ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ಪೊಲೀಸರು ಪಕ್ಕಾ ಪ್ಲಾನ್‌ನೊಂದಿಗೆ ದಾಳಿ ನಡೆಸಿದ್ದಾರೆ. ಈ ವೇಳೆ ಪ್ರಜ್ವಲ್ ರೇವಣ್ಣನ ಸೆಲ್‌ನಲ್ಲಿ ಮೊಬೈಲ್, ಪೆನ್ ಡ್ರೈವ್ ಹಾಗೂ 40 ಫೋನ್ ನಂಬರ್‌ಗಳಿದ್ದ ನೋಟ್‌ಬುಕ್ ಪತ್ತೆಯಾಗಿದ್ದು, ತಂದೆ-ತಾಯಿಯ ಹೆಸರನ್ನು ಕೋಡ್ ವರ್ಡ್‌ನಲ್ಲಿ ಬರೆದಿರುವುದು ಬೆಳಕಿಗೆ ಬಂದಿದೆ.

ವರದಿ- ಕಿರಣ್.ಕೆ.ಎನ್.ಏಷ್ಯಾನೆಟ್ ಸುವರ್ಣ ನ್ಯೂಸ್

ಬೆಂಗಳೂರು (ಆ.14): ಪರಪ್ಪನ ಅಗ್ರಹಾರ ಜೈಲಿನ ದಾಳಿ ಮಾಡೋಕೆ ಸಿದ್ದತೆ ಮಾಡಿದ್ದ ಸಿಸಿಬಿ ಪೊಲೀಸರು, ಈ ಬಾರಿ ಪಕ್ಕಾ ಪ್ಲಾನ್ ಮಾಡ್ಕೊಂಡು ಎಂಟ್ರಿಯಾಗಿದ್ರು.. ಆ ಪ್ಲಾನ್ ಹೇಗಿತ್ತು,.? ಪ್ರಜ್ವಲ್ ರೇವಣ್ಣ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದು ಹೇಗೆ..?

ನಾಯಿಯ ಬಾಲ ಯಾವತ್ತಿದ್ರೂ ಡೊಂಕು ಅನ್ನೋ ಮಾತಿ ಇದೆ.. ಆ ಮಾತು ಪರಪ್ಪನ ಅಗ್ರಹಾರ ಜೈಲಿಗೆ ಸರಿಯಾಗೇ ಹೋಲಿಕೆಯಾಗುತ್ತೆ.. ಮೇಲಾಧಿಕಾರಿಗಳು ಎಷ್ಟೇ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ತಿದ್ರು. ಒಳಗೆ ಮಾತ್ರ ಕಳ್ಳಾಟ ಎಂದಿನಂತೆ ನಡೀತನೆ ಇರುತ್ತೆ.

ಪರಪ್ಪನ ಅಗ್ರಹಾರ ಜೈಲಿನ ಮೇಲೆ ಕಳೆದ ಆರನೇ ತಾರೀಖಿನಂದು ದಾಳಿ ನಡೆಸಿದ್ದ ಅಧಿಕಾರಿಗಳು, ಬರೀ ಕೈಯಲ್ಲೇ ವಾಪಸು ಆಗಿದ್ದರು. ದಾಳಿಗೆ ಹೋದ ತಕ್ಷಣ ಎಂಟ್ರಿಯಲ್ಲೇ ಕೆಲ ಸಿಗ್ನಲ್ ಗಳ ಮೂಲಕ ಒಳಗಿನವರಿಗೆ ಸಿಗ್ನಲ್ ಕೊಟ್ಟು ಬಿಡ್ತಿದ್ದರು. ಅಷ್ಟೇ ಅಲ್ದೇ, ಅಧಿಕಾರಿಗಳ ತಂಡದ ಪ್ರತಿಯೊಬ್ಬರಿಗೆ ಸೀಲ್ ಹಾಕಿ ಒಳಗೆ ಬಿಡೋಕೆ ಕನಿಷ್ಠ ಅರ್ಧ ಗಂಟೆ ಆಗೋದು. ಅಷ್ಟರೊಳಗೆ ಒಳಗಿನ ಎಲ್ಲಾ ಅಕ್ರಮ ಚಟುವಟಿಕೆ ಗಳು ಬಂದ್ ಆಗಿಬಿಡುತ್ತಿದ್ವು..

ಆದರೆ ಮೊನ್ನೆ ಮಾತ್ರ ಪಕ್ಕಾ ಪ್ಲಾನ್ ಮಾಡ್ಕೊಂಡು ಹೋಗಿದ್ದ ಪೊಲೀಸರು.. ಮೊದಲಿಗೆ ಮೀಟಿಂಗ್ ನೆಪದಲ್ಲಿ ಸಿಸಿಬಿಯ ಇಬ್ಬರು ಡಿಸಿಪಿ ಗಳು ಮಾತ್ರ ಒಳಗೆ ಹೋಗಿದ್ರು.. ಇದೇ ವೇಳೆ ಅವರ ಕಾರಿನಲ್ಲಿ ಇಬ್ಬರು ಇನ್ಸ್ಪೆಕ್ಟರ್ ಗಳನ್ನು ಕರ್ಕೊಂಡು ಹೋಗಿದ್ರು.. ಒಳಗೆ ಹೋದ ತಕ್ಷಣ ಒಬ್ಬ ಇನ್ಸ್ಪೆಕ್ಟರ್ ಕಂಟ್ರೋಲ್ ರೂಮ್ ನಿಂದ ಯಾವುದೇ ಮಸೇಜ್ ಹೋದದಂತೆ ಎಚ್ಚರಿಕೆ ವಹಿಸಿದ್ರೆ, ಮತ್ತೊಬ್ಬ ಇನ್ಸ್ಪೆಕ್ಟರ್ ಸಿಸಿಟಿವಿ ಕಮಾಂಡೆಂಟ್ ಸೆಂಟರ್ ರೂಮ್ ಗೆ ಹೋಗಿ ಕಂಟ್ರೋಲ್ ತೆಗೆದುಕೊಂಡಿದ್ರು.. ನಂತರವೇ 120 ಜನರ ಟೀಂ ಜೈಲಿನ ಒಳಗೆ ಎಂಟ್ರಿಯಾಗಿತ್ತು.

