ಹಾವೇರಿ(ಮಾ.13): ಹರಿಯಾಣ ರಾಜ್ಯದ ಗುರುಗ್ರಾಮ ಜಿಲ್ಲೆ ಸೋಹ್ನಾದ ವ್ಯಾಪಾರಿಗಳಿಬ್ಬರು ಬ್ಯಾಡಗಿ ಮೆಣಸಿನಕಾಯಿ ವ್ಯಾಪಾರಿಯಿಂದ 34.97 ಲಕ್ಷ ಮೌಲ್ಯದ 348.11 ಕ್ವಿಂಟಲ್ ಮೆಣಸಿನಕಾಯಿ ಖರೀದಿಸಿ ಹಣ ಕೊಡದೇ ಮೋಸ ಮಾಡಿರುವ ಕುರಿತು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

ಬ್ಯಾಡಗಿ ಎಪಿಎಂಸಿಯ ವ್ಯಾಪಾರಿ ವೀರೇಶ ಸಿದ್ದಪ್ಪ ಭಾಗೋಜಿ ಮೋಸ ಹೋದವರು. ಹರಿಯಾಣದ ಹೇಮಂತ ವಿನೋದಕುಮಾರ ಬನಸಾಲ್, ನಿಖಿಲ್ ವಿನೋದಕುಮಾರ ಬನಸಾಲ್ ಮೋಸ ಮಾಡಿದವರು. ಫೆ. 8ರಂದು ಭಾಗೋಜಿ ಅವರಿಂದ ಅಂದಾಜು 34 ಲಕ್ಷ ಮೌಲ್ಯದ ಮೆಣಸಿನಕಾಯಿ ಖರೀದಿಸಿದ್ದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಹರಿಯಾಣಕ್ಕೆ ಹೋಗಿ ಡಿಲೆವರಿ ಪಡೆದ ಕೂಡಲೇ ಹಣವನ್ನು ಡಿಡಿ ಅಥವಾ ಆರ್‌ಟಿಜಿಎಸ್ ಮಾಡುವುದಾಗಿ ತಿಳಿಸಿದ್ದರು. ಫೆ. 12ರಂದು ಮೆಣಸಿನಕಾಯಿ ಪಡೆದುಕೊಂಡಿದ್ದು, ಹಣ ಕೇಳಿದರೆ ಕೊಡದೇ ಮೋಸ ಮಾಡಿದ್ದಲ್ಲದೇ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಭಾಗೋಜಿ ತಿಳಿಸಿದ್ದಾರೆ.