ಮೈಸೂರು(ಮಾ.08): ನನ್ನ ಕುಟುಂಬದಲ್ಲಿ ನಾನು ಮದುವೆ ಮಾಡುವುದಕ್ಕೆ ಇವರಿಗೆ ಯಾಕೆ ಚಿಂತೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮೈಸೂರಿನಲ್ಲಿ ಪ್ರಶ್ನಿಸಿದ್ದಾರೆ.

ನಗರದಲ್ಲಿ ಶನಿವಾರ ಕಾರ್ಯಕರ್ತರನ್ನು ಭೇಟಿಯಾಗಿ ಮದುವೆಗೆ ಆಹ್ವಾನಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಖಿಲ್‌ ಕುಮಾರಸ್ವಾಮಿ ಅದ್ಧೂರಿ ಮದುವೆ ವಿಷಯ ಕುರಿತು ವಿಶ್ವನಾಥ್‌ ಹೇಳಿಕೆಗೆ ತಿರುಗೇಟು ನೀಡಿದರು. ನನ್ನ ಕುಟುಂಬದಲ್ಲಿ ನಾನು ಮದುವೆ ಮಾಡುವುದಕ್ಕೆ ಇವರಿಗೆ ಯಾಕೆ ಚಿಂತೆ? ಇವರು ಚುನಾವಣೆಗೆಯಲ್ಲಿ ಕೋಟ್ಯಂತರ ರು. ಖರ್ಚು ಮಾಡಿದ್ದರಲ್ಲ. ಇಂತಹ ಪರಿಸ್ಥಿತಿಯಲ್ಲಿ ಇದು ಬೇಕಿತ್ತಾ. ಅದು ಯಾರಪ್ಪನ ಮನೆ ದುಡ್ಡು. ಯಾರು ಅದಕ್ಕೆ ಬಂಡವಾಳ ಹಾಕಿದ್ದರು ಎಂದು ಪ್ರಶ್ನಸಿದರು.

ಮಂಡ್ಯದ ಮಗನೆಂದು ಬಿಎಸ್‌ವೈ ಮೋಸ: ಕುಮಾರಸ್ವಾಮಿ ಕಿಡಿ

ಒಂದೊಂದು ಕ್ಷೇತ್ರಕ್ಕೆ 60 ಕೋಟಿ, 100 ಕೋಟಿ ರು. ಖರ್ಚು ಮಾಡಿದ್ದರಲ್ಲ, ಆ ದುಡ್ಡು ಖರ್ಚು ಮಾಡುವಾಗ ಜನರ ಪರಿಸ್ಥಿತಿ ಇವರಿಗೆ ಅರಿವಾಗಲಿಲ್ಲವೇ? ಅವರಿಂದ ನಾನು ಹೇಳಿಸಿಕೊಳ್ಳಬೇಕಾ? ಈ ರಾಜ್ಯದಲ್ಲಿ ನನ್ನ ಕುಟುಂಬ ಹಾಗೂ ನಮ್ಮನ್ನು ಬೆಳಸಿದವರಿಗೆ ಹಾಗೂ ಅಭಿಮಾನಿಗಳಿಗೆ ಹಿತೈಷಿಗಳಿಗೆ ಆಹ್ವಾನ ಕೊಡೋದು ದುಂದು ವೆಚ್ಚನಾ ಎಂದು ಅವರು ಪ್ರಶ್ನಿಸಿದರು.

ರಾಜ್ಯದ ಬಿಜೆಪಿ ಸರ್ಕಾರ ನಾಳೆ ಬಿದ್ದು ನಮ್ಮ ಸರ್ಕಾರ ಅಧಿಕಾರಕ್ಕೆ ಬರಬಹುದು. ಆದ್ದರಿಂದ ಜಿ.ಟಿ. ದೇವೇಗೌಡರ ವಿಷಯದಲ್ಲಿ ಆತುರ ಬೇಡ. ನನಗೆ ಈ ವಿಷಯದಲ್ಲಿ ಆತುರವಿಲ್ಲ. ಆದರೆ ಮಾಧ್ಯಮದವರಿಗೆ ಏಕೆ ಆತುರ? ಅವರ ವಿಚಾರವನ್ನು ನಾನೊಬ್ಬನೇ ತೀರ್ಮಾನ ಮಾಡಲು ಆಗುವುದಿಲ್ಲ. ಇನ್ನು ವಿಧಾನ ಪರಿಷತ್‌ ಸದಸ್ಯ ರಮೇಶ್‌ ಬಾಬು ರಾಜೀನಾಮೆ ನೀಡಿರುವುದರಿಂದ ಏನು ತೊಂದರೆಯಾಗಿದೆ? ಅವರಿಗೆ ಎಲ್ಲಾ ಅಧಿಕಾರ ಕೊಟ್ಟರೆ ಚೆನ್ನಾಗಿರುತ್ತದೆ. ಅಧಿಕಾರ ಕೊಡದಿದ್ದಾಗ ವರಿಷ್ಠರ ನಡೆ ಚೆನ್ನಾಗಿ ಇರುವುದಿಲ್ಲ. ಇದು ಸರ್ವೇ ಸಾಮಾನ್ಯ. ಹಾಲಿ ವಿಧಾನ ಪರಿಷತ್‌ ಸದಸ್ಯರಿದ್ದಾರೆ. ಅವರನ್ನು ತೆಗೆದು ಹಾಕಿ ಟಿಕೆಟ್‌ ಕೊಡೋದಕ್ಕೆ ಆಗುತ್ತದಾ ಎಂದು ಅವರು ಕೇಳಿದರು.

ನಿರಾಶ್ರಿತರ ಹಸಿವು ನೀಗಿಸಿದ 'ಸ್ನೇಹಾ'ಗೆ ಮೋದಿ ಟ್ವಿಟರ್ ಖಾತೆ!, ಯಾರೀಕೆ?

