ಚನ್ನರಾಯಪಟ್ಟಣ [ಜ.06]:  ಜಿಲ್ಲೆಯ ರೈತರಿಗೆ ಆರ್ಥಿಕವಾಗಿ ಸಾಕಷ್ಟುನೆರವು ನೀಡುವ ಇಲ್ಲಿನ ಶ್ರೀನಿವಾಸಪುರ ಸಮೀಪ ಇರುವ ಶ್ರೀಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯು ಫೆ.20ರಿಂದ ಆರಂಭವಾಗಲಿದೆ. ಇಲ್ಲಿಗೆ ಕಬ್ಬು ಸರಬರಾಜು ಮಾಡುವ ರೈತರಿಗೆ ಇಂದು ಸಂತಸದ ಸುದ್ದಿಯೇ..!

ಸಕ್ಕರೆ ಕಾರ್ಖಾನೆಗೆ ಭಾನುವಾರ ಭೇಟಿ ನೀಡಿ, ಅಲ್ಲಿ ನಡೆಯುತ್ತಿರುವ ಆಧುನಿಕರಣ ಕಾಮಗಾರಿಯನ್ನು ಪರಿಶೀಲಿಸಿದ ಬಳಿಕ ಕಾರ್ಖಾನೆ ಅಧಿಕಾರಿಗಳೊಂದಿಗೆ ಚರ್ಚಿಸಿ ನಂತರ ಶಾಸಕ ಸಿ.ಎನ್.ಬಾಲಕೃಷ್ಣ ಫೆ.20ರಿಂದ ಕಾರ್ಖಾನೆಯು ಕಬ್ಬು ಅರೆಯುವ ಕಾರ್ಯ ಆರಂಭಿಸಲಿದೆ. ನಡೆಯುತ್ತಿವ ಕಾಮಗಾರಿಯು ಈಗಾಗಲೇ ಶೇ.90 ರಷ್ಟುಮುಗಿದಿದೆ ಎಂದರು.

ಜನವರಿ ಮೊದಲ ವಾರದಿಂದಲೇ ಕಬ್ಬು ಅರೆಯುವ ಕಾರ್ಯ ಪ್ರಾರಂಭಿಸುವ ಉದ್ದೇಶವಿತ್ತು. ಆದರೆ, ಶೇ.10ರಷ್ಟುಕಾಮಗಾರಿ ಉಳಿದಿರುವ ಹಿನ್ನೆಲೆಯಲ್ಲಿ ಎಲ್ಲ ಕೆಲಸಗಳನ್ನು ಸಂಪೂರ್ಣಗೊಳಿಸಿಯೇ ಚಾಲನೆ ನೀಡುವ ಬಗ್ಗೆ ತೀರ್ಮಾನಿಸಲಾಗಿದೆ. ಕಾಮಗಾರಿಯ ಉಳಿದ ಭಾಗವು ಫೆ.20ರೊಳಗೆ ಮುಗಿಯಲಿದೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಒಂದುವರೆ ಲಕ್ಷ ಟನ್‌ ಕಬ್ಬು ಇದೆ:  ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸನ್‌ ಮಾತನಾಡಿ, ಫೆ.20ರ ವೇಳೆಗೆ ಕಬ್ಬು ಅರೆಯುವ ಕಾರ್ಯ ಪ್ರಾರಂಭಿಸಲು ಕಾರ್ಖಾನೆ ಸಿದ್ಧತೆಗೊಳ್ಳುತಿದ್ದು, ಆಧುನಿಕ ನವೀಕರಣದ ಕಾಮಗಾರಿಯು ಚುರುಕಿನೊಂದಿಗೆ ನಡೆಯುತ್ತಿದೆ. ಕಬ್ಬು ಅರೆಯುವ ಕಾರ್ಯ ಪ್ರಾರಂಭಗೊಂಡರೆ 2 ತಿಂಗಳಿಗೆ ಸುಮಾರು ಎರಡು ಲಕ್ಷ ಟನ್‌ ಕಬ್ಬು ಅಗತ್ಯವಿದೆ.

ಸದ್ಯ ನಮ್ಮಲ್ಲಿ ನೋಂದಣಿಯಾಗಿರುವ ಪ್ರಕಾರ ಒಂದುವರೆ ಲಕ್ಷ ಟನ್‌ ಕಬ್ಬು ಇದೆ. ಉಳಿದಂತೆ ಹಾಸನ ಜಿಲ್ಲೆಯಿಂದ ಮಾತ್ರವಲ್ಲದೇ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ, ಕೆ.ಆರ್‌.ಪೇಟೆ ಹಾಗೂ ಅಕ್ಕಪಕ್ಕದ ತಾಲೂಕು ಕಡೆಯಿಂದ ಕಬ್ಬು ತರಿಸಿಕೊಳ್ಳಲು ವ್ಯವಸ್ಥೆ ಮಾಡಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಹಾಸನ-ಪಿರಿಯಾಪಟ್ಟಣ ರಾಜ್ಯ ಹೆದ್ದಾರಿಗಿನ್ನು ಟೋಲ್ ಸಂಗ್ರಹ...

