ಹಾಸನ (ಡಿ.10):  ಜಿಲ್ಲೆಯ ಹೊಳೇನರಸಿಪುರ ವಿಧಾನ ಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಹಲವಾರು ಗ್ರಾಮಗಳಲ್ಲಿ ಜೆಡಿಎಸ್‌ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಿದರೆ ಮಾತ್ರ ಆಯಾ ಗ್ರಾಮಗಳಲ್ಲಿ ನಡೆಯುತ್ತಿರುವ ದೇವಸ್ಥಾನದ ಕೆಲಸವನ್ನು ಪೂರ್ಣಗೊಳಿಸುವುದಾಗಿ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರು ಹೆದರಿಸುತ್ತಿರುವುದಾಗಿ ಜಿಲ್ಲಾ ಪಂಚಾಯತ್‌ ಕೆಡಿಪಿ ಮಾಜಿ ಸದಸ್ಯ ಡಿ. ದೇವರಾಜೇಗೌಡ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಕೆಲವು ಗುತ್ತಿಗೆದಾರರಿಗೆ ಕಾಮಗಾರಿಗಳನ್ನು ಪೂರ್ಣಗೊಳಿಸದೆ ಬಿಲ್‌ ಬರೆಸಿ ಅದೇ ಗುತ್ತಿಗೆದಾರರ ಮೂಲಕ ಗ್ರಾಮಗಳಲ್ಲಿ ಚುನಾವಣೆಗೆ ಅಕ್ರಮ ಹಣ ಹಂಚಲು ಸೂಚಿಸಿರುತ್ತಾರೆ. ದಂಡಿಗನಹಳ್ಳಿ ಹೋಬಳಿಯ ಕೆಲವು ಗ್ರಾಮಗಲ್ಲಿ ಗುತ್ತಿಗೆದಾರರಿಂದ ಹಣ ಕೊಡಿಸಿ ಅವಿರೋದ ಆಯ್ಕೆ ಮಾಡಲು ಮತ್ತು ಚುನಾವಣೆಗೆ ಪ್ರತಿನಿದಿಸುವ ಅಭ್ಯರ್ಥಿಗಳನ್ನು ಹಣದಿಂದ ಕೊಂಡುಕೊಳ್ಳಲು ಸೂಚಿಸಿರುವುದು ತಿಳಿದುಬಂದಿದೆ ಎಂದರು.

ಅದಕ್ಕೆ ಪ್ರತ್ಯಕ್ಷ ಸಾಕ್ಷಿಯಂತೆ ಪೋತನಹಳ್ಳಿ ಗ್ರಾಮದಲ್ಲಿ ಗುತ್ತಿಗೆದಾರ ದಿವಂಗತ ರಾಯಿಗೌಡನ ಮಗನಿಂದ 3 ಲಕ್ಷ ರೂಪಾಯಿಗಳನ್ನು ಜಕ್ಕೇನಹಳ್ಳಿ ಗ್ರಾಮಕ್ಕೆ ಕೊಡಿಸಿ ಅವಿರೋಧವಾಗಿ ಆಯ್ಕೆ ಮಾಡಲು ಪಂಚಾಯಿತಿ ನಡೆಸಿದ್ದಾರೆ. ಈಗಾಗಲೇ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಕೂಡ ಹಾಗೂ ಜಿಲ್ಲಾ ಚುನಾವಣಾದಿಕಾರಿಗಳು ಹಾಗೂ ಜಿಲ್ಲಾ ದಂಡಾದಿಕಾರಿಗಳು ಕ್ಷೇತ್ರವ್ಯಾಪ್ತಿ ರಾಜಕೀಯ ಪಕ್ಷಗಳ ಫ್ಲಕ್ಸ್‌ ಹಾಗೂ ಬೋರ್ಡ್‌ಗಳನ್ನು ತೆರವುಗೊಳಿಸಲು ಆದೇಶ ಮಾಡಿದ್ದರೂ ಕೂಡ ಹಲವಾರು ಗ್ರಾಮಗಳಲ್ಲಿ ಜೆ.ಡಿ.ಎಸ್‌ ಪಕ್ಷದ ಹಾಗೂ ಅವರ ಕುಟುಂಬದ ಪ್ಲಕ್ಸ್‌ ಹಾಗೂ ಬೋರ್ಡ್‌ಗಳು ರಾರಾಜಿಸುತ್ತಿರುತ್ತವೆ. ಇದರ ಬಗ್ಗೆ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಕೂಡಲೇ ಚುನಾವಣಾದಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

'ಜೆಡಿಎಸ್‌ ನಾಟಕ ಕಂಪನಿ, ಎಚ್‌ಡಿಕೆ ಅದ್ರ ಬಾಸ್, ಅವರ ಸಿನಿಮಾ ಡೈಲಾಗ್‌ಗೆಲ್ಲಾ ನಾವು ಬಗ್ಗಲ್ಲ' ...

