Asianet Suvarna News Asianet Suvarna News

ಭರ್ಜರಿ ಮದುವೆ ಊಟ ಮಾಡಿದವರಿಗೆ ವಾಂತಿ, ಬೇಧಿ: 50 ಜನರು ಆಸ್ಪತ್ರೆ ದಾಖಲು

ಹಾವೇರಿಯ ರಟ್ಟೆಹಳ್ಳಿ ಬಳಿ ಮದುವೆಯ ಆರತಕ್ಷತೆ ಊಟ ಮಾಡಿದ್ದ 50ಕ್ಕೂ ಅಧಿಕ ಜನರಿಗೆ ವಾಂತಿ - ಬೇಧಿ ಶುರುವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

Haveri wedding dinner consuming people are admitted to Rattihalli Hospital sat
Author
First Published May 24, 2023, 11:02 AM IST

ಹಾವೇರಿ (ಮೇ 24): ಮದುವೆ ಎಂಬುದೇ ಒಂದು ಸಂಭ್ರಮ. ಇಲ್ಲಿ ಮದುವೆ ಜೊತೆಗೆ ಭರ್ಜರಿ ಭೋಜನ ಮಾಡಲು ಕೆಲವರಂತೂ ಸದಾ ಮುಂದಿರುತ್ತಾರೆ. ಆದರೆ, ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲ್ಲೂಕಿನ ಚಪ್ಪದಹಳ್ಳಿ ಗ್ರಾಮದಲ್ಲಿ ಮದುವೆ ಮುಗಿದ ನಂತರ ಆರತಕ್ಷತೆ ಕಾರ್ಯಕ್ರಮ ಏರ್ಪಡಿಸಿದ್ದು, ಇಲ್ಲಿ ಮದುವೆ ಭರ್ಜರಿ ಊಟ ಮಾಡಿದ 50ಕ್ಕೂ ಹೆಚ್ಚಿನ ಜನರು ಅಸ್ವಸ್ಥರಾಗಿದ್ದಾರೆ. ಕೂಡಲೇ ಮೊದಲ ಪಂಕ್ತಿಯಲ್ಲಿ ಈಟ ಮಾಡಿದ 50ಕ್ಕೂ ಅಧಿಕ ಜನರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮದುವೆ ಆರಕ್ಷತೆಯ ಕಾರ್ಯಕ್ರಮದಲ್ಲಿ ಊಟ ಮಾಡಿದ 50 ಕ್ಕೂ ಅಧಿಕ ಜನರು ಅಸ್ವಸ್ಥಗೊಂಡಿರುವ ಘಟನೆ ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲ್ಲೂಕಿನ ಚಪ್ಪದಹಳ್ಳಿ ಗ್ರಾಮದಲ್ಲಿ ನಡೆದಿದೆ. ಮದುವೆ ಮುಗಿಸಿಕೊಂಡು ಬಂದು, ಮನೆಯಲ್ಲಿ ಆರಕ್ಷತೆಯ ಕಾರ್ಯಕ್ರಮದಲ್ಲಿ ಊಟ ಮಾಡಿದ ನಂತರ ಅಸ್ವಸ್ಥರಾಗಿದ್ದಾರೆ. ಈ ಪೈಕಿ 5 ಜನರ ಸ್ಥಿತಿ ತೀವ್ರವಾಗಿದೆ. ಒಟ್ಟು 40 ಕ್ಕೂ ಅಧಿಕ ಜನರಿಗೆ ರಟ್ಟಿಹಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ‌ನೀಡಲಾಗುತ್ತಿದೆ. ಶಂಕ್ರಪ್ಪ ಹಿತ್ತಲಮನಿ ಎಂಬುವರ ಮಗಳ ಆರಕ್ಷತೆಯ ಕಾರ್ಯಕ್ರಮದಲ್ಲಿ ಘಟನೆ ನಡೆದಿದ್ದು, ಮದುವೆ ಮನೆಯಲ್ಲಿ ಆತಂಕ ಎದುರಾಗಿದೆ.

