Asianet Suvarna News Asianet Suvarna News

ಹಾಸನ: ‘ಅಧಿಕಾರಿಗಳೇ ಹಣ ಡ್ರಾ ಮಾಡಿಕೊಳ್ಳಿ’

60 ದಿನಗಳ ಕಾಲ ನೆರೆ ಸಂತ್ರಸ್ತರಿಗೆ ಜಿಲ್ಲಾಡಳಿತ ಸೌಲಭ್ಯಗಳನ್ನು ಒದಗಿಸಲಿದೆ. ಸಂತ್ರಸ್ತರ ಪುನರ್‌ ವಸತಿಗೆ ಅಗತ್ಯವಾದ ಹಣವನ್ನು ತಾಲೂಕುವಾರು ಅಧಿಕಾರಿಗಳು ಕೂಡಲೇ ಡ್ರಾ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಅಕ್ರಂ ಪಾಷ ಸೂಚಿಸಿದರು. ಸಂತ್ರಸ್ತರ ಕುಟುಂಬಗಳಿಗೆ ತುರ್ತು ಅವಶ್ಯಕತೆಗಳಾದ ಬಟ್ಟೆ, ಪಾತ್ರೆ ಇತರೆ ಸಾಮಗ್ರಿಗಳನ್ನು ಖರೀದಿಸಲು 3,800 ರು.ತಾತ್ಕಾಲಿಕ ಪರಿಹಾರ ಧನದ ಚೆಕ್‌ನ್ನು ಆದಷ್ಟುಬೇಗ ವಿತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

Hassan DC orders officials to take actions for flood victims welfare
Author
Bangalore, First Published Aug 16, 2019, 3:29 PM IST

ಹಾಸನ(ಆ.16): ಸಂತ್ರಸ್ತರ ಪುನರ್‌ ವಸತಿಗೆ ಅಗತ್ಯವಾದ ಹಣವನ್ನು ತಾಲೂಕುವಾರು ಅಧಿಕಾರಿಗಳು ಕೂಡಲೇ ಡ್ರಾ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಅಕ್ರಂ ಪಾಷ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಪ್ರವಾಹದಿಂದ ಅತೀವೃಷ್ಟಿಗೆ ಒಳಗಾದ ಸಂತ್ರಸ್ತರ ಕುಟುಂಬಗಳಿಗೆ ತುರ್ತು ಅವಶ್ಯಕತೆಗಳಾದ ಬಟ್ಟೆ, ಪಾತ್ರೆ ಇತರೆ ಸಾಮಗ್ರಿಗಳನ್ನು ಖರೀದಿಸಲು 3,800 ರು.ತಾತ್ಕಾಲಿಕ ಪರಿಹಾರ ಧನದ ಚೆಕ್‌ನ್ನು ಆದಷ್ಟುಬೇಗ ವಿತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸಂತ್ರಸ್ತರಿಗೆ 60ದಿನ ಜಿಲ್ಲಾಡಳಿತದಿಂದ ಸೌಲಭ್ಯ:

ಸಂತ್ರಸ್ತರಾಗಿರುವ ಕುಟುಂಬಗಳಿಗೆ 60 ದಿನಗಳ ಕಾಲ ಜಿಲ್ಲಾಡಳಿತವೇ ಸೌಲಭ್ಯ ಒದಗಿಸಬೇಕಿದೆ. ಹಾಗಾಗಿ ಪುನರ್‌ ವಸತಿ ಕೆಲಸಗಳನ್ನು ಆದಷ್ಟುಬೇಗ ಮಾಡಬೇಕು ಎಂದು ಅವರು, ನೋಡಲ್‌ ಅಧಿಕಾರಿಗಳು ತಾಲೂಕುವಾರು ಸಂತ್ರಸ್ತ ಮನೆಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿ, ಸೌಲಭ್ಯ ಒದಗಿಸಿ ಎಂದು ಸೂಚಿಸಿದರು.

