ಮೈಸೂರು[ಜೂ.26]: ಹನೂರು ಶಾಸಕ ಆರ್‌.ನರೇಂದ್ರ ಮೈಸೂರಿನಲ್ಲಿ ಭಾನುವಾರ ನಡೆದ ಪುತ್ರಿಯ ಮದುವೆ ಸಮಾರಂಭದಲ್ಲಿ ಸಂಬಂಧಿಕರೊಂದಿಗೆ ಡ್ಯಾನ್ಸ್‌ ಮಾಡಿದ್ದು, ಈ ವಿಡಿಯೋ ಈಗ ವೈರಲ್‌ ಆಗಿದೆ. ನರೇಂದ್ರ ಅವರ ಪುತ್ರಿಯ ವಿವಾಹ ಇಲ್ಲಿನ ವರ್ತುಲ ರಸ್ತೆಯ ಕಲ್ಯಾಣ ಮಂಟಪದಲ್ಲಿ ನೆರವೇರಿತು.

ಮದುವೆ ಮುಗಿದ ನಂತರ ಸಿನಿಮಾ ಗೀತೆಗೆ ಸಂಬಂಧಿಕರು ನೃತ್ಯ ಮಾಡುತ್ತಿದ್ದರು. ಆಗ ಯುವಕನೊಬ್ಬ ಶಾಸಕ ನರೇಂದ್ರ ಅವರನ್ನು ನೃತ್ಯ ಮಾಡುವಂತೆ ಬಲವಂತ ಮಾಡಿದ. ಆಗ ನರೇಂದ್ರ ಅವರು ಕುಟುಂಬದ ಸದಸ್ಯರೊಂದಿಗೆ ಹೆಜ್ಜೆ ಹಾಕಿದ್ದಾರೆ.

ಮದುವೆ ಆರತಕ್ಷತೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಾ.ಜಿ.ಪರಮೇಶ್ವರ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸೇರಿದಂತೆ ಕಾಂಗ್ರೆಸ್‌ನ ಹಲವಾರು ಮುಖಂಡರು ಭಾಗವಹಿಸಿದ್ದರು.