ರಾಜ್ಯ ಸರ್ಕಾರದ ಮಾನ್ಯ ಗಣಿ ವಿಭಾಗದ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಪೀಠಾಧಿಕಾರಿಗಳ ಆದೇಶದನ್ವಯ ಮರಳು ಗಣಿಗಾರಿಕೆ ನಡೆದಿತ್ತು. ಈಗ ನವೀಕರಣ ಹಂತದಲ್ಲಿದೆ. ಗಣಿಗಾರಿಕೆ ಮುಂದುವರೆಸುವ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು: ಹ.ಚಿ.ಗ ಕಂಪನಿ ವ್ಯವಸ್ಥಾಪಕ ನಿರ್ದೇಶಕಿ ಶಿಲ್ಪಾ ಕೆ.ಆರ್

ಬಲಭೀಮರಾವ್ ಕುಲಕರ್ಣಿ

ಹಟ್ಟಿಚಿನ್ನದಗಣಿ(ಫೆ.04): ಚಿನ್ನ ಉತ್ಪಾದನೆಯಲ್ಲಿ ಏಕಸ್ವಾಮ್ಯತೆ ಸಾಧಿಸಿದ ಪ್ರತಿಷ್ಠಿತ ರಾಜ್ಯ ಸರ್ಕಾರಿ ಸ್ವಾಮ್ಯದ ಹಟ್ಟಿಚಿನ್ನದಗಣಿ ಕಂಪನಿ ಉತ್ತರ ಕರ್ನಾಟಕ ಭಾಗದ (ಬಳ್ಳಾರಿಯನ್ನು) ಹೊರತುಪಡಿಸಿ ಎಲ್ಲಾ ಜಿಲ್ಲೆಗಳಿಗೆ ನಡೆಸುತ್ತಿದ್ದ ಮರಳು ಗಣಿಗಾರಿಕೆ, ದಾಸ್ತಾನು, ವಿಲೇವಾರಿ ಹೊಣೆಗಾರಿಕೆಯಿಂದ ಹಿಂದೆ ಸರಿಯಿತೆ ಎಂಬ ಗುಮಾನಿ ವ್ಯಕ್ತವಾಗಿದೆ.

ಈಡೇರದ ಉದ್ದೇಶ: 

ಮರಳು ದಾಸ್ತಾನು, ವಿಲೇವಾರಿ, ಗ್ರಾಹಕರಿಗೆ ಮಾರಾಟ ಮಾಡಬೇಕೆಂದು ಆದೇಶವೇನೋ ಸರ್ಕಾರ ಹೊರಡಿಸಿ, ಯಾವ ಆಯಾಮದಲ್ಲಿ ಕಾರ್ಯ ನಿರ್ವಹಿಸಬೇಕು. ರಾಜಧನ ಪಾವತಿ ವಿಧಾನ, ಎಲ್ಲಿ ದಾಸ್ತಾನು? ಗ್ರಾಹಕರಿಗೆ ಯಾವ ರೀತಿಯಲ್ಲಿ ಮಾರಾಟ ನಡೆಸಬೇಕೆಂಬ ನಿರ್ದೇಶನ ನೀಡಿತ್ತಾದರೂ ಸರ್ಕಾರ ಗುರುತಿಸಿದ ಮರಳು ಕೇಂದ್ರಗಳ ಹೊರತಾಗಿಯೂ ಸಹಿತ ಸೋರಿಕೆಯಾಗಿ ಅಕ್ರಮ ಮರಳು ಗಣಿಗಾರಿಕೆ ನಡೆದಿದೆ.

ಹಟ್ಟಿ ಚಿನ್ನದ ಗಣಿಯ ಮ್ಯಾನೇಜ್ಮೆಂಟ್ ಕಂ ಟ್ರೈನಿ ಹುದ್ದೆ ನೇಮಕಾತಿಯಲ್ಲಿ ಲೋಪ!

