ಮಂಡ್ಯ(ಮಾ.08): ಸಿಎಂ ಯಡಿಯೂರಪ್ಪ ಮಂಡ್ಯ ಜಿಲ್ಲೆಯ ಮಣ್ಣಿನ ಮಗ ಎಂದು ಹೇಳುತ್ತಾರೆ. ಬಜೆಟ್‌ನಲ್ಲಿ ಮಂಡ್ಯವನ್ನು ಸಂಪೂರ್ಣವಾಗಿ ಕಡೆಗಣಿಸಿ ಜಿಲ್ಲೆಯ ಜನತೆಗೆ ದ್ರೋಹ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಶನಿವಾರ ಕಿಡಿಕಾರಿದ್ದಾರೆ.

ಶ್ರೀರಂಗಪಟ್ಟಣದ ಪ್ರವಾಸಿ ಮಂದಿರದಲ್ಲಿ ಪುತ್ರ ನಿಖಿಲ್ ಕುಮಾರಸ್ವಾಮಿ ಮದುವೆ ಹಿನ್ನೆಲೆಯಲ್ಲಿ ಜಿಲ್ಲೆಯ ಜನರು, ಜೆಡಿಎಸ್‌ ಶಾಸಕರು, ಮುಖಂಡರು ಹಾಗೂ ಜೆಡಿಎಸ್‌ ಕಾರ್ಯಕರ್ತರನ್ನು ಮದುವೆಗೆ ಆಹ್ವಾನಿಸುವ ಹಿನ್ನೆಲೆಯಲ್ಲಿ ರೂಪುರೇಷೆಗಳನ್ನು ಸಿದ್ದಪಡಿಸಲು ಜಿಲ್ಲೆಯ ಆರು ಶಾಸಕರನ್ನು ಒಳಗೊಂಡಂತೆ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದರು.

ತನ್ನ ಹೆಸರು ಹೇಳದ ಮಗಳನ್ನು ಕೋಲಿನಿಂದ ಹೊಡೆದು ಕೊಂದ ತಂದೆ..!

ನಾನು ಸಿಎಂ ಆಗಿದ್ದ ಅವಧಿ ಕಾರ್ಯಕ್ರಮಗಳನ್ನು ಈಗಾಗಲೇ ಸ್ಥಗಿತಗೊಳಿಸಿದ್ದಾರೆ. ಹಲವಾರು ಯೋಜನೆಗಳನ್ನು ಅನುಷ್ಠಾನಕ್ಕೆ ಕೊಡಲಿಲ್ಲ. ಈ ಬಾರಿ ಬಿಜೆಪಿ ಸರ್ಕಾರದ ಬಜೆಚ್‌ ನಲ್ಲಿ ಮಂಡ್ಯ ಜಿಲ್ಲೆಯನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಸಿಎಂ ಯಡಿಯೂರಪ್ಪನವರು ಮಂಡ್ಯ ಜಿಲ್ಲೆಯ ಮಣ್ಣಿನ ಮಗ ಎಂದು ಹೆಸರಿಗಟ್ಟಷ್ಟೆಹೇಳುತ್ತಾ ಜಿಲ್ಲೆಯನ್ನು ಸಂಪೂರ್ಣವಾಗಿ ಕಡೆಗಣಿಸಿ ಜಿಲ್ಲೆ ಮಣ್ಣಿನ ಜನತೆಗೆ ಮೋಸ ಮಾಡಿದ್ದಾರೆ ಎಂದು ಹೇಳಿದರು.

ಈ ವೇಳೆ ಶಾಸಕರಾದ ಸಿ.ಎಸ್‌.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ರವೀಂದ್ರ ಶ್ರೀಕಂಠಯ್ಯ, ಕೆ.ಸುರೇಶ್‌ಗೌಡ, ಎಂ.ಶ್ರೀನಿವಾಸ್‌, ಡಾ.ಅನ್ನದಾನಿ, ವಿಧಾನ ಪರಿಷತ್‌ ಸದಸ್ಯ ಅಪ್ಪಾಜಿಗೌಡ, ಮಾಜಿ ಶಾಸಕರಾದ ಪ್ರಭಾವತಿ ಜಯರಾಂ, ಕಲ್ಪನಾ ಸಿದ್ದರಾಜು, ಜಿಪಂ ಸದಸ್ಯರಾದ ಬಿ.ಎಲ್‌ .ದೇವರಾಜು, ಎಚ್‌ .ಟಿ.ಮಂಜು, ಜಿಲ್ಲಾಧ್ಯಕ್ಷ ಡಿ. ರಮೇಶ್‌, ತಾಲೂಕು ಅಧ್ಯಕ್ಷ ಮುಕುಂದ ಸೇರಿದಂತೆ ಇತರ ಜೆಡಿಎಸ್‌ ಪಕ್ಷದ ಜಿಪಂ, ತಾಪಂ,ಗ್ರಾಪಂ ಸದಸ್ಯರು ಮುಖಂಡರು ಉಪಸ್ಥಿತರಿದ್ದರು.