ದಾವಣಗೆರೆ(ಏ.07): ಕೊರೋನಾ ಸೋಂಕು ಖಚಿತ ಪಟ್ಟಿದ್ದ ಒಬ್ಬ ಮಹಿಳೆ ಸೇರಿ ಮೂವರ ಪೈಕಿ ಗುಣಮುಖರಾದ ಇಬ್ಬರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಜಿ.ಬೀಳಗಿ ತಿಳಿಸಿದ್ದಾರೆ.

ಚಿತ್ರದುರ್ಗದ ಇಬ್ಬರು, ದಾವಣಗೆರೆಯ ಒಬ್ಬ ಸೇರಿ ಮೂವರು ಸೋಂಕಿತರಿಗೆ ಇಲ್ಲಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಈ ಪೈಕಿ ಇಬ್ಬರು ಗುಣಮುಖರಾಗಿ, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಮತ್ತೆ ಯಾವುದೇ ಹೊಸ ಕೋವಿಡ್‌-19 ಪ್ರಕರಣ ವರದಿಯಾಗಿಲ್ಲ ಎಂದು ಹೇಳಿದ್ದಾರೆ.

ಚಿತ್ರದುರ್ಗದಲ್ಲಿ ಸಿಡಿಲು ಬಡಿದು 8 ಮೇಕೆಗಳು ಸಾವು

ಮಾ.4ರಿಂದ ಈವರೆಗೆ 379 ಜನರು ಜಿಲ್ಲೆಯಿಂದ ವಿದೇಶ ಪ್ರಯಾಣ ಮಾಡಿ ಬಂದಿದ್ದಾರೆ. 28 ದಿನಗಳ ಅವದಿಯನ್ನು 115 ಜನ ಪೂರ್ಣಗೊಳಿಸಿದ್ದಾರೆ. 212 ಜನರು 14 ದಿನದ ಅವಲೋಕನ ಅವದಿ ಮುಗಿಸಿದ್ದಾರೆ. ಒಟ್ಟು 24 ಜನರನ್ನು ಮನೆಯಲ್ಲೇ ಪ್ರತ್ಯೇಕವಾಗಿರಿಸಿದ್ದು, 35 ಜನರನ್ನು ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿಡಲಾಗಿದೆ. ಈವರೆಗೆ 3 ಜನರು ಸೂಕ್ತ ಚಿಕಿತ್ಸೆ ಪಡೆದು, ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ.

ಲಾಕ್‌ಡೌನ್‌ ಉಲ್ಲಂಘಿಸಿದರೆ ಈ ಕಾಯ್ದೆ ಅಡಿಯಲ್ಲಿ ಕೇಸು ಹಾಕಬಹುದು!

ಹೊರ ದೇಶಗಳಲ್ಲಿ ಶಾಶ್ವತವಾಗಿ ನೆಲೆಸಿರುವ ವಿದೇಶಿಗರು ಜಿಲ್ಲೆಗೆ ಬಂದು, ಮತ್ತೆ ವಿದೇಶಗಳಿಗೆ ಈವರೆಗೆ 10 ಜನ ತೆರಳಿದ್ದಾರೆ. ವಿದೇಶಗಳಿಗೆ ಭೇಟಿ ನೀಡಿ, ನಮ್ಮ ಜಿಲ್ಲೆಗೆ ಬಂದು ಇತರೆ ಜಿಲ್ಲೆಗಳಿಗೆ ಈವರೆಗೆ 17 ಜನ ತೆರಳಿದ್ದಾರೆ. ಕೊರೋನಾ ವೈರಸ್‌ ಪರೀಕ್ಷೆಗಾಗಿ 65 ಮಾದರಿ ಈವರೆಗೆ ಕಳಿಸಿದ್ದು, 59 ಮಾದರಿ ನೆಗೆಟಿವ್‌ ಫಲಿತಾಂಶ ಬಂದಿದೆ. ಅವಲೋಕನ ಅವದಿಯಲ್ಲಿ ಬೇರೆ ಕಾರಣಕ್ಕಾಗಿ ಒಂದು ಸಾವು ಸಂಭವಿಸಿದ ಪ್ರಕರಣವಿದೆ ಎಂದು ಡಿಸಿ ತಿಳಿಸಿದ್ದಾರೆ.