JDS Jaladhare: ನಮ್ಮ ಹಕ್ಕಿಗೆ ನಾವು ಹೋರಾಟ ನಡೆಸಬೇಕು: ಎಚ್‌.ಡಿ. ದೇವೇಗೌಡ

ರಾಜ್ಯದ ಎಲ್ಲಾ ಜನರಿಗೂ ಸಮರ್ಪಕವಾಗಿ ನೀರಾವರಿ ಸೌಲಭ್ಯ ಕಲ್ಪಿಸಲು ಹೋರಾಟ ನಡೆಸುವುದಾಗಿ ಜೆಡಿಎಸ್‌ ವರಿಷ್ಠ, ಮಾಜಿ ಪ್ರದಾನಿ ಎಚ್‌.ಡಿ. ದೇವೇಗೌಡ ಹೇಳಿದರು.

hd devegowda jds jaladhare karnataka politics at mysuru water projects in karnataka gvd

ಎಚ್‌.ಡಿ. ಕೋಟೆ (ಏ.17): ರಾಜ್ಯದ (Karnataka) ಎಲ್ಲಾ ಜನರಿಗೂ ಸಮರ್ಪಕವಾಗಿ ನೀರಾವರಿ ಸೌಲಭ್ಯ ಕಲ್ಪಿಸಲು ಹೋರಾಟ ನಡೆಸುವುದಾಗಿ ಜೆಡಿಎಸ್‌ (JDS) ವರಿಷ್ಠ, ಮಾಜಿ ಪ್ರದಾನಿ ಎಚ್‌.ಡಿ. ದೇವೇಗೌಡ (HD Devegowda) ಹೇಳಿದರು. ತಾಲೂಕಿನ ಬೀಚನಹಳ್ಳಿಯ ಕಬಿನಿ ಜಲಾಶಯ ಬಳಿ ಶನಿವಾರ ಜನತಾ ಜಲಧಾರೆ (Janata Jaladhare) ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇದರಿಂದ ಜನತಾದಳದಿಂದ ಶ್ರೇಷ್ಠವಾದ ಕಾರ್ಯಕ್ರಮವನ್ನು ಅಳವಡಿಸಲಾಗಿದ್ದು, ಇಂದು ಚಾಲನೆ ನೀಡಲಾಗಿದೆ ಎಂದರು. ಕರ್ನಾಟಕದಲ್ಲಿ ಅನೇಕ ಉಪ ನದಿಗಳು ಇವೆ. ದೊಡ್ಡ ನದಿಗಳು ಇವೆ. ಆದರೆ ನೀರು ಸಂಗ್ರಹಣೆ ಮಾಡಿ ಕುಡಿವುದಕ್ಕೆ, ವ್ಯವಸಾಯಕ್ಕೆ ನೀಡಲು ಶಕ್ತರಾಗಿಲ್ಲ ಎಂದು ಅವರು ವಿಷಾದಿಸಿದರು.

ನಮ್ಮ ನೆರೆ ರಾಜ್ಯಗಳ ಬಗ್ಗೆ ನಮಗೆ ಬೇಸರವಿಲ್ಲ, ಅಣ್ಣ, ತಮ್ಮಂದಿರಂತೆ ಬಾಳೋಣ. ನಮ್ಮ ಹಕ್ಕಿಗಾಗಿ ನಾವು ಹೋರಾಟ ನಡೆಸಬೇಕಾಗಿದೆ. 1991ರಲ್ಲಿ ಕಾಂಗ್ರೆಸ್‌ನವರು ಮಾತನಾಡಲಿಲ್ಲ, ನಮ್ಮ ಪರವಾಗಿ ಯಾರೂ ಇಲ್ಲ. ನಮಗೆ ವಂಚನೆಯಾಗಿದೆ. ಕಾವೇರಿ ನೀರಿಗಾಗಿ ಪಕ್ಕದ ತಮಿಳುನಾಡಿಗೆ 403 ಟಿಎಂಸಿ ನೀರು ಕರ್ನಾಟಕಕ್ಕೆ 280 ಟಿಎಂಸಿ ನೀರು ನೀಡಲು ತೀರ್ಮಾನವಾಯಿತು. ಈ ವಿಚಾರ ಯಾವುದೇ ಒಂದು ಜಾತಿ, ವ್ಯಕ್ತಿಯ ವಿಚಾರವಾಗಿರುವುದಿಲ್ಲ. ಕಬಿನಿ ವಿಚಾರದಲ್ಲಿ ಹೋರಾಟ ನಡೆಸಿದರೂ ಯಾವುದೇ ಪ್ರಯೋಜನ ಆಗಲಿಲ್ಲ. ನಾವು ನೀರಿಗಾಗಿ ಹೋರಾಟ ಮಾಡುವ ದಿನಗಳು ಬರುತ್ತಿದೆ ಎಂದು ತಿಳಿಸಿದರು.

