ಕೊರೋನಾ ವೈರಸ್ ತಡೆಗೆ ಎಚ್‌ಡಿಕೆಯಿಂದ ಸೋಂಕು ನಿವಾರಕ ಸುರಂಗ
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ರಾಮನಗರ ಮತ್ತು ಚನ್ನಪಟ್ಟಣ ಕ್ಷೇತ್ರಗಳ ಎಪಿಎಂಸಿ, ರೇಷ್ಮೆ ಮಾರುಕಟ್ಟೆಗಳಿಗೆ ಕೊರೋನಾ ಡಿಸ್‌ಇನ್ ಫೆಕ್ಷನ್ ಟನಲ್ (ಸೋಂಕು ನಿವಾರಕ ದ್ರಾವಣ ಸಿಂಪಡಣೆಯ ಸುರಂಗ) ಅನ್ನು ಕೊಡುಗೆಯಾಗಿ ನೀಡಿದ್ದಾರೆ.
ರಾಮನಗರ(ಏ.07): ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ರಾಮನಗರ ಮತ್ತು ಚನ್ನಪಟ್ಟಣ ಕ್ಷೇತ್ರಗಳ ಎಪಿಎಂಸಿ, ರೇಷ್ಮೆ ಮಾರುಕಟ್ಟೆಗಳಿಗೆ ಕೊರೋನಾ ಡಿಸ್‌ಇನ್ ಫೆಕ್ಷನ್ ಟನಲ್ (ಸೋಂಕು ನಿವಾರಕ ದ್ರಾವಣ ಸಿಂಪಡಣೆಯ ಸುರಂಗ) ಅನ್ನು ಕೊಡುಗೆಯಾಗಿ ನೀಡಿದ್ದು, ರಾಮನಗರ ಎಪಿಎಂಸಿ, ರೇಷ್ಮೆ ಗೂಡು ಮಾರುಕಟ್ಟೆಹಾಗೂ ಚನ್ನಪಟ್ಟಣ ಎಪಿಎಂಸಿ, ರೇಷ್ಮೆಗೂಡು ಮಾರುಕಟ್ಟೆಗಳ ಆವರಣದಲ್ಲಿ ಕೊರೋನಾ ಡಿಸ್‌ಇನ್‌ಫೆಕ್ಷನ್ ಟನಲ್ ಅಳವಡಿಸುವ ಕಾರ್ಯ ನಡೆಯುತ್ತಿದೆ.
"
ಟನಲ್‌ಗೆ ಏ. 6ರಂದು ಚಾಲನೆ ಸಿಗಲಿದೆ. ಇಲ್ಲಿ ಜನರ ಮೇಲೆ ಸೋಡಿಯಂ ಹೈಪೋಕ್ಲೋರೈಡ್ ದ್ರಾವಣ ಸಿಂಪಡಿಸಲಾಗುತ್ತದೆ. ಈ ದ್ರಾವಣ ಜನರ ಬಟ್ಟೆಮತ್ತು ದೇಹದ ಮೇಲೆ ವೈರಸ್ ಇದ್ದರೆ ಅದನ್ನು ನಾಶಪಡಿಸಲಿದೆ. ಇದರಿಂದ ವೈರಾಣು ಹರಡದಂತೆ ತಡೆಗಟ್ಟಲು ಸಾಧ್ಯವಾಗಲಿದೆ.
ದಾವಣಗೆರೆಯಲ್ಲಿ ಇಬ್ಬರು COVID19 ಸೋಂಕಿತರು ಗುಣಮುಖ..!
ಈಗಾಗಲೇ ದೇಶದ ಹಲವು ಕಡೆ ಇಂತಹ ಸುರಂಗಗಳನ್ನು ಮಾಡಿ ವೈರಸ್ ನಾಶ ಪಡಿಸಲು ಕ್ರಮ ವಹಿಸಲಾಗುತ್ತಿದೆ. ಲಾಕ್‌ಡೌನ್ ಘೋಷಿಸಿದ್ದರೂ ಜನರು ಅಗತ್ಯ ವಸ್ತುಗಳಿಗಾಗಿ ಓಡಾಡುವುದರಿಂದ ಈ ರೀತಿ ಮಾಡಲಾಗಿದೆ.
ಚಿತ್ರದುರ್ಗದಲ್ಲಿ ಸಿಡಿಲು ಬಡಿದು 8 ಮೇಕೆಗಳು ಸಾವು