ಕಂಪನಿ ಹೇಳೋದೇನು?: 

ಸರ್ಕಾರದ ನಿರ್ದೇಶನದನ್ವಯ 21 ಕೇಂದ್ರಗಳಲ್ಲಿ ಮರಳು ಗಣಿಗಾರಿಕೆಯನ್ನು ನಡೆಸಲಾಗಿತ್ತು. ಸದ್ಯ ಹಾವೇರಿ, ರಾಣೆಬೆನ್ನೂರಿನಲ್ಲಿ ಮಾತ್ರ ಹಟ್ಟಿ ಗಣಿಯಿಂದ ಗಣಿಗಾರಿಕೆ ನಡೆದಿದೆ. ಉಳಿದ ಕೆಲ ಕೇಂದ್ರಗಳಲ್ಲಿ ಪರಿಸರ ಇಲಾಖೆಯಿಂದ ನಿರಪೇಕ್ಷಣೆ ನವೀಕರಣವಾಗಿಲ್ಲ. ಸುಪ್ರಿಂ ಕೋರ್ಟಿನ ಹೊಸ ನಿರ್ದೇಶನದಂತೆ ಜೆಸಿಬಿಯಿಂದ ಮರಳನ್ನು ತುಂಬದೆ, ಕಾರ್ಮಿಕರೇ ತುಂಬಬೇಕೆಂಬ ನಿಯಮದಿಂದ ಹಟ್ಟಿಗಣಿಯೆ ಹಿಂದೆ ಸರಿಯುವ ಸಾಧ್ಯತೆಯೇ ಹೆಚ್ಚು ಎನ್ನುವಂತಿದೆ. ಕಾರ್ಮಿಕರಿಂದ ಅಧಿಕ ಖರ್ಚು ಮಾಡಿ ಮರಳು ಮಾರಾಟ ಮಾಡುವ ಹೊತ್ತಿಗೆ ಅಕ್ರಮ ಗಣಿಗಾರಿಕೆಯಿಂದ ಜೆಸಿಪಿಯಿಂದ ಮಾಫಿಯಾದವರು ಮರಳನ್ನು ಶೀಘ್ರಗತಿಯಲ್ಲಿ ವಿಲೇವಾರಿ ಮಾಡುವುದರಿಂದ ಹಟ್ಟಿಗಣಿಗೇನು ಲಾಭ ಎಂಬ ಲೆಕ್ಕಾಚಾರ ಎದ್ದಿದೆ.

ಹಟ್ಟಿ ಚಿನ್ನದ ಗಣಿಗೆ 76ರ ಸಂಭ್ರಮ, ದೇಶದಲ್ಲಿಯೇ ಏಕೈಕ ನಮ್ಮ ಕರ್ನಾಟಕದ ಚಿನ್ನದ ಗಣಿ

ಹಟ್ಟಿಚಿನ್ನದ ಗಣಿಯಿಂದ ಉತ್ತರ ಕರ್ನಾಟಕ ಭಾಗದಲ್ಲಿರುವ ಮರಳು ಗಣಿಗಾರಿಕೆಯನ್ನು ಮುಂದುವರೆಸಲು ನಾವು ಹಾಗೂ ನಿರ್ದೇಶಕ ಮಂಡಳಿ ಸಭೆ ಒಪ್ಪುತ್ತಿಲ್ಲ. ಗಣಿಗಾರಿಕೆಯಿಂದ ವೆಚ್ಚ ಅಧಿಕವಾಗಿದೆ. ಗಣಿಗಾರಿಕೆ ನವೀಕರಣವು ಸಹಿತ ಆಗಿಲ್ಲ. ಮರಳು ಗಣಿಗಾರಿಕೆ ಜವಬ್ದಾರಿಯಿಂದ ಹಿಂದೆ ಸರಿಯಲು ಇಚ್ಛಿಸಿದ್ದು, ಈ ಕುರಿತು ಸಭೆ ನಡೆಸಿ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು ಎಂದು ಹಟ್ಟಿಗಣಿ ನಿಗಮದ ಅಧ್ಯಕ್ಷರು ಹಾಗೂ ಬೀಳಗಿ ಶಾಸಕ ಜೆ.ಟಿ ಪಾಟೀಲ್ ತಿಳಿಸಿದ್ದಾರೆ. 
ರಾಜ್ಯ ಸರ್ಕಾರದ ಮಾನ್ಯ ಗಣಿ ವಿಭಾಗದ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಪೀಠಾಧಿಕಾರಿಗಳ ಆದೇಶದನ್ವಯ ಮರಳು ಗಣಿಗಾರಿಕೆ ನಡೆದಿತ್ತು. ಈಗ ನವೀಕರಣ ಹಂತದಲ್ಲಿದೆ. ಗಣಿಗಾರಿಕೆ ಮುಂದುವರೆಸುವ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹ.ಚಿ.ಗ ಕಂಪನಿ ವ್ಯವಸ್ಥಾಪಕ ನಿರ್ದೇಶಕಿ ಶಿಲ್ಪಾ ಕೆ.ಆರ್ ತಿಳಿಸಿದ್ದಾರೆ.