Jaladhare: ಜೆಡಿಎಸ್‌ ಜಲಧಾರೆ ಯಾತ್ರೆಗೆ ದೇವೇಗೌಡ ನಿಶಾನೆ

ವಿಧಾನ ಪರಿಷತ್‌ ಮಾಜಿ ಸದಸ್ಯ ಟಿ.ಎ. ಶರವಣ ಮಾತನಾಡಿ, ಮುಂದಿನ 2023ರ ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್‌ 130ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಿ ಅಧಿಕಾರ ಹಿಡಿಯಲಿದ್ದು, ರಾಜ್ಯದ ನೀರಾವರಿ ಸಮಸ್ಯೆಗೆ ಪರಿಹಾರ ಲಭಿಸಲಿದೆ ಎಂದರು. ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ ಮಾತನಾಡಿ, ತಾಲೂಕಿನ ತಾರಕ ಅಣೆಕಟ್ಟು ನಿರ್ಮಿಸಿದ ಕೀರ್ತಿ ದೇವೇಗೌಡರಿಗೆ ಸಲ್ಲುತ್ತದೆ. ತಾಲೂಕಿನಲ್ಲಿ ತಾರಕ ಅಣೆಕಟ್ಟು ನಿರ್ಮಿಸಿ ತಾಲೂಕಿನ ಎಲ್ಲ ಕಡೆಗಳಿಗೂ ನೀರು ಹರಿಯುವಂತೆ ಮಾಡಿದ್ದಾರೆ. ತಾರಕ ಅಣೆಕಟ್ಟೆಯನ್ನು ನಿರ್ಮಿಸಿದೇ ಇದಿದ್ದರೆ ತಾಲೂಕಿನ ಜನತೆ ರೈತರು ಮಳೆಯನ್ನು ಮಾತ್ರ ಆಶ್ರಯಿಸಬೇಕಾಗಿತ್ತು. ನಾವು ಅವರನ್ನು ನೆನೆಯಬೇಕಾಗಿದೆ. ಈ ಅಭಿಮಾನದಿಂದಲೇ ತಾಲೂಕಿನ ಬೀಚನಹಳ್ಳಿಯಲ್ಲಿಯೇ ಜನತಾ ಜಲಧಾರೆಗೆ ಚಾಲನೆ ನೀಡಲು ಬಂದಿದ್ದಾರೆ ಎಂದರು.

ಶಾಸಕ ಎಂ.ಅಶ್ವಿನ್‌ಕುಮಾರ್‌, ವಿಧಾನ ಪರಿಷತ್‌ ಸದಸ್ಯ ಸಿ.ಎನ್‌. ಮಂಜೇಗೌಡ, ಜೆಡಿಎಸ್‌ ಜಿಲ್ಲಾಧ್ಯಕ್ಷ ಎನ್‌. ನರಸಿಂಹಸ್ವಾಮಿ, ಮೈಸೂರು ನಗರಾಧ್ಯಕ್ಷ ಕೆ.ಟಿ. ಚಲುವೇಗೌಡ, ಮಹಿಳಾ ಅಧ್ಯಕ್ಷೆ ಪ್ರೇಮ ಶಂಕರೇಗೌಡ, ಮುಖಂಡಲರಾದ ನರಸಿಂಹೇಗೌಡ, ಸಿ.ವಿ. ನಾಗರಾಜು, ತಾಲೂಕು ಅಧ್ಯಕ್ಷರಾದ ರಾಜೇಂದ್ರ, ಗೋಪಾಲಸ್ವಾಮಿ, ಪುರಸಭೆಯ ಅಧ್ಯಕ್ಷೆ ಶಿವಮ್ಮ ಚಾಕಹಳ್ಳಿ ಕೃಷ್ಣ, ಬೃಂದಾ ಕೃಷ್ಣೇಗೌಡ, ಮಾವಿನಹಳ್ಳಿ ಸಿದ್ದೇಗೌಡ, ಬೀರಿಹುಂಡಿ ಬಸವಣ್ಣ, ಮಾದೇಗೌಡ, ಚಾ. ಹರ್ಷದೇವೇಗೌಡ, ಭರತ್‌, ಪ್ರಕಾಶ್‌, ನಾಗೇಗೌಡ, ಗಾಯಿತ್ರಿ, ಸವಿತಾ, ಶಿವಮ್ಮ, ನರಸಿಂಹಸ್ವಾಮಿ, ಮಾದೇಗೌಡ, ಚಲುವೇಗೌಡ, ಹರೀಶ್‌ ಗೌಡ, ಮಹಮದ್‌ ಷಷಿ ಉಲ್ಲ, ಮಳಲಿ ಶಾಂತಕುಮಾರ್‌, ಪಟೇಲ್‌ ರಾಜೇಗೌಡ, ತಾಲೂಕಿನ ಕುಮಾರಸ್ವಾಮಿ ಅಭಿಮಾನಿ ಬಳಗದ ಪದಾಧಿಕಾರಿಗಳು, ತಾಲೂಕಿನ ಜೆಡಿಎಸ್‌ ಮುಖಂಡರು ಇದ್ದರು.

