ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಮೈಸೂರು ಆರೋಗ್ಯಾಧಿಕಾರಿಗೆ ಕೊರೋನಾ ಸೋಂಕು ತಗುಲಿದೆ. ಇತ್ತೋಚೆಗಷ್ಟೇ ಪಾರ್ಟಿಯೊಂದರ ಮೇಲೆ ದಾಳಿ ಮಾಡಿದ್ದು ಈ ವೇಳೆ ಸೋಂಕು ತಗುಲಿದ ಶಂಕೆ ಇದೆ.
ಮೈಸೂರು/ಹಾಸನ (ಏ.18): ಕೊರೋನಾ 2ನೇ ಅಲೆ ಆರ್ಭಟ ಹೆಚ್ಚಾಗಿರುವ ನಡುವೆ ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಮರನಾಥ್ ಮತ್ತು ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸಗೌಡ ಅವರಿಗೆ ಕೊರೋನಾ ಸೋಂಕು ದೃಢವಾಗಿದೆ.
ಡಾ.ಅಮರನಾಥ್ ಅವರ ಚೇಂಬರ್ ಸೀಲ್‌ಡೌನ್ ಮಾಡಲಾಗಿದೆ. ಅದೇ ರೀತಿಯಾಗಿ ಹಾಸನ ಎಸ್‌ಪಿ ಅವರು ಕೆಲವು ದಿನಗಳ ಹಿಂದೆ ರೇವ್ ಪಾರ್ಟಿ ಮೇಲೆ ದಾಳಿ ನಡೆಸಿ, 130 ಜನರನ್ನು ವಶಕ್ಕೆ ಪಡೆದಿದ್ದರು.
ಬೆಂಗ್ಳೂರಲ್ಲಿ ಕೊರೋನಾ ಹೊಸ ದಾಖಲೆ: ಕಂಗಾಲಾದ ಜನತೆ..! .
ಈ ಸಂದರ್ಭದಲ್ಲಿ ಸೋಂಕು ಬಂದಿರುವ ಸಾಧ್ಯತೆ ಇದ್ದು, ಇದೀಗ ಅವರು ಹೋಂ ಐಸೋಲೇಷನ್‌ನಲ್ಲಿ ಇದ್ದಾರೆ.
ಈಗಾಗಲೇ ಕೊರೋನಾ ಮಹಾಮಾರಿ ರಾಜ್ಯದಲ್ಲಿ ತನ್ನ ಅಟ್ಟಹಾಸ ಮೆರೆಯುತ್ತಿದ್ದು, ಸಾವಿರ ಸಾವಿರ ಸಂಖ್ಯೆಯಲ್ಲಿ ಪ್ರಕರಣಗಳು ಬರುತ್ತಿದೆ. ಅಲ್ಲದೇ ರಾಜ್ಯದಲ್ಲಿ ಕೊರೋನಾದಿಮದ ಗಮಟೆಗೊಂದು ಸಾವು ಸಂಭವಿಸುತ್ತಿದೆ.
