ಸಾಲು ಮರದ ತಿಮ್ಮಕ್ಕನ ಪರಿಶ್ರಮಕ್ಕೆ ಬೆಲೆಕೊಟ್ಟ ಕುಮಾರಸ್ವಾಮಿ

ಗೊಬ್ಬರ, ನೀರು ಹಾಕಿ ಮರಗಳನ್ನು ಮಕ್ಕಳಂತೆ ಬೆಳೆಸಿರುವ ಸಾಲು ಮರದ ತಿಮ್ಮಕ್ಕನ ಮನವಿಗೆ ಸಿಎಂ ಎಚ್.ಡಿ.ಕುಮಾರಸ್ವಾಮಿ ಸ್ಪದಿಸುವುದರ ಮೂಲಕ ತಿಮ್ಮಕ್ಕನ ಪರಿಶ್ರಮಕ್ಕೆ ಬೀಳುತ್ತಿದ್ದ ಕೊಡಲಿಪೆಟ್ಟನ್ನು ತಪ್ಪಿಸಿದ್ದಾರೆ.

HD Kumaraswamy Responds saalumarada thimmakka Request over tree cut

ಬೆಂಗಳೂರು, [ಜೂನ್.03]: ಪದ್ಮಶ್ರೀ ಪುರಸ್ಕೃತೆ ಸಾಲು ಮರದ ತಿಮ್ಮಕ್ಕ ಅವರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಸ್ತೆ ಬದಿಯ ಮರಗಳನ್ನು ಕಡಿಯದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಬಾಗೇಪಲ್ಲಿ- ಹಲಗೂರು ಮಾರ್ಗದಲ್ಲಿ ರಸ್ತೆ ಅಗಲೀಕರಣಕ್ಕೆ ಮರಗಳನ್ನು ಕಡಿಯಲು ನಿರ್ಧರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸಾಲು ಮರದ ತಿಮ್ಮಕ್ಕ ಇಂದು [ಸೋಮವಾರ]  ಗೃಹ ಕಚೇರಿ ಕೃಷ್ಣದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದರು.

ಬಾಗೇಪಲ್ಲಿ- ಹಲಗೂರು ಮಾರ್ಗದಲ್ಲಿ  ರಾಜ್ಯ ಹೆದ್ದಾರಿ ಅಗಲೀಕರಣ ಕಾಮಗಾರಿ ಪ್ರಗತಿಯಲ್ಲಿದ್ದು, ಮಾಗಡಿ  ತಾಲ್ಲೂಕಿನ ಕುದೂರು ಗ್ರಾಮದಲ್ಲಿ ರಸ್ತೆ ಬದಿಯ ಮರಗಳನ್ನು ಕಡಿಯಲು ಮುಂದಾಗಿರುವ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದರು. 

ರಸ್ತೆ ವಿಸ್ತರಣೆಗೆ ಸಾಲು ಮರದ ತಿಮ್ಮಕ್ಕನ ಮರಗಳ ಬಲಿ?

ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಸಿಎಂ, ರಸ್ತೆ ಬದಿಯ ಮರಗಳನ್ನು ಕಡಿಯದಂತೆ ಸೂಚಿಸಿದರು. ಅಗತ್ಯ ಬಿದ್ದಲ್ಲಿ ರಸ್ತೆಯ ಮಾರ್ಗವನ್ನು ಬದಲಿಸುವಂತೆ ನಿರ್ದೇಶನ ನೀಡಿದರು. 

ತಮ್ಮ 106 ವಯಸ್ಸಿನಲ್ಲೂ ಮರಗಳನ್ನು ಹಾರೈಕೆ ಮಾಡುತ್ತಿದ್ದಾರೆ ಅಂದ್ರೆ ನಿಜಕ್ಕೂ ಗ್ರೇಟ್. ಇನ್ನೇನು ತಿಮ್ಮಕ್ಕ ಪಟ್ಟ  ಶ್ರಮಕ್ಕೆ ಬೀಳುತ್ತಿದ್ದ ಕೊಡಲಿಪೆಟ್ಟನ್ನು ಕುಮಾರಸ್ವಾಮಿ ಅವರು ತಪ್ಪಿಸಿದ್ದಾರೆ.

Latest Videos
Follow Us:
Download App:
  • android
  • ios