6 ಕೋಟಿ ಗುತ್ತಿಗೆ ಹಣ ನೀಡಬೇಕಿದೆ:  20 ಮೆಗಾ ವಾಟ್‌ ವಿದ್ಯುತ್‌ ಉತ್ಪಾದಿಸುವ ಗುರಿಯೊಂದಿಗೆ ಕಾರ್ಖಾನೆಯನ್ನು ಅಭಿವೃದ್ಧಿ ಪಡಿಸಲಾಗಿದ್ದು, ಇದರಲ್ಲಿ 6 ಮೆಗಾವಾಟ್‌ ವಿದ್ಯುತ್‌ ಅನ್ನು ಕಾರ್ಖಾನೆಗೆ ಬಳಸಿಕೊಂಡು ಉಳಿದ ವಿದ್ಯುತ್‌ ಅನ್ನು ವಿದ್ಯುತ್‌ ಇಲಾಖೆಗೆ ಮಾರಾಟ ಮಾಡಲಾಗುವುದು ಎಂದರು.

ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆಗೆ 6 ಕೋಟಿ ಗುತ್ತಿಗೆ ಹಣ ನೀಡಬೇಕಿದೆ. ಚಾಮುಂಡೇಶ್ವರಿ ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆ ಆರಂಭವಾದ ನಂತರ ಗುತ್ತಿಗೆ ಹಣ ನೀಡಲಾಗುವುದು ಕಾರ್ಖಾನೆಯ ಷೇರುದಾರರಿಗೆ ಪ್ರತಿ ವರ್ಷದಂತೆ ಈ ವರ್ಷ 25 ಕೆ.ಜಿ. ಸಕ್ಕರೆ ನೀಡಲಾಗುವುದು. 18ಸಾವಿರ ಷೇರುದಾರರಿಗೆ ಸಕ್ಕರೆ ವಿತರಿಸಲಾಗುವುದು. ಕಾರ್ಖಾನೆಯ ಆಧುನೀಕರಣದಿಂದಾಗಿ ಕಬ್ಬು ಅರೆಯುವಿಕೆ ಸಾಮರ್ಥ್ಯ ಹೆಚ್ಚಾಗಲಿದೆ. ಹಾಗಾಗಿ ಹೆಚ್ಚು ಪ್ರಮಾಣದ ಕಬ್ಬು ಅಗತ್ಯ ಇದೆ. ತಾಲೂಕಿನಲ್ಲಿ ನೀರಾವರಿ ಸೌಲಭ್ಯ ವಿಸ್ತಾರವಾಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಕಬ್ಬು ಬೆಳೆಯುವ ಪ್ರದೇಶ ಹೆಚ್ಚಾಗಲಿದೆ ಎಂದರು.

ಶೇ.92ರಷ್ಟುಬಾಯ್ಲರ್‌ ಕಾಮಗಾರಿ ಮುಗಿದಿದೆ. ಮಿಲ್‌್ಕ ಛೇಂಬರ್‌ನ ಜೋಡಣಾ ಕಾರ್ಯವು ಸದ್ಯ ಪೂರ್ಣಗೊಂಡಿದೆ. ಕಾರ್ಖಾನೆಯ ಆಧುನಿಕ ನವೀಕರಣಕ್ಕೆ ಈಗಾಗಲೇ 140 ಕೋಟಿ ರು. ಖರ್ಚಾಗಿದ್ದು, ಇನ್ನೂ ಸುಮಾರು 15 ಕೋಟಿ ರು. ಅಗತ್ಯವಿದೆ.

- ಸಿ.ಎನ್‌.ಬಾಲಕೃಷ್ಣ, ಶಾಸಕ

ಪ್ರತಿದಿನ ಮೂರುವರೆ ಸಾವಿರ ಟನ್‌ ಕಬ್ಬು ಅರೆಯುವಿಕೆ

ಪ್ರತಿದಿನ ಮೂರುವರೆ ಸಾವಿರ ಟನ್‌ ಕಬ್ಬು ಅರೆಯುವ ಸಾಮರ್ಥ್ಯಕ್ಕೆ ಕಾರ್ಖಾನೆಯನ್ನು ವಿಸ್ತರಿಸಿದ್ದು, ದಿನಕ್ಕೆ ಎಕರೆ ಪ್ರದೇಶದ ಕಬ್ಬಿನ ಅವಶ್ಯಕತೆಯಿದೆ. ಸರ್ಕಾರವು ಕಬ್ಬು ಬೆಳೆಗೆ ನಿಗದಿತ ಬೆಲೆ ಕಲ್ಪಿಸಿದರೆ ರೈತ ಸಮುದಾಯವು ಚೇತರಿಕೆ ಕಾಣಲಿದೆ. ಈ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಬಾಲಕೃಷ್ಣ ಭರವಸೆ ನೀಡಿದರು.

ಸದ್ಯ ಈ ಬಾರಿ ತಾಲೂಕಿನ ಬಹುತೇಕ ಕೆರೆಗಳಿಗೆ ಏತನೀರಾವರಿ ಯೋಜನೆಯಡಿ ನೀರು ತುಂಬಿಸಿದ್ದು, ಈ ವ್ಯಾಪ್ತಿಯಲ್ಲಿ ಅಂತರ್ಜಲ ಚೇತರಿಕೆ ಕಂಡಿರುವುದರ ಜತೆಗೆ ಕೊಳವೆ ಬಾವಿಗಳಲ್ಲಿಯೂ ನೀರಿನ ಪ್ರಮಾಣ ಹೆಚ್ಚಾಗಿದೆ. ಇದರಿಂದ ಕಬ್ಬು ಬೆಳೆಯುವ ಆಸಕ್ತ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ. ರೈತರು ಕಬ್ಬು ಬೆಳೆ ಅಳವಡಿಸಿಕೊಂಡು ಆರ್ಥಿಕವಾಗಿ ಸದೃಢಗೊಳ್ಳಬಹುದು ಎಂದರು.