ಹಟ್ಟಿ ಚಿನ್ನದ ಗಣಿಯ ಮ್ಯಾನೇಜ್ಮೆಂಟ್ ಕಂ ಟ್ರೈನಿ ಹುದ್ದೆ ನೇಮಕಾತಿಯಲ್ಲಿ ಲೋಪ!
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ಮ್ಯಾನೇಜ್ಮೆಂಟ್ ಕಂ ಟ್ರೈನಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಹತ್ತು ಹಲವು ಲೋಪ-ದೋಷಗಳು ಜರುಗಿದ್ದು, ಇದರಿಂದಾಗಿ ನಿಜವಾದ ಅಭ್ಯರ್ಥಿಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಅನ್ಯಾಯವಾಗಿದೆ.
ರಾಯಚೂರು (ಜ.1): ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ಮ್ಯಾನೇಜ್ಮೆಂಟ್ ಕಂ ಟ್ರೈನಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಹತ್ತು ಹಲವು ಲೋಪ-ದೋಷಗಳು ಜರುಗಿದ್ದು, ಇದರಿಂದಾಗಿ ನಿಜವಾದ ಅಭ್ಯರ್ಥಿಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಅನ್ಯಾಯವಾಗಿದೆ. ಈ ಕೂಡಲೇ ನೇಮಕಾತಿ ಪ್ರಕ್ರಿಯೆ ನಿಲ್ಲಿಸಬೇಕು ಇಲ್ಲವಾದಲ್ಲಿ ಹೋರಾಟ ನಡೆಸಲಾಗುವುದು ಎಂದು ನೊಂದ ಅಭ್ಯರ್ಥಿ ಸುರೇಶ ತಿಳಿಸಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ 39 ಹುದ್ದೆಗಳಿಗೆ ನಡೆದ ಪರೀಕ್ಷೆಯಲ್ಲಿ ನೋಟಿಫಿಕೇಶನ್ ನಲ್ಲಿ ರೂಪಿಸಿದ ನಿಯಮದಂತೆ ನಡೆಸದೇ ತಮಗೆ ಬೇಕಾದವರಿಗೆ ಆಯ್ಕೆ ಮಾಡಿದ್ದಾರೆ. ಪರೀಕ್ಷೆಯಲ್ಲಿ ಪಾಸ್ ಆದವರ ಅಂಕಗಳನ್ನು ಪ್ರಕಟಿಸದೇ ಕೇವಲ ಫಲಿತಾಂಶ ಪ್ರಕಟಿಸಿದ್ದಾರೆ.
ತಾಳಗುಪ್ಪ- ಶಿರಸಿ ರೈಲು ಮಾರ್ಗದ ಪ್ರಾಥಮಿಕ ಸಮೀಕ್ಷೆ ಪೂರ್ಣ, ಮಲೆನಾಡು- ಉತ್ತರ ಕರ್ನಾಟಕಕ್ಕೆ ಸಂಪರ್ಕ ಸುಲಲಿತ
ಒಟ್ಟು 800 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ನಾನಾ ಕಾರಣಗಳಿಂದ 546 ಅರ್ಜಿಗಳು ತಿರಸ್ಕೃತವಾಗಿದ್ದು, 300 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಅನೇಕರಿಗೆ ಪರೀಕ್ಷೆಯ ಪ್ರವೇಶ ಪತ್ರ ನೀಡಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಹಾರಿಕೆಯ ಉತ್ತರ ನೀಡಿದ್ದಾರೆ. ತಂತ್ರಜ್ಞಾನ ಮುಂದುವರೆ ದರೂ ಆಫ್ ಲೈನ್ ಮೂಲಕ ಅರ್ಜಿ ಕರೆದಿದ್ದು, ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಆಡಳಿತ ಮಂಡಳಿಯವರು ಕೂಡಲೇ ತಪ್ಪು ಸರಿಪಡಿಸಿ ಅರ್ಹರನ್ನು ನೇಮಕ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಬರೋಬ್ಬರಿ 5259 ಕೋಟಿ ರೂ ಸಂಪತ್ತು ಇರೋ ಬಾಲಿವುಡ್‌ನ ಶ್ರೀಮಂತ ಮನೆತನ, ಬಚ್ಚನ್, ಶಾರುಖ್, ಕಪೂರ್ ಕುಟುಂಬವಲ್ಲ!
ಆನ್ ಲೈನ್ ಪರೀಕ್ಷೆ ನಡೆಸಲು 70 ಲಕ್ಷಕ್ಕೆ ಕಂಪನಿಗೆ ಟೆಂಡರ್ ಕರೆಯದೇ ವಿಶ್ವಾಸವಿಲ್ಲದ ಕಂಪನಿಗೆ ವಹಿಸಿಕೊಡಲಾಗಿದೆ. ಅರ್ಹತಾ ಪಟ್ಟಿಯಲ್ಲಿ ಕಡಿಮೆ ಅಂಕ ಹೊಂದಿದವರಿಗೆ ಸ್ಥಾನ ನೀಡಿದ್ದಾರೆ. ಅನಗತ್ಯವಾದ ಹುದ್ದೆಗಳಿಗೆ ಮಹಿಳಾ ಮೀಸಲಾತಿಯನ್ನು ನೀಡಿ ಅವುಗಳಿಗೆ ಅರ್ಜಿ ಬಂದಿಲ್ಲವೆಂದು ಪುರುಷರಿಗೆ ಒದಗಿಸಿದ್ದಾರೆ. ಹೀಗೆ ನೇಮಕಾತಿಯಲ್ಲಿ ಅನೇಕ ಅಕ್ರಮ, ನಿಯಮ ಉಲ್ಲಂಘಟನೆಗಳು ನಡೆದಿದ್ದು, ಈ ಬಗ್ಗೆ ಆಕ್ಷೇಪಣೆ ಸಲ್ಲಿಸಿದರೂ ಸಹ ಕಂಪನಿಯ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಸ್ಪಂದಿಸುತ್ತಿಲ್ಲವೆಂದು ದೂರಿದರು. ಮುಂದಿನ ದಿನಗಳಲ್ಲಿ ಹಟ್ಟಿ ಕಂಪನಿ ಮುಂದೆ ಹೋರಾಟ ನಡೆಸುವುದರ ಜೊತೆಗೆ ಕಾನೂನಾತ್ಮಕ ಹೋರಾಟಕ್ಕೂ ಇಳಿಯುವುದಾಗಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ನೊಂದ ಅಭ್ಯರ್ಥಿಗಳಾದ ಚನ್ನಬಸವ, ನಾಗರಾಜ, ಶಿವರಾಜ ಇದ್ದರು.