ಕಾಂಗ್ರೆಸ್‌ ಅಧಿಕಾರಕ್ಕೆ ಬಂದ 3 ದಿನದಲ್ಲಿ ಸಾಲಬಾಧೆಗೆ ಇಬ್ಬರು ರೈತರ ಆತ್ಮಹತ್ಯೆ

ಒಂದು ದಿನದ ನಂತರ ವಾಂತಿ, ಬೇಧಿ ಆರಂಭ: ಸೋಮವಾರ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ಊಟ ಮಾಡಿದ ಜನರಿಗೆ ಮಂಗಳವಾರ ರಾತ್ರಿಯಿಂದ ವಾಂತಿ, ಭೇದಿ ಉಂಟಾಗಿದೆ. ಹರಿಹರ ತಾಲೂಕಿನ ವಾಸನ ಗ್ರಾಮದಲ್ಲಿ ಮದುವೆ ಮುಗಿಸಿಕೊಂಡು ಬಂದಿದ್ದರು. ನಂತರ ಚಪ್ಪದಹಳ್ಳಿಯಲ್ಲಿ ಆರಕ್ಷತೆಯ ಕಾರ್ಯಕ್ರಮದಲ್ಲಿ ಊಟ ಸೇವಿಸಿದ ಜನ ಅಸ್ವಸ್ಥರಾಗಿದ್ದಾರೆ. ಊಟದಲ್ಲಿ ಶಾವಗಿ ಕೀರ್ (ಪಾಯಸ), ಬೂಂದಿ (ಲಡ್ಡು), ಪಲಾವು, ಅನ್ನ- ಸಾಂಬಾರ್, ಹೆಸರು ಕಾಳು ಪಲ್ಯೆ ಹಾಗೂ ಬಜ್ಜಿಯನ್ನ ಸೇವಿದ್ದರು. ಇದಾದ ನಂತರ ಒಂದು ದಿನದಲ್ಲಿ ಊಟ ಮಾಡಿ ಬಂದಿದ್ದ ಎಲ್ಲರಿಗೂ ವಾಂತಿ ಬೇಧಿ ಆರಂಭವಾಗಿದೆ.

ಐವರ ಸ್ಥಿತಿ ಗಂಭೀರ:  ಮದುವೆ ಆರತಕ್ಷತೆಯಲ್ಲಿ ಊಟ ಮಾಡಿ ಅಸ್ವಸ್ಥಗೊಂಡ 40 ಜನರಿಗರೆ ರಟ್ಟಿಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದಂತೆ ಐದು ಜನರ ಸ್ಥಿತಿ ತೀವ್ರವಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲು ಮುಂದಾಗಿದೆ. ಇನ್ನು ಘಟನೆ ಕುರಿತಂತೆ ಆಸ್ಪತ್ರೆಯಿಂದ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ರಟ್ಟಿಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ಬಂದು ಆಸ್ಪತ್ರೆಯಲ್ಲಿ ರೋಗಿಗಳ ಪರಿಶೀಲನೆ ಮಾಡಿದ್ದಾರೆ. ಜೊತೆಗೆ ಅಡುಗೆ ಮಾಡಿದ್ದರ ಬಗ್ಗೆ ಪರಿಶೀಲನೆ ಆರಂಭಿಸಿದ್ದಾರೆ.

ಮಲಗಿದ್ದಾಗ ಹಾವು ಕಚ್ಚಿದೆ ಅಂದ್ರೂ ಆಸ್ಪತ್ರೆಗೆ ಸೇರಿಸಲಿಲ್ಲ: ಎದ್ದೇಳುವಷ್ಟರಲ್ಲಿ ಹೆಣವಾಗಿದ್ದ ಮಗಳು

ರಟ್ಟಿಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯ:  ಮದುವೆ ಆರತಕ್ಷತೆಯಲ್ಲಿ ಸೇವಿಸಿದ ಊಟದಿಮದ ಸ್ವಸ್ಥಗೊಂಡ ಜನರಿಗೆ ವೈದ್ಯರು ಚಿಕಿತ್ಸೆ ನೀಡುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆಂದು ಮಹಿಳೆಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಪ್ರದಹಳ್ಳಿ ಗ್ರಾಮದ ಜನರಿಗೆ ವಾಂತಿ ಬೇಧಿ ಅಸ್ವಸ್ಥತೆ ಉಂಟಾಗಿದ್ದರೂ, ವೈದ್ಯರಿಗೆ ಫೋನ್ ಮಾಡಿದರೆ ಫೋನ್ ಎತ್ತಲಿಲ್ಲ. ಬೆಳಿಗ್ಗೆ ಬೇಗ ಬಂದು ರೋಗಿಗಳಿಗೆ ಚಿಕಿತ್ಸೆ ಕೊಡಲಿಲ್ಲ. ರಟ್ಟಿಹಳ್ಳಿ ಸರ್ಕಾರಿ ವೈದ್ಯರ ವಿರುದ್ಧ ಚಪ್ರದಹಳ್ಳಿ ಗ್ರಾಮಸ್ಥರು , ಮಹಿಳೆಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಗಳವಾರ ರಾತ್ರಿ ಚಿಕಿತ್ಸೆಗೆ ಬಂದರೆ ಒಬ್ಬರೇ ನರ್ಸ್ ಇದ್ದರು. ಅವರೊಬ್ಬರೇ ಚಿಕಿತ್ಸೆ ಕೊಡೋದು ಕಷ್ಟ ಆಗಿತ್ತು. ವೈದ್ಯರು ನಿರ್ಲಕ್ಷ್ಯ ಮಾಡಿದ್ದಾರೆ. ಈ ಬಗ್ಗೆ ವಿಷಯ ತಿಳಿದ ಶಾಸಕ ಯು.ಬಿ ಬಣಕಾರ್ ಅವರು ಆರೋಗ್ಯಾಧಿಕಾರಿಗಳು, ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. 

Follow Us:
Download App:
  • android
  • ios