ಚಾಮರಾಜನಗರ: ಬಳಕೆದಾರರಿಗೆ ಕಿರುಕುಳ, ಚೆಸ್ಕಾಂನಿಂದ ನಿರಂತರ ಶಾಕ್..!
ಎಇ ಎಚ್ ಸಂಖ್ಯೆ 147ರ ಸಂಖ್ಯೆಯ ಗ್ರಾಹಕರಿಗೂ 2120 ರು. ನಮೂದಿಸುವ ಬದಲು 6 ಸಾವಿರ ರುಗಳಿಗೂ ಅಧಿಕ ಬಿಲ್ ನೀಡಲಾಗಿದ್ದು, ಈ ಸಂಬಂಧ ಅಧಿಕಾರಿಗಳು ಪರಿಶೀಲಿಸಿ ಗ್ರಾಹಕರಿಗೆ ನ್ಯಾಯ ದೊರಕಿಸಿಕೊಡದಿದ್ದಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಕೊಳ್ಳೇಗಾಲ(ನ.16): ಚಾಮುಂಡೇಶ್ವರಿ ವಿದ್ಯುತ್ ನಿಗಮ ಕೊಳ್ಳೇಗಾಲ ಗ್ರಾಹಕರಿಗೆ ಹಲವು ಬಾರಿ ವಿದ್ಯುತ್ ಬಾಕಿ ಇಲ್ಲದಿದ್ದರೂ ಬಾಕಿ ಇದೆ ಎಂದು ನಮೂದಿಸಿ ಶಾಕ್ ನೀಡುವ ಮೂಲಕ ವಿವಾದಕ್ಕಿಡಾಗಿದೆ.
ಹೌದು! ಗ್ರಾಹಕ ನಾಗೇಂದ್ರ ಎಂಬುವ (ಎಇಎಚ್ 138 ಸಂಖ್ಯೆ) ಇವರಿಗೆ 734 ಯುನಿಟ್ ಬಳಕೆ ಮಾಡಲಾಗಿದೆ, ಹಾಗಾಗಿ ಹಳೆ ಬಾಕಿ 14,206 ರು. ಸೇರಿದಂತೆ 20,838ರು. ಕೂಡಲೇ ಪಾವತಿಸಿ ಎಂದು ನೋಟೀಸ್ ನೀಡಲಾಗಿದೆ. ಈ ಗ್ರಾಹಕರು ಇಲಾಖೆಯ ಯಾವುದೆ ಬಾಕಿ ಪಾವತಿಸಬೇಕಿಲ್ಲ, ಈ ಗ್ರಾಹಕರಿಗೆ ಹತ್ತಾರು ತಿಂಗಳು ಬಿಲ್ ನೀಡದೆ 2022ರಲ್ಲಿ ಸತಾಯಿಸಿ ನಂತರ ಬಿಲ್ ನೀಡಿದ ಬಳಿಕ ಎಲ್ಲಾ ಹಣ ಪಾವತಿಸಲಾಗಿದೆ. ಆದರೂ ಸಹ ಗ್ರಾಹಕರಿಗೆ 13-9-2-23ರಿಂದ 13-10-2023ರ ವರೆಗೆ ಹಳೆ ಬಾಕಿ ಎಂದು 17,863 ರು. ನಮೂದಿಸಿರುವುದರ ಕುರಿತು ಟೌನ್ ವಿದ್ಯುತ್ ಬಳಕೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ಒ. ಎ . ಸುಂದರರಾಜು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಹಿರಿಯ ಅಧಿಕಾರಿಗಳು ಈ ಬಗ್ಗೆ ಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಚಾಮರಾಜನಗರ: ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರೆ ಸಂಭ್ರಮ
ಇದೇ ರೀತಿ ಎಇ ಎಚ್ ಸಂಖ್ಯೆ 147ರ ಸಂಖ್ಯೆಯ ಗ್ರಾಹಕರಿಗೂ 2120 ರು. ನಮೂದಿಸುವ ಬದಲು 6 ಸಾವಿರ ರುಗಳಿಗೂ ಅಧಿಕ ಬಿಲ್ ನೀಡಲಾಗಿದ್ದು, ಈ ಸಂಬಂಧ ಅಧಿಕಾರಿಗಳು ಪರಿಶೀಲಿಸಿ ಗ್ರಾಹಕರಿಗೆ ನ್ಯಾಯ ದೊರಕಿಸಿಕೊಡದಿದ್ದಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.