Asianet Suvarna News Asianet Suvarna News

ಕಾಮೇಗೌಡರ ಆರೋಗ್ಯ ಬಗ್ಗೆ ಎಚ್‌ಡಿಕೆ ಆತಂಕ..! ಅಗತ್ಯ ಕ್ರಮ ಕೈಗೊಂಡಿದ್ದೇನೆ ಎಂದ ಸಚಿವ ಸುಧಾಕರ್

ಪ್ರಧಾನಿ ಮೋದಿ ಅವರ ಶ್ಲಾಘನೆಗೆ ಪಾತ್ರರಾದ ಮಂಡ್ಯದ ದಾಸನದೊಡ್ಡಿ ಕಾಮೇಗೌಡರು ಕೊರೋನಾ ಸೋಂಕಿತರಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಮಾಜಿ ಸಿಎಂ ಎಚ್. ಡಿ ಕುಮಾರಸ್ವಾಮಿ ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

HD Kumara swamy express anxiety about kame gowda health
Author
Bangalore, First Published Jul 25, 2020, 1:16 PM IST

ಬೆಂಗಳೂರು(ಜು.25): ಪ್ರಧಾನಿ ಮೋದಿ ಅವರ ಶ್ಲಾಘನೆಗೆ ಪಾತ್ರರಾದ ಮಂಡ್ಯದ ದಾಸನದೊಡ್ಡಿ ಕಾಮೇಗೌಡರು ಕೊರೋನಾ ಸೋಂಕಿತರಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಮಾಜಿ ಸಿಎಂ ಎಚ್. ಡಿ ಕುಮಾರಸ್ವಾಮಿ ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಕೊರೋನಾ ಸೋಂಕು ಮತ್ತು ತೀವ್ರ ಕಾಲು ನೋವಿನಿಂದ ಕಾಮೇಗೌಡರು ಬಳಲುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಶೌಚಕ್ಕೆ ಹೋಗುವ ತೊಂದರೆ ತಪ್ಪಿಸಲು ಕಾಮೇಗೌಡರು ಅನ್ನಾಹಾರವನ್ನೂ ತ್ಯಜಿಸಿದ್ದಾರೆ.

ಶೌಚಕ್ಕೆ ಹೋಗುವ ತೊಂದರೆ: ಅನ್ನಾಹಾರ ಸೇವನೆ ನಿಲ್ಲಿಸಿದ ಕಾಮೇಗೌಡರು

ಇದೀಗ ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ಟ್ವೀಟ್ ಮಾಡಿ, ಕೆರೆ ಕಾಮೇಗೌಡರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಅವರನ್ನು ಉಳಿಸಿಕೊಳ್ಳಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ರಾಜ್ಯ ಸರ್ಕಾರ ತುರ್ತು ಅವರ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ  ಮಾಡುವಂತೆ ಒತ್ತಾಯಿಸುತ್ತೇನೆ ಎಂದು ಬರೆದಿದ್ದಾರೆ.

ಪ್ರಧಾನಿ ಮೋದಿಗೆ ಟಾಂಗ್:

ಪ್ರಧಾನಿ ಮೋದಿ ಕಾಮೇಗೌಡರನ್ನು ಹೊಗಳಿದ್ದನ್ನು ನೆನಪಿಸಿದ ಅವರು, ಮನ್ ಕಿ ಬಾತ್ ನಲ್ಲಿ ಕೂಡ ಪ್ರಧಾನಿಯವರು ಕೊಂಡಾಡಿದ್ದಾರೆ. ಮುಖ್ಯಮಂತ್ರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಹೊಗಳಿ ಹೊನ್ನಶೂಲಕ್ಕೆ ಏರಿಸಿದರೆ ಸಾಲದು. ಅನಾರೋಗ್ಯದಿಂದ ಅವರು ಸೋತು ಸುಣ್ಣವಾಗಿರುವಾಗ ಒಳ್ಳೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಸರ್ಕಾರ ಮುಂದಾಗಬೇಕಿದೆ ಎಂದು ಟಾಂಗ್ ಕೊಟ್ಟಿದ್ದಾರೆ.

ಈ ವಿಚಾರವಾಗಿ ಸಚಿವ ಕೆ. ಸುಧಾಕರ್ ಅವರು ಟ್ವೀಟ್ ಮಾಡಿದ್ದು, ಅಗತ್ಯ ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ಕಾಮೇಗೌಡರ ಆರೋಗ್ಯ ಪರಿಸ್ಥಿತಿ ಗಂಭೀರವಾಗಿರುವುದು ನನ್ನ ಗಮನಕ್ಕೆ ಬಂದ ಕೂಡಲೇ ಮಂಡ್ಯ ವೈದ್ಯಕೀಯ ಕಾಲೇಜಿನ ನಿರ್ದೇಶಕರಿಗೆ ಕರೆ ಮಾಡಿ ಅವರನ್ನು ಆಸ್ಪತ್ರೆಗೆ ದಾಖಲಿಸಿಕೊಂಡು ಚಿಕಿತ್ಸೆ ಒಡಗಿಸಬೇಕೆಂದು ಸೂಚನೆ ನೀಡಿದ್ದೇನೆ. ಇಡೀ ದೇಶಕ್ಕೆ ಸ್ಪೂರ್ತಿಯಾಗಿರುವ ಕಾಮೇಗೌಡರು ಶೀಘ್ರವಾಗಿ ಗುಣಾಮುಖರಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.

Follow Us:
Download App:
  • android
  • ios