ವಿಎಚ್‌ಪಿ ನಿರ್ಮಿಸಿದ ‘ಅಭಯ’ ಮನೆ ಹಸ್ತಾಂತರ

ಕಳೆದ ಮೂರು ವರ್ಷಗಳಿಂದ ಸೂರಿಲ್ಲದೆ ಮಳೆ, ಗಾಳಿ, ಚಳಿಗೆ ಸಣ್ಣ ಜೋಪಡಿಯೊಂದ ವಾಸಿಸುತ್ತಿದ್ದ ಬಡಕುಟುಂಬಕ್ಕೆ ವಿಶ್ವಹಿಂದು ಪರಿಷತ್ ಕಾರ್ಯಕರ್ತರು ಮನೆ ನಿರ್ಮಿಸಿಕೊಟ್ಟಿರುವುದು ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತಪಡಿಸಲಾಗಿದೆ. "ಅಭಯ" ಹೆಸರಿನ ಮನೆಯನ್ನುಕಾರ್ಯಕರ್ತರು  ಕುಟುಂಬದವರಿಗೆ ಹಸ್ತಾಂತರಿಸಿದರು

Handover of 'Abhaya' house built by VHP ravi

ಉಪ್ಪಿನಂಗಡಿ(ಜು.17): ಪುತ್ತೂರು ತಾಲೂಕು ಬಜತ್ತೂರು ಗ್ರಾಮದ ಕುರ್ತಡ್ಕ ಎಂಬಲ್ಲಿ ಜೋಪಡಿ ವಾಸದಲ್ಲಿ ಸಂಕಷ್ಟಪಡುತ್ತಿದ್ದ ಅಸಹಾಯಕ ಕುಟುಂಬವೊಂದಕ್ಕೆ ವಿಶ್ವ ಹಿಂದೂ ಪರಿಷತ್‌ ಕಾಂಚನ ಘಟಕದ ಕಾರ್ಯಕರ್ತರು ನಿರ್ಮಿಸಿಕೊಟ್ಟನೂತನ ಮನೆ ‘ಅಭಯ’ವನ್ನು ಶನಿವಾರ ಹಸ್ತಾಂತರಿಸಲಾಯಿತು.

ವಿಹಿಂಪ(VHP), ಭಜರಂಗದಳದ ಮುಂದಾಳುಗಳಾದ ಶರಣ್‌ ಪಂಪ್‌ವೆಲ್‌ (sharan pumpwell), ಮುರಳೀಕೃಷ್ಣ(Murulikrishna) ಹಸಂತಡ್ಕ, ಭರತ್‌ ಕುಮ್ಡೇಲು, ಸುದರ್ಶನ್‌, ಮಹೇಶ್‌ ಬಜತ್ತೂರು, ಯು.ಜಿ. ರಾಧ, ಮುಕುಂದ ಬಜತ್ತೂರು, ಮೂಲಚಂದ್ರ, ರಾಜಶೇಖರ್‌ ಮೊದಲಾದ ಪ್ರಮುಖರ ಸಮ್ಮುಖದಲ್ಲಿ ಮನೆಯ ಯಜಮಾನರಾದ ಚಂದ್ರ-ಲಕ್ಷ್ಮೇ ದಂಪತಿಗೆ ಮತ್ತವರ ಮಕ್ಕಳಿಗೆ ಕೀಲಿ ಕೈಯನ್ನು ಹಸ್ತಾಂತರಿಸಿದರು.

ಉಪೇಕ್ಷಿತ ಸಮಾಜದ ಬಂಧುಗಳಾದ ಚಂದ್ರ ಮತ್ತವರ ಕುಟುಂಬ ಸದಸ್ಯರು ಪಡುತ್ತಿದ್ದ ಸಂಕಷ್ಟವನ್ನು ಮನಗಂಡು, ಕುಟುಂಬದ ಸದಸ್ಯರಿಗೆ ನೆಮ್ಮದಿಯ ಜೀವನ ನಡೆಸುವ ಸಲುವಾಗಿ ಕಾಂಚನ ಘಟಕದ ವಿಶ್ವ ಹಿಂದೂ ಪರಿಷತ್‌ ಕಾರ್ಯಕರ್ತರು ಸದ್ದಿಲ್ಲದೆ ಮನೆಯೊಂದನ್ನು ನಿರ್ಮಿಸಿ ಹಸ್ತಾಂತರಗೊಳೀಸುತ್ತಿರುವುದು ಶ್ಲಾಘನೀಯ ಕಾರ್ಯ. ದೀನ ದಲಿತರ ಸೇವೆಯೇ ಪರಮ ಆರಾಧನೆ ಎಂಬ ಸಂಘ ತತ್ವವನ್ನು ಇಲ್ಲಿನ ಕಾರ್ಯಕರ್ತರು ಮಾಡಿ ತೋರಿಸಿದ್ದಾರೆ ಎಂದು ಮುರಳೀಕೃಷ್ಣ ಹಸಂತಡ್ಕ ಶ್ಲಾಘಿಸಿದರು.

