ನಿರಾಶ್ರಿತರ ಹಸಿವು ನೀಗಿಸಿದ 'ಸ್ನೇಹಾ'ಗೆ ಮೋದಿ ಟ್ವಿಟರ್ ಖಾತೆ!, ಯಾರೀಕೆ?
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಂದು 7 ಸ್ಫೂರ್ತಿದಾಯಕ ಮಹಿಳೆಯರಿಗೆ ತನ್ನ ಸೋಶಿಯಲ್ ಮಿಡಿಯಾ ಖಾತೆ ಬಿಟ್ಟು ಕೊಟ್ಟ ಮೋದಿ| ಇಂದು ಇಡೀ ದಿನ ಮೋದಿ ಟ್ವಿಟರ್ ಖಾತೆಗೆ ಮಹಿಳೆಯರೇ ಬಾಸ್| ಮೊದಲ ಟ್ವೀಟ್ ಮಾಡಿದ ಸ್ನೇಹಾ ಮೋಹನ್‌ದಾಸ್
ನವದೆಹಲಿ[ಮಾ.08]: ಅಂತರಾಷ್ಟ್ರೀಯ ಮಹಿಳಾ ದಿನದಂದು ಪ್ರಧಾನಿ ನರೇಂದ್ರ ಮೋದಿ ತನ್ನ ಟ್ವಿಟರ್ ಖಾತೆಯನ್ನು ಏಳು ಸ್ಫೂರ್ತಿದಾಯಕ ಮಹಿಳೆಯರಿಗೆ ನಿರ್ವಹಿಸುವ ಅವಕಾಶ ನೀಡುವುದಾಗಿ ಹೇಳಿದ್ದರು.. ಹೀಗಿರುವಾಗ ಮೋದಿ ಖಾತೆ ಯಾರು ನಿಭಾಯಿಸುತ್ತಾರೆಂಬ ಕುತೂಹಲ ಇಡೀ ದೇಶದಾದ್ಯಂತ ಮನೆ ಮಾಡಿತ್ತು. ಆದರೀಗ ಈ ಕುತೂಹಲಕ್ಕೆ ತೆರೆ ಬಿದ್ದಿದ್ದು, ಮೋದಿ ಖಾತೆಯಿಂದ ಚೆನ್ನೈನ ಸ್ನೇಹಾ ಮೊದಲ ಟ್ವೀಟ್ ಮಾಡಿದ್ದಾರೆ.
ಸ್ನೇಹಾ ಮೋಹನ್‌ದಾಸ್ ಫುಡ್ ಬ್ಯಾಂಕ್ ಇಂಡಿಯಾ ಸ್ಥಾಪಕಿ ಹಾಗೂ ಬಿಗ್ ಈವೆಂಡ್ ಸಂಸ್ಥೆಯ ಸಿಇಓ ಹಾಗೂ ಸಂಸ್ಥಾಪಕಿಯಾಗಿದ್ದಾರೆ. ಅವರು ಓರ್ವ ಡಬ್ಬಿಂಗ್ ಆರ್ಟಿಸ್ಟ್ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಚೆನ್ನೈನ ಇತೀರಾಜ್ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಪದವಿ ಪಡೆದಿರುವ ಸ್ನೇಹಾ, ಅಣ್ಣಾಮಲೈ ವಿಶ್ವವಿದ್ಯಾನಿಲಯದಿಂದ ಸಾಮಾಜಿಕ ಕಾರ್ಯ ವಿಚಾರದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದಾರೆ.
ಮೋದಿ ಟ್ವೀಟರ್ ಖಾತೆಗಿಂದು ಸ್ಫೂರ್ತಿದಾಯಕ ಮಹಿಳೆ ಬಾಸ್!