ಈಗ ಚುನಾವಣೆಯ ಗಿಮಿಕ್‌ಗೋಸ್ಕರ ಹಾಗೂ ಮತದಾರರನ್ನು ವಂಚಿಸಲು ನೆನೆಗುದಿಗೆ ಬಿದ್ದಿರುವ ದೇವಸ್ಥಾನ ಹಾಗೂ ಸಮುಧಾಯಭವನಗಳ ಕಾಮಗಾರಿಗಳನ್ನು ಪ್ರಾರಂಬಿಸಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ. ರೇವಣ್ಣನವರು ನನ್ನಿಂದಲೇ ಕಾರ್ಯಸಾಧನೆ ಮಾಡಲಾಗಿದೆ ಎಂದು ಬಿಂಬಿಸಲು ಹೀಗೆ ಮಾಡುತ್ತಿದ್ದಾರೆ. ಹೆಚ್‌.ಡಿ ರೇವಣ್ಣನವರು ಜಿಲ್ಲೆಯಾದ್ಯಂತ ಅದಿಕಾರಿಗಳು ಹಾಗೂ ಗುತ್ತಿಗೆದಾರರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಆದರೇ ಬಿಜೆಪಿ ಪಕ್ಷದ ನಾಯಕರುಗಳ ಮೇಲೆ ಆರೋಪ ಮಾಡುತ್ತಿರುವುದು ಸತ್ಯಕ್ಕೆ ದೂರವಾದ ವಿಚಾರ. ರೇವಣ್ಣನವರು ಹಾಗೂ ಅವರ ಕುಟುಂಬದ ಸದಸ್ಯರು ಅದಿಕಾರಿಗಳನ್ನು ತೋಟದ ಮನೆಗೆ ಕರೆಸಿ ಹಣ ವಸೂಲಿ ಮಾಡುತ್ತಿದ್ದಾರೆ. ಜಿಲ್ಲೆಯಾದ್ಯಂತ ಬಹುತೇಕ ಗ್ರಾ.ಪಂ ಪಿಡಿಓಗಳು ಅವರ ಕಾಲದಲ್ಲಿಯೇ ಬಂದಿರುವುದು. ಹಾಗಾಗಿ ಇವರೆಲ್ಲಾ ಬೆಳಿಗ್ಗೆ ಎದ್ದು ರೇವಣ್ಣನವರ ಮನೆಯಲ್ಲಿ ಹಾಜರಾತಿ ಹಾಕಿ ಕರ್ತವ್ಯಕ್ಕೆ ಹೋಗುವ ಸಂಸ್ಕತ್ರೃತಿಯನ್ನು ಬೆಳಸಿಕೊಂಡಿದ್ದಾರೆ ಅಂತಹ ಅದಿಕಾರಿಗಳಿಂದ ಬಿಜೆಪಿಯವರು ವಸೂಲಿ ಮಾಡಲು ಸಾಧ್ಯವೇ. ಇದಕ್ಕೆ ರೇವಣ್ಣ ಅವಕಾಶ ಕೊಡುತ್ತಾರೆಯೇ ಎಂದು ಪ್ರಶ್ನಿಸಿದರು.

ಭೂಸ್ವಾದೀನ ಇಲಾಖೆಯ ಅದಿಕಾರಿಗಳಿಂದ ಕಡತ ನಾಶವಾಗುತ್ತದೆ ಎಂದು ರೇವಣ್ಣ ಹೇಳುತ್ತಿದ್ದಾರೆ. ಆದರೆ ಈ ಹಿಂದೆ ಭೂಸ್ವಾದೀನ ಅದಿಕಾರಿಯೂ ಆಗಿದ್ದ ಹಿಂದಿನ ಉಪವಿಭಾಗಾದಿಕಾರಿ ವಿಜಯರವರ ಅದಿಕಾರ ಸಂದರ್ಭದಲ್ಲಿ ಹಾಗೂ ಇನ್ನೊಬ್ಬ ಉಪವಿಭಾಗಾದಿಕಾರಿ ಶ್ರೀನಿವಾಸಗೌಡರವರ ಅಧಿಕಾರಾವಧಿಯಲ್ಲಿ ಎಷ್ಟುಕೋಟಿ ರೂಪಾಯಿಗಳ ಆಸ್ತಿಯನ್ನು ಇದೇ ರೇವಣ್ಣನವರು ಮತ್ತು ಕೆಲವು ಪ್ರಮುಖ ರಾಜಕಾರಣಿಗಳು ಹಾಗೂ ಅವರ ಬೆಂಬಲಿಗರ ಮೂಲಕ ಲಪಟಾಯಿಸಿದ್ದಾರೆ. ಇದರಿಂದ ಸರ್ಕಾರಕ್ಕೆ ಎಷ್ಟುಸಾವಿರ ಕೋಟಿರೂಪಾಯಿಗಳ ನಷ್ಟವಾಗಿದೆ ಎಂಬುದು ತಿಳಿಯಬೇಕಾದರೆ ಈ ಪ್ರಕರಣವನ್ನು ಸಿಬಿಐಗೆ ವಹಿಸಲೇಬೇಕು. ಕಾಚೇನಹಳ್ಳಿ ಏತ ನೀರಾವರಿ 3 ನೇ ಹಂತದ ಯೋಜನೆಯನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸಿ ದಂಡಿಗನಹಳ್ಳಿ ಹೋಬಳಿಯ ಬಾಗದ ರೈತರ ಜಮೀನಿಗೆ ನೀರು ಹರಿಸಲಾಗುವುದು. ಇದರಲ್ಲಿ ರೇವಣ್ಣನವರು ಕುತಂತ್ರ ಬಳಸುವುದು ಬೇಡ ಎಂದು ಹೇಳಿದರು.