ಹಾಸನ [ಆ.12] : ರಾಜ್ಯದ ಹಲವು ಜಿಲ್ಲೆಗಳು ಪ್ರವಾಹದಿಂದ ತತ್ತರಿಸಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ರಾಜ್ಯದ 17 ಜಿಲ್ಲೆಗಳು ಹಾನಿಗೊಳಗಾಗಿದ್ದು ಹಾಸನವೂ ಕೂಡ ಅಕ್ಷರಶಃ ನಲುಗುತ್ತಿದೆ. 

ಭಾರೀ ಮಳೆಯಿಂದ ಹೇಮಾವತಿ ಉಕ್ಕಿ ಹರಿಯುತ್ತಿದೆ. ಹಲವು ಪ್ರದೇಶಗಳು ಜಲಾವೃತವಾಗಿದ್ದು, ಮಾಜಿ ಸಿಎಂ ಕುಮಾರಸ್ವಾಮಿ, ಎಚ್ ಡಿ ರೇವಣ್ಣ,ಪ್ರಜ್ವಲ್ ರೇವಣ್ಣ ಒಂದಾಗಿ ಹಾಸನ ಜಿಲ್ಲೆಯಲ್ಲಿ ನೆರೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇಲ್ಲಿನ ರಾಮನಾಥ ಪುರ, ಅರಕಲಗೂಡು, ಹೊಳೆನರಸೀಪುರದ ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿ ಇಲ್ಲಿ ಆಶ್ರಯ ಪಡೆದ ಜನರ ಯೋಗಕ್ಷೇಮ ವಿಚಾರಿಸಿದ್ದಾರೆ. 

ಮೂವರು ನಾಯಕರು ತಿಂಡಿ ತಿನಿಸುಗಳನ್ನು ವಿತರಣೆ ಮಾಡಿದ್ದು, ಜನರಿಗೆ ಸೂಕ್ತ ಆಶ್ರಯ ಹಾಗೂ ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ. ಈಗಾಗಲೇ ಉತ್ತರ ಕರ್ನಾಟಕ ನೆರೆ ಪೀಡಿತ ಪ್ರದೇಶಗಳಿಗೆ ಕುಮಾರಸ್ವಾಮಿ ಭೇಟಿ ನೀಡಿದ್ದು, ಇಂದು ಸಹೋದರರ ಕ್ಷೇತ್ರದಲ್ಲಿ ಜನರಿಗೆ ಸಮಾದಾನ ಹೇಳಿದರು.