ಈ ವೇಳೆ ನೇರವಾಗಿ ಪ್ರಜ್ವಲ್ ರೇವಣ್ಣ ಸೆಲ್ ಗೆ ಹೋಗಿ ಪರಿಶೀಲನೆ ನಡೆಸಿದ ವೇಳೆ ಮೊಬೈಲ್, ನೋಟ್ ಬುಕ್ , ಪೆನ್ ಡ್ರೈವ್ ಪತ್ತೆಯಾಗಿದೆ. ಮೊದಲಿಗೆ ಇದೆಲ್ಲಾ ನಂದೇ ಅಂತಾ ಒಪ್ಪಿಕೊಂಡ ಪ್ರಜ್ವಲ್ ರೇವಣ್ಣ.. ಪಾಸ್ ವರ್ಡ್ ಓಪನ್ ಮಾಡು ಅಂತಿದ್ದಂತೆ ಅಲರ್ಟ್ ಆದ ಪ್ರಜ್ವಲ್ ಇದು ನಂದಲ್ಲ ಅಂತಾ ಉಲ್ಟಾ ಹೊಡೆದಿದ್ದಾನೆ. ತಂದೆ ರೇವಣ್ಣ ಹೆಸರು ಶಿವ- ತಾಯಿ ಭವಾನಿ ಹೆಸರು ಪಾರ್ವತಿ ಎಂದು ಸೇವ್ ಮಾಡಿಕೊಂಡಿದ್ದಾನೆ.

ಪ್ರಜ್ವಲ್ ರೇವಣ್ಣ ನೋಟ್ ಬುಕ್‌ನಲ್ಲಿ ಪತ್ತೆಯಾಯ್ತು 40 ಪೋನ್ ನಂಬರ್:

ಪೊಲೀಸರು, ದಾಳಿ ನಡೆಸಿ ವಶಪಡಿಸಿಕೊಂಡ ನೋಟ್ ಬುಕ್ ನಲ್ಲಿ ಬರೋಬ್ಬರಿ 40 ಪೋನ್ ನಂಬರ್ ಗಳು ಪತ್ತೆಯಾಗಿವೆ. ಅದರಲ್ಲಿ ತಂದೆ ರೇವಣ್ಣ ಹೆಸರನ್ನು ಶಿವ, ತಾಯಿ ಭವಾನಿ ರೇವಣ್ಣ ಹೆಸರನ್ನು ಪಾರ್ವತಿ ಅಂತಾ ಬರೆದುಕೊಳ್ಳಲಾಗಿದೆ.. ಅಷ್ಟೇ ಅಲ್ದೇ, ಹಲವು ಅಪ್ತರು ಮತ್ತು ಅಪರಿಚಿತರ ಪೋನ್ ನಂಬರ್ ಗಳು ಕೂಡ ಪತ್ತೆಯಾಗಿವೆ. ಮೊದಲಿಗೆ ನಂದೇ ಪೋನ್ ಅಂತಾ ಒಪ್ಪಿಕೊಂಡ ಪ್ರಜ್ವಲ್. ನಂತರ ಮೊಬೈಲ್ ನ ಪಾಸ್ ವರ್ಡ್ ಓಪನ್ ಮಾಡುವಂತೆ ಸೂಚಿಸಿದ ವೇಳೆ ಮೊಬೈಲ್ ನಂದಲ್ಲ ಅಂದಿದ್ದಾನೆ.. ಹಾಗಾಗ ಮನೆಯವರ ಬಳಿ ಮಾತಾಡಲು ಪೋನ್ ಬಳಕೆ ಮಾಡುತ್ತಿದ್ದೆ ಅಂತಾ ಹೇಳಿದ ಪ್ರಜ್ವಲ್, ಯಾರು ಮೊಬೈಲ್ ತಂದು ಕೊಟ್ಟರು ಅನ್ನೋದು ಬಾಯಿಬಿಡ್ತಿಲ್ಲ.

ಸದ್ಯ ಮೊಬೈಲ್‌, ಪೆನ್ ಡ್ರೈವ್ ಎಫ್ ಎಸ್ ಎಲ್ ಗೆ ಕಳಸಿರೋ ಪೊಲೀಸರು, ರಿಪೋರ್ಟ್ ಗಾಗಿ ಕಾದಿದ್ದಾರೆ. ಮತ್ತೊಂದು ಕಡೆ ಖಡಕ್ ಅಧಿಕಾರಿ ಅಂತಾ ಫೇಮಸ್ ಆಗಿದ್ದ ಡಿಜಿ ಅಲೋಕ್ ಕುಮಾರ್ ಅವರಿಗೆ ಈ ಘಟನೆಯಿಂದ ಮುಜುಗರದ ಸನ್ನಿವೇಶ ಎದುರಾಗಿದ್ದು, ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸೋಕೆ ಮುಂದಾಗಿದ್ದಾರೆ.