ಹನೂರು (ನ.24) : ರಾಜ್ಯದಲ್ಲಿ ಶೀಘ್ರದಲ್ಲೇ ಗ್ರಾಮ ಪಮಚಾಯತ್ ಚುನಾವಣೆ ಆರಂಭವಾಗುತ್ತಿದೆ. ಗ್ರಾಮ ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ವಿವಿಧ ಪಕ್ಷಗಳಲ್ಲಿ ಭರ್ಜರಿ ತಯಾರಿಯೂ ನಡೆಯುತ್ತಿದೆ. 

ಎಲ್ಲಾ ಪಕ್ಷಗಳು ತಮ್ಮ ಗೆಲುವಿಗಾಗಿ ವಿವಿಧ ರೀತಿಯ ಸಂಘಟನೆಯಲ್ಲಿ ತೊಡಗಿಕೊಂಡಿವೆ. ಇದೇ ಸಂದರ್ಭದಲ್ಲಿ ಪಕ್ಷಾಮತರ ಪರ್ವವೂ ಕೂಡ ಜೋರಾಗಿದೆ.

ಹನೂರಿನ  ಮಾರ್ಟಳ್ಳಿ ಗ್ರಾಪಂ ವ್ಯಾಪ್ತಿಯ ಕಡಂಬೂರು ಗ್ರಾಮದ ತಾಪಂ ಮಾಜಿ ಸದಸ್ಯ ಕೃಷ್ಣ, ಕುಮಾರ್‌, ಬಿದರಹಳ್ಳಿಯ ಮಾದಯ್ಯ, ಕಾಂಗ್ರೆಸ್‌ ತೊರೆದು ಜೆಡಿಎಸ್‌ಗೆ ಸೇರ್ಪಡೆಗೊಂಡಿದ್ದಾರೆ. 

ಪಂಚಾಯ್ತಿ ಚುನಾವಣೆಗೆ ಬಿಜೆಪಿ ಪಂಚತಂತ್ರ : ಸಿದ್ಧವಾಗ್ತಿದೆ ಮಾಸ್ಟರ್ ಪ್ಲಾನ್

ಈ ವೇಳೆ ಜಿಪಂ ಮಾಜಿ ಉಪಾಧ್ಯಕ್ಷ ಶಿವಮೂರ್ತಿ, ತಾಪಂ ಸದಸ್ಯ ಮಣಿ, ಬಂಡಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಜೆಸ್ಸಿಂ, ಸತ್ತಿಮಂಗಲ ಮಹದೇವ, ಮಂಚಪುರ ಶಿವರಾಮ್‌, ಮಾಜಿ ಸೈನಿಕರಾದ ಲಿಯಸ್‌, ಜೋಸೆಪ್‌, ಡೇವಿಡ್‌ ಇದ್ದರು.