ಹಾಸನ (ಏ.06):  ಸಿಎಂ ಹಾಗೂ ಸಚಿವರ ನಡುವಿನ ತಿಕ್ಕಾಟದಲ್ಲಿ ರಾಜ್ಯ ಸರ್ಕಾರ ಬೇಸಿಗೆಯನ್ನು ನಿರ್ವಹಿಸುವಲ್ಲಿ ವಿಫಲವಾಗಿದೆ. ಹಾಗಾಗಿ ಸರ್ಕಾರ ಪ್ರತಿ ಶಾಸಕರಿಗೆ ತಮ್ಮ ಕ್ಷೇತ್ರದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲಿಕ್ಕಾಗಿ 2 ಕೋಟಿ ರು.ಗಳನ್ನಾದರೂ ಬಿಡುಗಡೆ ಮಾಡಬೇಕು ಎಂದು ಮಾಜಿ ಸಚಿವ ಎಚ್‌.ಡಿ.ರೇವಣ್ಣ ಒತ್ತಾಯಿಸಿದರು.

ನಗರದ ಸಂಸದರ ನಿವಾಸದಲ್ಲಿ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನ ಜಿಲ್ಲೆಯ ಕೆಲ ತಾಲೂಕುಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಇದೆ. ಇನ್ನು ಬಿಸಿಲು 38 ಡಿಗ್ರಿ ತಲುಪಿದೆ. ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗಾಗಿ ಗ್ರಾಮಗಳಲ್ಲಿ ಪರದಾಟ ಉಂಟಾಗಿ ಘರ್ಷಣೆ ಆಗುವ ಸಾಧ್ಯತೆಯೂ ಇದೆ ಎಂದು ಆತಂಕ ವ್ಯಕ್ತಪಡಿಸಿದರು

'2023ರಲ್ಲಿ ಮತ್ತೆ ಎಚ್‌ಡಿಕೆ ಸಿಎಂ : ಎಚ್‌ಡಿಕೆ ಬಳಿ ಇದ್ದ ಗ್ರಹಗಳು ಈಗ ಡಿಕೆಶಿ ಬಳಿ' ...

5 ಲಕ್ಷ ಕೊಡಲಿ:  ಭಾನುವಾರ ಸಂಜೆ ಹೊಳೆನರಸೀಪುರ ತಾಲೂಕಿನ ಬಾಚೇನಹಳ್ಳಿಯಲ್ಲಿ ದುರ್ಘಟನೆ ನಡೆದು ಸ್ಥಳದಲ್ಲೆ ಓರ್ವ ಸಾವನ್ನಪ್ಪಿದರೆ, ಸೋಮವಾರದಂದು ಬೆಂಗಳೂರಿನ ಆಸ್ಪತ್ರೆಯಲ್ಲಿ ಮತ್ತೊಬ್ಬ ಸಾವನ್ನಪ್ಪಿದ್ದಾರೆ. ಆ ಬಡ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ. ಈ ಕುಟುಂಬಕ್ಕೆ ಕನಿಷ್ಠ 5 ಲಕ್ಷ ರೂಗಳನ್ನು ಕೊಟ್ಟು ನೆರವಾಗುವಂತೆ ಈಗಾಗಲೇ ಸಚಿವರಲ್ಲಿ ಹೇಳಿದ್ದೇನೆ. ಜೊತೆಗೆ ಈ ಬಗ್ಗೆ ಸಮಗ್ರ ತನಿಖೆ ಮಾಡಬೇಕು ಎಂದರು.

ಕಾಡಾನೆ ಸಮಸ್ಯೆ ಬಗೆಹರಿಸಲಿ:  ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಕೆ. ಕುಮಾರಸ್ವಾಮಿ ಮಾತನಾಡಿ, ಸಕಲೇಶಪುರ ಕ್ಷೇತ್ರದಲ್ಲಿ ಆನೆಗಳ ಕಾಟಕ್ಕೆ ಮರಣ ಹೊಂದಿದಾಗ ಪರಿಹಾರ ಕೊಡುವ ಕೆಲಸ ಮಾಡಲಾಗಿದೆ. ಆನೆಗಳ ವಿಚಾರವಾಗಿ ಉಸ್ತುವಾರಿ ಸಚಿವರು ಮತ್ತು ಅರಣ್ಯ ಸಚಿವರೆಲ್ಲಾ ಬಂದು ಸು​ರ್ಘವಾಗಿ ಚರ್ಚೆಯಾದರೂ ಫಲಿತಾಂಶ ಶೂನ್ಯವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಬಗ್ಗೆ ಇಚ್ಛಾಶಕ್ತಿಯನ್ನು ಪ್ರದರ್ಶನ ಮಾಡುತ್ತಿಲ್ಲ. ಒಂಟಿ ಆನೆ ಹಿಡಿಯಲು ಇನ್ನು ಕೂಡ ತೀರ್ಮಾನ ಕೈಗೊಂಡಿರುವುದಿಲ್ಲ. ಕನಿಷ್ಟಮೂರು ನಾಲ್ಕು ಒಂಟಿ ಆನೆ ಹಿಡಿಯಲೇಬೇಕು. ಮಾನವ ಮತ್ತು ಪ್ರಾಣಿ ಸಂಘರ್ಷಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅಂತ್ಯ ಹಾಡಲೇಬೇಕು. ಇಲ್ಲ ಸಂಪೂರ್ಣ ಸ್ಥಳಾಂತರ ಮಾಡಬೇಕು. ಇಲ್ಲವೇ ಆನೆ ಕಾರಿಡಾರ್‌ ಮಾಡಲಿ ಎಂದು ಆಗ್ರಹಿಸಿದರು.