ಎಚ್‌.ಡಿ. ರೇವಣ್ಣ ಅವರ ಹಿರಿಯ ಪುತ್ರ ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ಕೂಡ ಅರೆಸ್ಟ್ ಆಗಿದ್ದಾರೆ. ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಸೂರಜ್ ರೇವಣ್ಣನನ್ನ ಪೊಲೀಸರು ಬಂಧಿಸಿದ್ದಾರೆ.  

ಹಾಸನ(ಜೂ.23):  ಮಾಜಿ ಸಚಿವ ರೇವಣ್ಣ ಅವರ ಕುಟುಂಬ ಕಾನೂನು ತನಿಖೆ ಸುಳಿಗೆ ಸಿಲುಕಿದೆ. ಹೌದು, ದೊಡ್ಡಗೌಡರ ಹಿರಿಯ ಮಗ ರೇವಣ್ಣ ಕುಟುಂಬಕ್ಕೆ ಇದೀಗ ಭಾರೀ ಸಂಕಷ್ಟ ಎದುರಾಗಿದೆ. 

ಅತ್ಯಾಚಾರ ಕೇಸ್‌ನಲ್ಲಿ ಎಚ್‌.ಡಿ. ರೇವಣ್ಣ ಅವರ ಕಿರಿಯ ಮಗ ಮಾಜಿ ಸಂಸದ ಪ್ರಜ್ಚಲ್ ರೇವಂಣ್ಣ ಬಂಧನವಾಗಿದೆ. ಇನ್ನು ಎಚ್‌.ಡಿ. ರೇವಣ್ಣ ಕೂಡ ಸಂತ್ರಸ್ಥೆ ಅಪಹರಣ ಕೇಸ್‌ನಲ್ಲಿ ಬಂಧನಕ್ಕೊಳಗಾಗಿ ಹತ್ತು ದಿನ ಜೈಲು ಅನುಭವಿಸಿ ಹೊರ ಬಂದಿದ್ದಾರೆ. ರೇವಣ್ಣ ಅವರು ಮೂರು ದಿನ ಪೊಲೀಸ್ ಕಸ್ಟಡಿ ಹಾಗೂ ಆರು ದಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರು. 

ಸಲಿಂಗ ಕಾಮದ ಆರೋಪ: ಸೂರಜ್‌ ರೇವಣ್ಣಗೆ ಪೊಲೀಸ್‌ ಗ್ರಿಲ್‌..!

ಇದೇ ಸಂತ್ರಸ್ಥೆ ಅಪಹರಣ ಕೇಸ್‌ನಲ್ಲಿ ಜಾಮೀನು ಅರ್ಜಿ ವಜಾ ಆಗಿ ಬಂಧನ ಭೀತಿ ಎದುರಿಸಿದ್ದರು ಭವಾನಿ ರೇವಣ್ಣ. ಹೈಕೋರ್ಟ್‌ನಲ್ಲಿ ಸಿಕ್ಕ ನಿರೀಕ್ಣಣಾ ಜಾಮೀನಿನಿಂದ ಬಂಧನದ ಭೀತಿಯಿಂದ ಪಾರಾಗಿದ್ದಾರೆ ಭವಾನಿ ರೇವಣ್ಣ. 
ಭವಾನಿ ರೇವಣ್ಣ ಮೈಸೂರು ಜಿಲ್ಲೆಯ ಕೆ.ಆರ್. ನಗರಕ್ಕೆ ಹೋಗುವಂತಿಲ್ಲ ಎನ್ನೊ ಷರತ್ತಿನ ಮೇಲೆ ಬೇಲ್ ಮಂಜೂರಾಗಿದೆ. ಭವಾನಿ ಕೆ.ಆರ್. ನಗರ ಸೇರಿ ಹಾಸನ ಜಿಲ್ಲೆಗೂ ಬಾರದಂತೆ ಷರತ್ತು ವಿಧಿಸಿ ಅವರಿಗೆ ಜಾಮೀನು ನೀಡಲಾಗಿದೆ. 
ಇದೀಗ ಹಿರಿಯ ಪುತ್ರ ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ಕೂಡ ಅರೆಸ್ಟ್ ಆಗಿದ್ದಾರೆ. ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಸೂರಜ್ ರೇವಣ್ಣನನ್ನ ಪೊಲೀಸರು ಬಂಧಿಸಿದ್ದಾರೆ.