ಹಾಸನ (ಸೆ.22): ಕಳೆದೆರೆಡು ದಿನಗಳಿಂದ ನಗರದ ಹೊರವಲಯದ ರೆಸಾರ್ಟ್‌ನಲ್ಲಿ ಕುಟುಂಬ ಸಮೇತರಾಗಿ ತಂಗಿರುವ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರು ಸೋಮವಾರ ಕೋವಿಡ್‌ ಪರೀಕ್ಷೆಗೆ ಒಳಗಾಗಿದ್ದು, ವರದಿಯಲ್ಲಿ ನೆಗೆಟಿವ್‌ ಬಂದಿದೆ.

ಪತ್ನಿ ಅನಿತಾ, ಪುತ್ರ ನಿಖಿಲ್‌ ಹಾಗೂ ಸೊಸೆ ರೇವತಿ ಜತೆ ತೀರ್ಥ ಕ್ಷೇತ್ರಗಳ ದರ್ಶನ ಮುಗಿಸಿಬಂದು ನಗರದ ಬೇಲೂರು ರಸ್ತೆಯ ಹೂವಿನಹಳ್ಳಿ ಬಳಿ ಇರುವ ಹೊಯ್ಸಳ ವಿಲೇಜ್‌ ರೆಸಾರ್ಟ್‌ನಲ್ಲಿ ತಂಗಿದ್ದಾರೆ. ವಿಧಾನಸಭೆ ಅ​ವೇಶನದಲ್ಲಿ ಪಾಲ್ಗೊಳ್ಳಲು ಕೊರೋನಾ ಪರೀಕ್ಷೆ ಕಡ್ಡಾಯವಾಗಿರುವುದರಿಂದ ಕುಮಾರಸ್ವಾಮಿ ಅವರು ಈ ಪರೀಕ್ಷೆಗೆ ಒಳಗಾಗಿದ್ದರು. ಹಾಗಾಗಿ ಜಿಲ್ಲಾ ಆರೋಗ್ಯಾ​ಧಿಕಾರಿ ಡಾ.ಸತೀಶ್‌ ಹಾಗೂ ಸಿಬ್ಬಂದಿಗಳೇ ಖುದ್ದಾಗಿ ರೆಸಾರ್ಟ್‌ಗೆ ತೆರಳಿ ಗಂಟಲ ದ್ರವದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆ ನಡೆಸಿದ ನಂತರ ನೆಗೆಟಿವ್‌ ಬಂದಿದೆ.

ನಾವಿಬ್ರು ಜೋಡೆತ್ತುಗಳು : ಮುನಿಸು ಮರೆತು ಒಂದಾದ ಕೈ ನಾಯಕರು ...

ರೆಸಾರ್ಟ್‌ನಲ್ಲಿ ಇರುಷ್ಟುದಿನ ಕುಮಾರಸ್ವಾಮಿ ಅವರು ಪೂರ್ತಿ ಸಮಯವನ್ನು ಕುಟುಂಬಕ್ಕೆ ಮೀಸಲಿರಿಸಿದ್ದಾರೆ. ಹಾಗಾಗಿ ಜಿಲ್ಲೆಯ ಯಾವೊಬ್ಬ ಮುಖಂಡರನ್ನೂ ಭೇಟಿಯಾಗಿಲ್ಲ. ಆದರೆ, ಪಕ್ಷದಲ್ಲಿ ರೇವಣ್ಣ ಅವರ ಸರ್ವಾಧಿ​ಕಾರಿ ಧೊರಣೆಯಿಂದಾಗಿ ಬಹಿರಂಗವಾಗಿ ಅಸಮಾಧಾನ ಹೊರಹಾಕಿರುವ ಅರಕಲಗೂಡು ಶಾಸಕರಾ ಎ.ಟಿ.ರಾಮಸ್ವಾಮಿ ಅವರನ್ನು ಮಾತ್ರ ಭೇಟಿಯಾಗಿ ಒಂದಷ್ಟುಮಾತುಕತೆ ನಡನೆಸಿದ್ದಾರೆ ಎಂದು ಆಪ್ತ ವಲಯದ ಮೂಲಗಳು ತಿಳಿಸಿವೆ.