JDSನವರು ಬಿಜೆಪಿ ಶಾಸಕರ ಮನೆ ಬಾಗಿಲಿಗೆ ಅಲೆದಾಡುತ್ತಿದ್ದಾರೆ. ಇವರಿಗೆ ಸಿಎಂ ಕೂಡ ಸಹಾಯ ಮಾಡುತ್ತಿದ್ದಾರೆ ಎಂದು ಸಚಿವ ಸಿ.ಪಿ.ಯೋಗೇಶ್ವರ್ ಹೊಸ ಬಾಂಬ್ ಸಿಡಿಸಿದ್ದಾರೆ. 

ಮೈಸೂರು (ಮಾ.02): ಕುಮಾರಸ್ವಾಮಿ ಅವರು ನನ್ನ ಬಗ್ಗೆ ಬಹಳ ಕೇವಲವಾಗಿ ಮಾತಾಡುತ್ತಾರೆ. ನಾನು ನನ್ನ ರಾಜಕೀಯ ಅಸ್ತಿತ್ವಕ್ಕೆ ಹೋರಾಟ ,ಮಾಡುತ್ತಿದ್ದೇನೆ. ಕುಮಾರಸ್ವಾಮಿ ಏನೇ‌ ಮಾತಾಡಿದರು ನಾನು ವೈಯಕ್ತಿಕವಾಗಿ ಹೇಳಿಕೆ‌ ಕೊಡಲ್ಲ ಎಂದು ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಮೈಸೂರಿನಲ್ಲಿಂದು ಮಾತನಾಡಿದ ಸಚಿವ ಸಿಪಿ ಯೋಗೇಶ್ವರ್ ಕುಮಾರಸ್ವಾಮಿ ಅವರ ರಾಜಕೀಯ ಧೋರಣೆ ಮಾತ್ರ ವಿರೋಧ ಮಾಡುತ್ತಾ ಇದ್ದೇನೆ. ಪರಿಷತ್‌ನಲ್ಲಿ ಬಿಜೆಪಿ ಜೊತೆ, ಮೈಸೂರಲ್ಲಿ ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳುತ್ತಾ. ಅವರ ಈ ಇಬ್ಬಂಧಿ‌ತನದ ನೀತಿಯನ್ನ ಮಾತ್ರ ನಾನು ವಿರೋಧ ಮಾಡುತ್ತಿದ್ದೇನೆ ಎಂದರು.

ನನ್ನ ತಾಳ್ಮೆ ಕಟ್ಟೆ ಹೊಡೆದಿದೆ: ಮತ್ತೆ ಎಚ್‌ಡಿಕೆ ವಿರುದ್ಧ ಸಚಿವರ ಮಾತಿನ ಸಮರ .

ನನ್ನ ಹೇಳಿಕೆ ತಪ್ಪು ಎಂದರೆ ನಾನೇನು ಮಾಡಲು ಆಗುವುದಿಲ್ಲ. ದಿನೆ‌ ದಿನೆ ಜೆಡಿಎಸ್ ಜನಾಭಿಪ್ರಾಯ ಕಳೆದುಕೊಂಡಿದೆ. ಮಂಡ್ಯ ಹಾಗೂ ತುಮಕೂರಿನಲ್ಲಿ‌ ಸೋತಾಗ ಅವರಿಗೆ ಅದು ಗೊತ್ತಾಗಿದೆ. ಬಿಜೆಪಿಯ ಸಚಿವರ ಮನೆ ಬಾಗಿಲಿಗೆ ಜೆಡಿಎಸ್‌ನವರು ಅಲೆದಾಡುತ್ತಿದ್ದಾರೆ. ಸಿಎಂ ಕೂಡ ಅವರಿಗೆ ಸಹಾಯ ಮಾಡುತ್ತಿದ್ದಾರೆ ಎಂದು ಸ್ಫೋಟಕ ಹೇಳಿಕೆ ನೀಡಿದರು. 

ಇಂತಹ ವಿಚಾರವನ್ನು ನಾನು ಪಕ್ಷದ ವೇದಿಕೆಯಲ್ಲಿ ಮಾತಾಡುತ್ತೇನೆ ಅಷ್ಟೇ ಎಂದು ಜೆಡಿಎಸ್ ಮುಖಂಡರ ವಿರುದ್ಧ ಯೋಗೇಶ್ವರ್ ವಾಗ್ದಾಳಿ ನಡೆಸಿದರು.