ಈಗಾಗಲೇ ಅವರು ಒಂದು ಚುನಾವಣೆಯಲ್ಲಿ ನಿಂತು ಸೋತಿದ್ದಾರೆ. ಮತ್ತೆ ಆ ಚುನಾವಣೆ ಬರುವವರೆಗೆ ಕಾಯಕಬೇಕು. ಇಲ್ಲಿ ಅವರ ಸ್ವಾರ್ಥಕ್ಕಾಗಿ ಕಾರಣಗಳನ್ನು ನೀಡುವುದರ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ಯಾವುದೋ ಒಬ್ಬ ವ್ಯಕ್ತಿ ಪಕ್ಷ ಬಿಟ್ಟು ಹೋಗುವುದರಿಂದ ಪಕ್ಷಕ್ಕೆ ತೊಂದರೆ ಇಲ್ಲ. ಈ ಪಕ್ಷ ಬೆಳೆದಿರುವುದು ಕಾರ್ಯಕರ್ತರಿಂದ. ಇಲ್ಲಿಯ ತನಕ ಉಳಿದುಕೊಂಡು ಬಂದಿರುವುದು ಕಾರ್ಯಕರ್ತರಿಂದ. ಇದರ ಬಗ್ಗೆ ಕಾರ್ಯಕರ್ತರೆ ತೀರ್ಮಾನ ತಗೆದುಕೊಳ್ಳುತ್ತಾರೆ ಎಂದರು.

ಕುಮಾರಸ್ವಾಮಿ ನೀಡಿದ ಆಶ್ವಾಸನೆಗಳನ್ನು ಯಡಿಯೂರಪ್ಪ ಈಡೇರಿಸುವುದರಲ್ಲೇ ಸಾಕಾಗಿದೆ ಎಂಬ ಸಚಿವ ಬಿ.ಸಿ. ಪಾಟೀಲ್‌ ಹೇಳಿಕೆಗೆ ತಿರುಗೇಟು ನೀಡಿದ ಅವರು, ನಾವು ಅವತ್ತು ಕೊಟ್ಟಕಾರ್ಯಕ್ರಮಗಳಿಗೆ ಇಂದು ಯಡಿಯೂರಪ್ಪ ಅವರನ್ನು ಕರೆದುಕೊಂಡು ಹೋಗಿ ಗುದ್ದಲಿ ಪೂಜೆ ಮಾಡಿಸುತ್ತಿದ್ದಾರೆ. ನಾನು ಬಜೆಟ್‌ನಲ್ಲಿ ಇಟ್ಟಿದ್ದ ದುಡ್ಡಿನಲ್ಲಿ ಕಾರ್ಯಕ್ರಮ ಮಾಡುತ್ತಿದ್ದಾರೆ. ಇದು ಯಡಿಯೂರಪ್ಪನವರು ಇಟ್ಟದುಡ್ಡ? ನಾನು ಇಟ್ಟದುಡ್ಡು. 2018-19, 2019-20 ರ ಬಜೆಟ್‌ನಲ್ಲಿ ಹಿರೆಕೇರೂರು ಅಭಿವೃದ್ಧಿಗೆ ಬಜೆಟ್‌ನಲ್ಲಿ ಇಟ್ಟದುಡ್ಡಿನಲ್ಲಿ ಕಾರ್ಯಕ್ರಮ ಮಾಡುತ್ತಿದ್ದಾರೆ. ನಾನು ಮುಖ್ಯಮಂತ್ರಿ ಇದ್ದಾಗ ಎಷ್ಟುಬಾರಿ ಹಿರೆಕೇರೂರಿಗೆ ಕರೆದುಕೊಂಡು ಹೋದರು. ಎಷ್ಟುಕಾರ್ಯಕ್ರಮಕ್ಕೆ ಕೆಲಸ ಮಾಡಿಸಿ ಕೊಂಡಿದ್ದಾರೆ? ಯಾವ ಸಮಯದಲ್ಲಿ ಬೇಕಾದರೂ ಯಾರನ್ನಾದರೂ ಓಲೈಸುವ ವ್ಯಕ್ತಿ ಇವರು. ಇಂತಹ ವ್ಯಕ್ತಿ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ ಎಂದರು.

ಜೆಡಿಎಸ್‌ ಕಾರ್ಯಕರ್ತರ ಸಭೆ:

ಒಂದು ಕಡೆ ಪಕ್ಷ ಸಂಘಟನೆ ಬಗ್ಗೆ ಚರ್ಚೆ ಮಾಡಬೇಕಿದೆ. ಜೊತೆಯಲ್ಲೇ ಏ. 17 ರಂದು ನಮ್ಮ ಕುಟುಂಬ ಹಾಗೂ ಕಾರ್ಯಕರ್ತರೇ ನಿಂತು ಮಾಡುವ ಮದುವೆ ಸಮಾರಂಭಕ್ಕೆ ಕಾರ್ಯಕರ್ತರು ಯಾವ ರೀತಿ ಕಾರ್ಯ ನಿರ್ವಹಿಸಬೇಕು. ಜೊತೆಗೆ ಲಗ್ನಪತ್ರಿಕೆ ಕೊಡೋದು ಹಾಗೂ ಪಕ್ಷದ ಸಂಘಟನೆ. ಇದು ನೆಪಮಾತ್ರಕ್ಕೆ ಮದುವೆ ಸಮಾರಂಭವಷ್ಟೇ, ಪಕ್ಷ ಸಂಘಟನೆಗೂ ಒತ್ತು ಕೊಡುವ ಉದ್ದೇಶ ನಮಗಿದೆ ಎಂದು ಅವರು ಹೇಳಿದರು.