ಮನೆಯ ಹಸ್ತಾಂತರ ಕಾರ್ಯದ ಬಳಿಕ ಮನೆ ಮಂದಿಯೊಡಗೂಡಿ ಸಹ ಭೋಜನದ ಸವಿಯನ್ನುಂಡರು. ಇದನ್ನೂ ಓದಿ: ಅಸಹಾಯಕ ಕುಟುಂಬಕ್ಕೆ ಆಸರೆಯಾದ ವಿಶ್ವ ಹಿಂದೂ ಪರಿಷತ್‌: ಇಂದು ಗೃಹಪ್ರವೇಶ

ಕಾರ್ಯಕ್ರಮದಲ್ಲಿ ಪ್ರಮುಖರಾದ ರವಿನಂದನ್‌ ಹೆಗ್ಡೆ, ಮಂಜುನಾಥ ಶೆಣೈ, ಧನಂಜಯ್‌ ನೆಟ್ಟಿಬೈಲ್‌, ಸುರೇಶ್‌ ಅತ್ರಮಜಲು, ಪ್ರೀತಂ ಇಳಂತಿಲ, ಗೋಪಾಲ ದಡ್ಡು, ಕಿಶೋರ್‌ ನೀರಕಟ್ಟೆ, ಕಿಶನ್‌ ಕಾಂಚನ, ಹರೀಶ್‌ ಯತೀಶ್‌, ಸಂತೋಷ್‌ ಅಡೆಕ್ಕಲ್‌, ಜಯಂತಿ, ಜಯರಾಮ ಮೊದಲಾದವರು ಭಾಗವಹಿಸಿದ್ದರು. ಇದನ್ನೂ ಓದಿ: ಮಳೆಗಾಲದಲ್ಲಿ ದ್ವಿಪವಾಗುತ್ತೆ ಪಂಜ; ಗ್ರಾಮವಾಸ್ತವ್ಯದಲ್ಲಿ ಸಿಗುವುದೇ ಪರಿಹಾರ?

ಉಡುಪಿಯಲ್ಲಿ ಮಳೆ ಬಿಸಿಲಿನ ಕಣ್ಣುಮುಚ್ಚಾಲೆ: ಜಿಲ್ಲೆಯಲ್ಲಿ ಮಳೆ ಬಿಸಿಲಿನ ಕಣ್ಣುಮುಚ್ಚಾಲೆ ಮುಂದುವರಿದಿದ್ದು,.ದಿನವಿಡೀ ಮಳೆ, ಹಠಾತ್ತನೇ ಬರುತ್ತಿದ ಬಿಸಿಲು ಮತ್ತೆ ಮಳೆ  ಕೆಲವು ದಿನಗಳ ಸತತ ಮಳೆಯಿಂದ ಬೇಸತ್ತಿದ್ದ ಜನರು  ಸ್ವಲ್ಪ ನೆಮ್ಮದಿಯ ನಿಟ್ಟುಸಿರು ಬಿಡುತ್ತಿಂತೆ ಮತ್ತೆ ಮಳೆ ಸುರಿಯುವುದು ನಡೆದಿದೆ.  ಮಳೆಗೆ ಜಿಲ್ಲೆಯಲ್ಲಿ ಸುಮಾರು 22 ಮನೆಗಳಿಗೆ ಹಾನಿಯಾಗಿ 10.50 ಲಕ್ಷ ರು. ನಷ್ಟಸಂಭವಿಸಿದೆ. ಉಡುಪಿ ತಾಲೂಕಿನ ಪುತ್ತೂರು ಗ್ರಾಮದ ಜಯಂತಿ ಪ್ರಭು ಅವರ ಮನೆಯ ಗೋಡೆ ಕುಸಿದು 1 ಲಕ್ಷ ರು., ಹೆಬ್ರಿ ತಾಲೂಕಿನ ಬೇಳಂಜೆ ಗ್ರಾಮದ ರಾಧಾ ಪೂಜಾರಿ ಮನೆಗೆ 1 ಲಕ್ಷ ರು., ಕಾರ್ಕಳ ತಾಲೂಕಿನ ನೀರೆ ಗ್ರಾಮದ ಮೋವಿನ್‌ ರತನ್‌ ಮನೆಗೆ 1 ಲಕ್ಷ ರು., ಬ್ರಹ್ಮಾವರ ತಾಲೂಕಿನ ಚೇರ್ಕಾಡಿ ಗ್ರಾಮದ ಅನಿಲ್‌ ಕುಮಾರ್‌ ಮನೆಯ ಗೋಡೆ ಸಂಪೂರ್ಣ ಕುಸಿದು 1.50 ಲಕ್ಷ ರು. ನಷ್ಟವಾಗಿದೆ.ಕುಂದಾಪುರ ತಾಲೂಕಿನ ಸಿದ್ದಾಪುರ ಗ್ರಾಮದ ವನಜಾ ಅವರ ನಾಪತ್ತೆಯಾಗಿದ್ದ ಜಾನುವಾರು ಶವವಾಗಿ ಮನೆಯ ಸಮೀಪದ ಕೊಡ್ಗಿ ಪ್ರದೇಶದ ತೋಡಿನಲ್ಲಿ ಪತ್ತೆಯಾಗಿದೆ, ಅವರಿಗೆ 40 ಸಾವಿರ ರು. ನಷ್ಟವಾಗಿದೆ.

Latest Videos
Follow Us:
Download App:
  • android
  • ios