿ ಇಡಲಾಗಿದ್ದು ಅದರಲ್ಲಿ ಒಂದು ಹಾಸನ ಹಾಗೂ ಬೆಂಗಳೂರಿನಲ್ಲಿ ಇಟ್ಟು ಕಮಿಷನ್‌ ರೂಪದಲ್ಲಿ ವಸೂಲಿ ಮಾಡುತ್ತಿದ್ದಾರೆ.ಜಾತಿ ಜಾತಿಗಳ ನಡುವೆ ವಿಷಬೀಜ ಬಿತ್ತುತ್ತಿರುವ ಇವರಿಗೆ ದೇವರು ಸರಿಯಾದ ಶಾಸ್ತಿ ಮಾಡುತ್ತಾನೆ ಎಂದು ತಿಳಿಸಿದರು.

ಸಂಸದ ಪ್ರಜ್ವಲ್‌ ರೇವಣ್ಣ ಮಾತನಾಡಿ, ರಾಜಕೀಯದಲ್ಲಿ ಶೇ.20 ರಷ್ಟುಯುವಕರಿಗೆ ರಾಜಕೀಯ ಸ್ಥಾನಮಾನ ನೀಡಬೇಕು ಎಂಬ ಉದ್ದೇಶದಿಂದ ಈ ಗ್ರಾಮಪಂಚಾಯಿತಿ ಯಿಂದಲೇ ಯುವಕರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಈಗಾಗಲೇ ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ನಿಲ್ಲುವ ಅಭ್ಯರ್ಥಿ ಪ್ರತಿಯೊಬ್ಬರೂ 10 ಸಾವಿರ ತಮ್ಮ ಪಿಡಿಓ ಹತ್ತಿರ ಕೊಡಬೇಕು ಎಂದು ಹೇಳುವ ಸಚಿವರಿಗೆ ನಾಚಿಕೆಯಾಗಬೇಕು.ಮುಂದಿನ ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಲು ನಮ್ಮ ಕಾರ್ಯಕರ್ತರು ಹಾಗೂ ಸ್ಥಳೀಯ ನಾಯಕರ ಬೆಂಬಲದಿಂದ ಜಯಭೇರಿ ಬಾರಿಸಿ ನಮ್ಮ ಶಕ್ತಿ ಏನು ಎಂಬುದನ್ನು ತೋರಿಸುತ್ತೇವೆ ಎಂದು ಸವಾಲು ಹಾಕಿದರು.

ಶಾಸಕ ಎಚ್‌.ಕೆ ಕುಮಾರಸ್ವಾಮಿ ಮಾತನಾಡಿ, ಮುಂಬರುವ ಗ್ರಾ.ಪಂ ಚುನಾವಣೆಯಲ್ಲಿ ಎಲ್ಲಾ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು, ಕೆಲವು ಕಡೆಗಳಲ್ಲಿ ಇಬ್ಬರು ಮೂವರು ಅಕಾಂಕ್ಷಿಗಳು ಹುಟ್ಟುವುದು ಸಹಜ, ಇಂತಹ ಕಡೆ ಒಮ್ಮತಕ್ಕೆ ಬಂದು ಅಭ್ಯರ್ಥಿಯ ಆಯ್ಕೆಯಾಗಬೇಕು ಇಲ್ಲದಿದ್ದಲ್ಲಿ ಬೇರೆ ಪಕ್ಷದ ಬೆಂಬಲಿತರಿಗೆ ಅನುಕೂಲವಾಗುವುದು ಬೇಡ ಎಂದರು.

ಈ ಸಂದರ್ಭದಲ್ಲಿ ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ಬಾಳ್ಳು ಜಗನ್ನಾಥ್‌, ಜಿ.ಪಂ ಸದಸ್ಯರುಗಳಾದ ಉಜ್ಮಾ ರುಜ್ವಿ, ಸುಪ್ರದೀಪ್‌್ತ ಯಜಮಾನ್‌, ಪುರಸಭಾ ಅಧ್ಯಕ್ಷ ಕಾಡಪ್ಪ, ಉಪಾಧ್ಯಕ್ಷರಾದ ಜರೀನಾ, ಎಪಿಎಂಸಿ ಅಧ್ಯಕ್ಷ ಕವನ್‌ ಗೌಡ,ತಾ.ಪಂ ಸದಸ್ಯರಾದ ಚೈತ್ರಾ ನವೀನ್‌, ಚಂದ್ರಮತಿ, ಪುರಸಭೆ ಸದಸ್ಯರಾದ ಪ್ರಜ್ವಲ್‌, ಇಬ್ರಾಹಿಂ, ಜೆಡಿಎಸ್‌ ಮುಖಂಡರಾದ ಬೆಕ್ಕನಹಳ್ಳಿ ನಾಗರಾಜು,ಸ.ಬ ಭಾಸ್ಕರ್‌ ಕೊತ್ತನಹಳ್ಳಿ ತಮ್ಮಣ್ಣಗೌಡ, ಜೈಭೀಮ್‌ ಮಂಜು, ಅಲ್ಪಸಂಖ್ಯಾತ ಮುಖಂಡ ಎಸ್‌.ಎಸ್‌ ಅಸ್ಲಾಮ್‌ ಮುಂತಾದವರು ಹಾಜರಿದ್ದರು.