ರಾಜಕಾರಣದಲ್ಲಿ ಯಾರು ಸತ್ಯವಂತರು?: ರಾಜಕಾರಣದಲ್ಲಿ ಯಾರು ಸತ್ಯವಂತರು?. ಕಾಂಗ್ರೆಸ್‌ನವರು ಏನು ಮಾಡಿಲ್ವೆ? ಎಂದು ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಪ್ರಶ್ನಿಸಿದರು. ತಾಲೂಕಿನ ಬೀಚನಹಳ್ಳಿಯ ಕಬಿನಿ ಜಲಾಶಯದ ಬಳಿ ಜೆಡಿಎಸ್‌ನ ಜನತಾ ಜಲಧಾರೆ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರ ಮೇಲೆ ಇವ್ರು, ಇವ್ರ ಮೇಲೆ ಅವ್ರು ಹೇಳುತ್ತಾರೆ. ಯಾರು ಸಾಚ ಇದ್ದಾರೆ ಹೇಳಿ. ರಾಜಕೀಯ ಹೇಳಲಾರದಷ್ಟುಕೆಟ್ಟು ಹೋಗಿದೆ ಎಂದು ವಿಷಾದಿಸಿದರು.

ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್‌ನವರು ಮಾಡಿರುವ ಶೇ.40ರಷ್ಟುಕಮೀಷನ್‌ ಆರೋಪಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲ. ಸರ್ಕಾರದ ವಿರುದ್ದ ಆರೋಪ ಮಾಡಿಕೊಳ್ಳಲಿ ಬಿಡಿ. ಹಿಂದೆ ಪ್ರಧಾನಿಯವರು ಶೇ.10 ಸರ್ಕಾರ ಎಂದಾಗಲೂ ಪ್ರತಿಕ್ರಿಯೆ ಕೊಡಲಿಲ್ಲ. ಈಗಲೂ ನಾನು ಮಾತನಾಡಲ್ಲ ಎಂದರು. ಬಿಜೆಪಿ- ಜೆಡಿಎಸ್‌ ಚುನಾವಣಾ ಮೈತ್ರಿ ಮಾಡಿಕೊಳ್ಳುತ್ತವೆ ಎಂದು ಇಲ್ಲದ ಬಣ್ಣ ಕಟ್ಟುತ್ತಾರೆ. ಸುಮ್ಮನೆ ಯಾರೋ ಏನೋ ಹೇಳುತ್ತಾರೆ. ಹೇಳಲಿ ಬಿಡಿ ಎಂದರು.

ನೈಸ್ ಸಂಸ್ಥೆ ವಿರುದ್ಧ ಮತ್ತೆ ಸಿಡಿದೆದ್ದ ಎಚ್‌ಡಿ ದೇವೇಗೌಡ, ಗಂಭೀರ ಆರೋಪ

ನೀರಿನ ವಿಚಾರದಲ್ಲಿ ತಮಿಳುನಾಡಿನಲ್ಲಿ ಎಲ್ಲಾ ಪಕ್ಷಗಳು ಒಂದಾಗುತ್ತವೆ. ಆದರೆ ಕರ್ನಾಟಕದಲ್ಲಿ ಆ ರೀತಿಯಾಗಲ್ಲ. ಮಹದಾ.ಯಿ ವಿಚಾರದಲ್ಲಿ ಬಹಳ ನೋವಿದೆ. ಕೇಂದ್ರ ಜಲಸಂಪನ್ಮೂಲ ಸಚಿವರು ಮೂರು ಬಾರಿ ಭೇಟಿಗೆ ಸಮಯ ನೀಡಿ, ತಪ್ಪಿಸಿಕೊಂಡಿದ್ದಾರೆ ಎಂದರು. ರಾಜ್ಯದಲ್ಲಿ ನೀರಿಗೆ ಕೊರತೆ ಇಲ್ಲ. ಆದರೆ ಕಾಂಗ್ರೆಸ್‌- ಬಿಜೆಪಿಯವರು ಸಹಕಾರ ಕೊಡುತ್ತಿಲ್ಲ. ರಾಜ್ಯಕ್ಕೆ ನೀರಾವರಿ ವಿಚಾರದಲ್ಲಿ ಅನ್ಯಾಯ ತಪ್ಪಿಸಲು ಹಿಂದೆಯೂ ಹೋರಾಟ ಮಾಡಿದ್ದೆ. ಈಗಲೂ ಮಾಡುತ್ತಿದ್ದೇವೆ. ರಾಜ್ಯಸಭೆಯಲ್ಲಿ ಕೂಡ ರಾಜ್ಯಕ್ಕೆ ಅನ್ಯಾಯ ಮಾಡದಂತೆ ಮನವಿ ಮಾಡಿದ್ದೇನೆ ಎಂದರು.

Latest Videos
Follow Us:
Download App:
  • android
  • ios