'ತಂದೆ ಮಗ ಸೋತು ಎಚ್‌ಡಿಕೆಗೆ ತಲೆ ಕೆಟ್ಟಿದೆ'..!

ಲೋಕಸಭಾ ಚುನಾವಣೆಯಲ್ಲಿ ತಂದೆ ಮತ್ತು ಮಗ ಸೋತಿರುವ ಕಾರಣ ತಲೆ ಕೆಟ್ಟಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ವಸತಿ ಸಚಿವ ವಿ. ಸೋಮಣ್ಣ ತಿರುಗೇಟು ನೀಡಿದ್ದಾರೆ.

hd kumaraswamy lost his mind after father son defeat says v somanna

ಚಿಕ್ಕಬಳ್ಳಾಪುರ(ನ.30): ಲೋಕಸಭಾ ಚುನಾವಣೆಯಲ್ಲಿ ತಂದೆ ಮತ್ತು ಮಗ ಸೋತಿರುವ ಕಾರಣ ತಲೆ ಕೆಟ್ಟಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ವಸತಿ ಸಚಿವ ವಿ. ಸೋಮಣ್ಣ ತಿರುಗೇಟು ನೀಡಿದ್ದಾರೆ.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್‌ ಪರ ತಾಲೂಕಿನಲ್ಲಿ ಶುಕ್ರವಾರ ಪ್ರಚಾರದಲ್ಲಿ ಭಾಗವಹಿಸಿದ್ದ ವೇಳೆ, ಸೋಮಣ್ಣ ಬಟ್ಟೆಕದಿಯುತ್ತಿದ್ದ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.

BJP ನೋಟು, ಕಾಂಗ್ರೆಸ್‌ಗೆ ಓಟು: ಡಿಕೆಶಿ ಭರ್ಜರಿ ಪ್ರಚಾರ.

ಮಂಡ್ಯದಲ್ಲಿ ಮಗ, ತುಮಕೂರಿನಲ್ಲಿ ತಂದೆ ಸೋತ ಕಾರಣ ಕುಮಾರಸ್ವಾಮಿಗೆ ತಲೆ ಕೆಟ್ಟಿದೆ. ನಾನು ಎಂದೂ ದೇವೇಗೌಡರಿಗೆ ಅಪಚಾರ ಮಾಡಿಲ್ಲ, ನಾನು ರಾಜಕಾರಣ ಆರಂಭಿಸಿದಾಗ ಕುಮಾರಸ್ವಾಮಿ ಇನ್ನೂ ಕಣ್ಣು ಬಿಟ್ಟಿರಲಿಲ್ಲ. ಹಾಗಾಗಿ ಯಾರು ಬಚ್ಚಾ ಎಂಬುದು ಅವರೇ ನಿರ್ಧಾರ ಮಾಡಲಿ. ಮತ್ತೊಬ್ಬರ ಮನ ನೋಯಿಸುವ ಮೊದಲು ತಮ್ಮ ಇತಿಹಾಸ ಏನು ಎಂಬುದನ್ನು ಕುಮಾರಸ್ವಾಮಿ ಅರಿಯಲಿ. ಕುಮಾರಸ್ವಾಮಿಯವರಿಗೆ ಅವರ ಭಾಷೆಯೇ ಶಿಕ್ಷೆ ನೀಡುತ್ತಿದೆ ಎಂದು ತಿರುಗೇಟು ನೀಡಿದ್ದಾರೆ.

ಪ್ರತಿಷ್ಠೆಯ ಕಣವಾದ ಚಿಕ್ಕಬಳ್ಳಾಪುರ ಉಪಚುನಾವಣೆ

ಸುಧಾಕರ್‌ ಅವರು ಉತ್ತಮ ನಾಯಕರಾಗಿದ್ದು, ಕಳೆದ ಎರಡು ಅವಧಿಯಲ್ಲಿ ಕ್ಷೇತ್ರದಲ್ಲಿ ಸಾಕಷ್ಟುಅಭಿವೃದ್ಧಿ ಮಾಡಿದ್ದಾರೆ. ಹಾಗಾಗಿ ಮತ್ತೊಮ್ಮೆ ಅವರನ್ನು ಆರಿಸಿದರೆ ಕ್ಷೇತ್ರ ಮತ್ತಷ್ಟುಅಭಿವೃದ್ಧಿಯತ್ತ ಸಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

'ನಂಗೆ ಡಿಕೆಶಿ ಸರ್ಟಿಫಿಕೇಟ್ ಬೇಕಾಗಿಲ್ಲ, ಅವ್ರೇನು ಎಂದು ದೇಶವೇ ನೋಡ್ತಿದೆ'..!

Latest Videos
Follow Us:
Download App:
  • android
  • ios