ಉಡುಪಿಯಲ್ಲಿ ಕರಕುಶಲ ಶೋರೂಮ್

ಉಡುಪಿಯಲ್ಲಿ ಕರಕುಶಲ ಶೋರೂಮ್ ಮಾಡಲಾಗುವುದು ಎಂದು ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷರು ಘೋಷಣೆ ಮಾಡಿದ್ದಾರೆ.

handicraft sales and-exhibition show room in udupi rbj

ಉಡುಪಿ, (ಜ.22): ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದಿಂದ ಉಡುಪಿಯಲ್ಲಿ 5 ಕೋಟಿ ರು.ಗಳ ವೆಚ್ಚದಲ್ಲಿ ಕರಕುಶಲ ವಸ್ತುಗಳ ಪ್ರದರ್ಶನ - ಮಾರಾಟ ಮಳಿಗೆಯನ್ನು ಹಾಗೂ ಕುಂದಾಪುರದಲ್ಲಿ ಉತ್ಪಾದನಾ ಘಟಕವನ್ನು ಆರಂಭಿಸಲಾಗುವುದು. ಮೂರು ತಿಂಗಳಲ್ಲಿ ಕಾರ್ಯ ಆರಂಭ ಗೊಳ್ಳಲಿದೆ ಎಂದು ನಿಗಮದ ಅಧ್ಯಕ್ಷ ಡಾ.ಬೇಳೂರು ರಾಘವೇಂದ್ರ ಶೆಟ್ಟಿ ತಿಳಿಸಿದ್ದಾರೆ.

ಅವರು ಶುಕ್ರವಾರ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಪಂಚಶತಮಾನೋತ್ಸವದ ಅಂಗವಾಗಿ ಆಯೋಜಿಸಲಾಗಿರುವ 6 ದಿನಗಳ ಕರಕುಶಲ ಮೇಳದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಉಡುಪಿಯೂ ಸೇರಿದಂತೆ 12 ಕಡೆಗಳಲ್ಲಿ ಮಳಿಗೆಗಳನ್ನು ಸ್ಥಾಪಿಸುವ ಉದ್ದೇಶವಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ  ಅವರು ಈಗಾಗಲೇ ಒಪ್ಪಿಗೆ ನೀಡಿದ್ದಾರೆ. ಎಂದರು.

ಉಡುಪಿ ಪರ್ಯಾಯೋತ್ಸವಕ್ಕೆ 500 ವರ್ಷ

ರಾಜ್ಯದ ಪರಂಪರೆ ಸೂಚಿಸುವ, ಹಂಪಿ, ಮೈಸೂರು ಅರಮನೆ, ಬೇಲೂರು, ಹಳೆಬೀಡಿನ ಪರಂಪರೆಯಲನ್ನು ಬಿಂಬಿಸುವ ವಸ್ತು ಗಳನ್ನು ತಯಾರಿಸುವಂತೆ ಕರಕುಶಲ ಕರ್ಮಿಗಳಿಗೆ ಮನವಿ ಮಾಡಿದ್ದೇನೆ ಎಂದು ಅವರು ತಿಳಿಸಿದರು.

ಕರಕುಶಲ ವಸ್ತುಗಳನ್ನು ತಯಾರಿಸಲು ಕುಶಲಕರ್ಮಿಗಳಿಗೆ, ಸಬ್ಸಿಡಿ ದರದಲ್ಲಿ ಕಚ್ಛಾಪರಿಕರಗಳನ್ನು ನೀಡಲಾಗುವುದು ಎಂದವರು ಹೇಳಿದರು.

ಪರ್ಯಾಯ ಅದಮಾರು ಮಠಾಧೀಶ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಹಾಗೂ ಸೋದೆ ವಾದಿರಾಜ ಮಠಾಧೀಶ ಶ್ರೀವಿಶ್ವವಲ್ಲಭ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು. 

Latest Videos
Follow Us:
Download App:
  • android
  • ios