ಜಿಲ್ಲಾದ್ಯಂತ ಬೆಳೆ ಹಾನಿಯಾಗಿರುವ ಕುರಿತು ಜಂಟಿ ಸಮೀಕ್ಷೆ ನಡೆಸುವಂತೆ ಆದೇಶಿಸಿದರು. ಈ ವೇಳೆ ಸಂತ್ರಸ್ತ ರೈತರ ಹೆಸರು, ಊರು, ಆಧಾರ್‌ ನಂಬರ್‌, ಬ್ಯಾಂಕ್‌ ಖಾತೆಯ ನಂಬರ್‌ ಸೇರಿದಂತೆ ಬೆಳೆ ಹಾನಿ ಪ್ರಮಾಣದ ಕುರಿತು ಮಾಹಿತಿ ಕಲೆಹಾಕಿ ಪರಿಹಾರದ ನೋಂದಣಿ ಪಟ್ಟಿಯನ್ನು ತಾಲೂಕುವಾರು ಸಿದ್ಧಪಡಿಸಿ ಎಂದರು.

ಗುಂಡಿ ಬಿದ್ದ ರಸ್ತೆ ದುರಸ್ತಿಗೆ ಸೂಚನೆ:

ಗೋಶಾಲೆಗಳು ಖಾಲಿಯಿದ್ದರೇ, ಆ ಕುರಿತಂತೆ ಫೋಟೋ ಮತ್ತು ಅಗತ್ಯ ದಾಖಲೆಗಳನ್ನು ಕಲೆಹಾಕಿ ಖಾಲಿಯಿರುವ ಗೋಶಾಲೆಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ನಿರ್ದೇಶಿಸಿದರು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಗುಂಡಿ ಬಿದ್ದಿರುವ ರಸ್ತೆಗಳ ದುರಸ್ತಿ ಕಾರ್ಯವನ್ನು ಶೀಘ್ರದಲ್ಲೇ ಮಾಡಿ ಮುಗಿಸುವಂತೆ ಡಿಸಿ ಅಕ್ರಂ ಪಾಷ ಸಂಬಂಧಿಸಿದ ಅಧಿಕಾರಿಗಳಿಗೆ ಹೇಳಿದರು.

ಮೈಸೂರು, ಹಾಸನ, ತುಮಕೂರಿಗರಿಗೆ ಇಲ್ಲಿದೆ ಗುಡ್ ನ್ಯೂಸ್

ಆಲೂರು ಮತ್ತು ಸಕಲೇಶಪುರ ತಾಲೂಕುಗಳಲ್ಲಿ ಪುನಃ ನೆರೆ ಬಂದಾಗ ಬಿದ್ದು ಹೋಗುವ ಮನೆಗಳಲ್ಲಿ ವಾಸಿಸದಂತೆ ಜನರಿಗೆ ಎಚ್ಚರಿಕೆ ನೀಡಿ, ಸಂತ್ರಸ್ತ ಕುಟುಂಬಗಳಿಗೆ ಸೂಕ್ತ ಸ್ಥಳಗಳಲ್ಲಿ ಪುನರ್‌ ವಸತಿ ಸೌಲಭ್ಯವನ್ನು ನಿರ್ಮಿಸಿ ಸ್ಥಳಾಂತರಕ್ಕೆ ಅವರ ಮನವೊಲಿಸುವಂತೆ ತಿಳಿಸಿದರು.

ಸಭೆಯಲ್ಲಿ ಎಡಿಸಿ ಎಂ.ಎಲ್‌.ವೈಶಾಲಿ, ಎಸಿ ಡಾ.ಎಚ್‌.ಎಲ್‌.ನಾಗರಾಜ್‌, ಜಂಟಿ ಕೃಷಿ ನಿರ್ದೇಶಕ ಮಧುಸೂದನ್‌ ಇತರರು ಇದ್ದರು.

Follow Us:
Download App:
  • android
  • ios