ತುಮಕೂರು (ಸೆ.20): ಮಾಜಿ ಸಚಿವ ಹಾಗೂ ಶಿರಾ ಅಭ್ಯರ್ಥಿ ಜಯಚಂದ್ರ ಹಾಗೂ ಕೆ.ಎನ್ ರಾಜಣ್ಣ ಮುನಿಸು ಮರೆತು ಒಂದಾಗಿದ್ದಾರೆ.

 ಮಾಜಿ ಶಾಸಕ ಕೆ.ಎನ್.ರಾಜಣ್ಣ ಮನೆಗೆ ಮಾಜಿ ಸಚಿವ ಟಿ.ಬಿ.ಜಯಚಂದ್ರ ಭೇಟಿ ನೀಡಿದ್ದಾರೆ. ಶಿರಾ ಉಪ ಚುನಾವಣೆ ಹಿನ್ನೆಲೆಯಲ್ಲಿ ಭೇಟಿ ಕೊಟ್ಟು ಮಾತುಕತೆ ನಡೆಸಿದ್ದು, ಸಹಕಾರ ಕೋರಿದ್ದಾರೆ. 
 
ಭೇಟಿ ಬಳಿಕ ಮಾತನಾಡಿದ ಜಯಚಂದ್ರ ಜಿಲ್ಲಾ ಕಾಂಗ್ರೆಸ್‌ ನಲ್ಲಿ ರಾಜಣ್ಣ ಮತ್ತು ನಾನು ಜೋಡೆತ್ತುಗಳು. 50 ವರ್ಷದಿಂದ ತುಮಕೂರು ರಾಜಕಾರಣದಲ್ಲಿ ಉಳಿದವರು ನಾವಿಬ್ಬರೇ. 5 ದಶಕ ಅವಧಿಯಲ್ಲಿ ಒಂದೇ ಪಕ್ಷದಲ್ಲಿ ಇರಬೇಕಾದರೆ ಭಿನ್ನಾಭಿಪ್ರಾಯ, ವ್ಯತ್ಯಾಸ ಗಳು ಸಹ. ಆ ಹಿನ್ನಲೆಯಲ್ಲಿ ಕೆಲವೊಮ್ಮೆ ರಾಜಕೀಯ ತಪ್ಪು ನಿರ್ಧಾರ ಗಳು ಆಗಿರಬಹುದು. ರಾಜಣ್ಣ ಐದನೇ ಬಾರಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದಾರೆ ಅವರಿಗೆ ಅಭಿನಂದನೆ‌ ಸಲ್ಲಿಸಲು ಬಂದಿದ್ದೇನೆ ಎಂದರು.

ಜೊತೆಗೆ ಶಿರಾ ಉಪ ಚುನಾವಣೆ ಗೆ ಸಹಕಾರ ಕೋರಿದ್ದೇನೆ. ಉಪ ಚುನಾವಣೆ ರಾಜ್ಯ ರಾಜಕಾರಣದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ.ಎಲ್ಲಾ ಪಕ್ಷಗಳು ಪ್ರತಿಷ್ಠೆಯಾಗಿ ತೆಗೆದುಕೊಳ್ಳಲಿದೆ. ವಿಪಕ್ಷನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಜೊತೆ ಸುಧೀರ್ಘ ಚರ್ಚೆ ಮಾಡಿದ್ದೇವೆ.

'ಸಿದ್ಧರಾಮಯ್ಯ ಊಸರವಳ್ಳಿ ರಾಜಕಾರಣದ ನಿಜ ಬಣ್ಣ ಬಯಲು' ...

ಬಳಿಕ ನಾವೆಲ್ಲಾ ಒಂದಾಗಿ ಚುನಾವಣೆ ಎದುರಿಸಲು ಸಿದ್ಧರಾಗಿದ್ದೇವೆ.  ರಾಜಣ್ಣ ನಮಗೆ ಸಹಕಾರ ನೀಡಲಿದ್ದಾರೆ.

ಮುನಿಸಿಲ್ಲ ನಮ್ಮ ನಡುವೆ

 ಶಿರಾ ಉಪಚುನಾವಣೆಗೆ ಭರ್ಜರಿ ತಯಾರಿ ನಡೆಯುತ್ತಿದೆ. ಜಯಚಂದ್ರ ಅವರೇ ಕಾಂಗ್ರೆಸ್ ಅಭ್ಯರ್ಥಿ ಎಂದು ಘೋಷಣೆಯಾಗಿದೆ. ಕೆಪಿಸಿಸಿ ಸಭೆಯಲ್ಲಿ ಈ ಬಗ್ಗೆ ತೀರ್ಮಾನವಾಗಿದೆ ಎಂದು ಮಾಜಿ ಶಾಸಕ ರಾಜಣ್ಣ ಹೇಳಿದ್ದಾರೆ. 

ತುಮಕೂರಿನಲ್ಲಿ ಮಾತನಾಡಿದ ರಾಜಣ್ಣ, ಡಿಕೆ ಶಿವಕುಮಾರ್ ಅವರಿಗೆ ಇದು ಮೊದಲ ಚುನಾವಣೆ. ಜಯಚಂದ್ರ ಗೆಲುವಿಗಿಂತ ಇದು ಕಾಂಗ್ರೆಸ್ ಗೆಲುವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಜಯಚಂದ್ರ ಬೆಂಬಲಿಸುವಂತೆ ಮುಖಂಡರು ಹೇಳಿದ್ದಾರೆ. ಹಾಗಾಗಿ ನನ್ನ ಬೆಂಬಲ ಅವರಿಗಿದೆ. ಗೆಲ್ಲಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಸಾಗಿದೆ. ಗೆದ್ದೇ ಗೆಲ್ಲುವ ವಿಶ್ವಾಸವೂ ನಮಗಿದೆ ಎಂದರು. 

ಇನ್ನು ಜಯಚಂದ್ರ ಹಾಗೂ ನನ್ನ ನಡುವೆ ಯಾವುದೇ ವೈಯಕ್ತಿಕ ದ್ವೇಷ ಇಲ್ಲ. ಕೆಲವೊಮ್ಮೆ ಕೆಲ ಸಂಶಯಗಳಿಂದ ವ್ಯತ್ಯಾಸವಾಗಿತ್ತು ಎಂದರು.