ಪ್ರಧಾನಿ ಮೋದಿ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಿರುವ ಸ್ನೇಹಾ ಅಲ್ಲಿ ತಮ್ಮ ಜೀವನದ ಕತೆಯನ್ನು ಬಿಡಿಸಿಟ್ಟಿದ್ದಾರೆ. ಇಲ್ಲಿ ಮಾತನಾಡಿರುವ ಸ್ನೇಹಾ 'ನೀವು ಥಾಟ್ ಫಾರ್ ಫುಡ್ ಕುರಿತು ಕೇಳಿರಬಹುದು. ಈಗ ಇದರೊಂದಿಗೆ ಕೈಜೋಡಿಸಿ ಬಡವರಿಗೆ ಉತ್ತಮ ಭವಿಷ್ಯ ಕಲ್ಪಿಸುವ ಸಮಯ ಬಂದಿದೆ. ಇದನ್ನು ಸ್ಥಾಪಿಸಲು ನಿರಾಶ್ರಿತರಿಗೆ ಊಟ ಹಂಚುತ್ತಿದ್ದ ನನ್ನ ತಾಯಿಯೇ ಪ್ರೇರಣೆ. ಆಕೆಯೇ ನನಗೆ ಈ ಅಭ್ಯಾಸ ಆಗುವಂತೆ ಮಾಡಿದ್ದು' ಎಂದಿದ್ದಾರೆ.
ಮತ್ತಷ್ಟು ಬರೆದುಕೊಂಡಿರುವ ಸ್ನೇಹಾ ನಾನು ಫುಡ್ ಬ್ಯಾಂಕ್ ಅಭಿಯಾನವನ್ನು ಆರಂಭಿಸಿದೆ. ಹಸಿವು ನೀಗಿಸುವ ನಿಟ್ಟಿನಲ್ಲಿ ಸ್ವಯಂ ಸೇವಕರೊಡಗೂಡಿ ಕೆಲಸ ಮಾಡಿದೆ. ಇವರಲ್ಲಿ ಬಹುತೇಕ ಮಂದಿ ವಿದೇಶಿಗರಾಗಿದ್ದಾರೆ. ನಾವು 20 ಕ್ಕೂ ಅಧಿಕ ಸಭೆಗಳನ್ನು ಆಯೋಜಿಸಿದೆವು, ಈ ಮೂಲಕ ಹಲವರಿಗೆ ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲು ಪ್ರೇರೇಪಿಸಿದೆವು ಎಂದಿದ್ದಾರೆ.
ಇಷ್ಟೇ ಅಲ್ಲದೇ, ನಿರಾಶ್ರಿತರ ಮತ್ತು ಬಡವರ ಹಸಿವು ನೀಗಿಸಿದ ಸ್ನೇಹಾ ತಾವು ಕೈಗೊಂಡ ಕಾರ್ಯಕ್ರಮಗಳ ಕುರಿತಾಗಿಯೂ ಇಲ್ಲಿ ಮಾಹಿತಿ ನೀಡಿದ್ದಾರೆ.
ಇನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಟ್ವಿಟರ್ ಖಾರತೆ ಬಿಟ್ಟು ಕೊಡುವುದಕ್ಕೂ ಮುನ್ನ ಮಹಿಳಾ ದಿನಾಚರಣೆಯ ಶುಭಾಶಯ ಕೋರಿದ್ದಾರೆ. ಈ ಕುರಿತು ಬರೆದುಕೊಂಡಿರುವ ಮೋದಿ 'ನಾರೀ ಶಕ್ತಿಯ ಉತ್ಸಾಹ ಹಾಗೂ ಚೈತನ್ಯಕ್ಕೆ ಒಂದು ಸೆಲ್ಯೂಟ್, ನಾನು ಕೆಲ ದಿನಗಳ ಹಿಂದೆ ಹೇಳಿದಂತೆ ನಾನಿನ್ನು ತೆರಳುತ್ತೇನೆ. ಇಂದು ಇಡೀ ದಿನ ನನ್ನ ಸೋಶಿಯಲ್ ಮೀಡಿಯಾ ಖಾತೆಗಳಿಂದ ಏಳು ಸ್ಫೂರ್ತಿದಾಯಕ ಮಹಿಳೆಯರು ಅವರ ಜೀವನದ ಕುರಿತು ನಿಮ್ಮೊಂದಿಗೆ ತಮ್ಮ ಅನುಭವ ಹಂಚಿಕೊಳ್ಳಲಿದ್ದಾಋಎ ಹಾಗೂ ಸಂವಾದ ನಡೆಸುತ್ತಾರೆ' ಎಂದಿದ್ದಾರೆ.
ಮಾರ್ಚ 8ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